ದಿವಂಗತ ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆ – 2024
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಯುವ ಸಾಹಿತಿಗಳಿಗಾಗಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಜಿಲ್ಲಾಮಟ್ಟದ ‘ಯುವ ಕಥಾ ಸ್ಪರ್ಧೆ’-2024 ಆಯೋಜಿಸಲಾಗಿದೆ. 18 ರಿಂದ 35 ವಯೋಮಿತಿಯ ಉಡುಪಿ ಜಿಲ್ಲೆಯ ಯುವಕ ಯುವತಿಯರು ಯಾರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆ ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ 30, 2024. ಸ್ಪರ್ಧೆಯ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ತಲಾ ರೂ.5000 ಹಾಗೂ […]
ಫೆ. 21ರಂದು ಕಜ್ಕೆ ಅನ್ನಪೂರ್ಣೆಶ್ವರಿ ದೇವಾಲಯ ಲೋಕಾರ್ಪಣೆ: ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶಿಲಾ ವಿಗ್ರಹ ನಿರ್ಮಾಣ
ಹೆಬ್ರಿ: ಸುತ್ತಲೂ ಅರಣ್ಯ ಪ್ರದೇಶವನ್ನು ಆವರಿಸಿರುವ ಕಜ್ಕೆಯಲ್ಲಿ ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನದ ಹೊತ್ತು ಈ ಸುಂದರವಾದ ಪುಣ್ಯಭೂಮಿಯಲ್ಲಿ ಭಿಕ್ಷೆ ಪಡೆದಿದ್ದರು ಎನ್ನುವ ಪ್ರತೀತಿ ಇದೆ. ಸಹಸ್ರಾರು ವರುಷಗಳಿಂದ ಭೂಗತವಾಗಿದ್ದ ಈ ಸ್ಥಳವು, ಪ್ರಸ್ತುತ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ಎಂಬವರು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಎರಡು ಎಕರೆ ಜಾಗವನ್ನು ದಾನವಾಗಿ ನೀಡಿರುತ್ತಾರೆ. ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಶಿಲಾಮಯ ದೇವಸ್ಥಾನವು ಐದು ಕೋಟಿ ರೂಪಾಯಿ […]
ಪುರಾತನ ‘ಪಕ್ಷಿಕೆರೆ’ ಗೆ ಪುನರುಜ್ಜೀವನ: ಪೇಪರ್ ಸೀಡ್ ಕಂಪನಿ ಪ್ರವರ್ತಕರಿಂದ ಒಂದೊಳ್ಳೆ ಕಾರ್ಯ
ಹಳೆಯಂಗಡಿ: ಇಲ್ಲಿಗೆ ಸಮೀಪದ ಪಕ್ಷಿಕೆರೆಯೆಂಬ ಊರು ಒಂದು ಕಾಲದಲ್ಲಿ ಆರಕ್ಕಿಂತಲೂ ಹೆಚ್ಚು ಕೆರೆಗಳನ್ನು ಹೊಂದಿದ್ದು, ಹಲವಾರು ಪಕ್ಷಿಗಳು ಈ ಕೆರೆಗಳಲ್ಲಿ ತಮ್ಮ ಬಾಯಾರಿಕೆ ತಣಿಸಿಕೊಳ್ಳುತ್ತಿದ್ದುದರಿಂದ ಈ ಸ್ಥಳಕ್ಕೆ ಪಕ್ಷಿಕೆರೆ ಎಂದೇ ಹೆಸರು ಬಂದಿತ್ತು. ಆದರೆ ಕೆರೆಗಳ ಬೀಡಾಗಿದ್ದ ಈ ಊರಿನಲ್ಲಿ ಈಗ ಹೇಳಿಕೊಳ್ಳುವುದಕ್ಕೂ ಒಂದೂ ಕೆರೆ ಇಲ್ಲ ಎಂಬಂತಾಗಿದೆ. ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಕೊಯಿಕುಡೆ ಎಂಬ ಪ್ರದೇಶವು ಪಕ್ಷಿಕೆರೆ ಎಂದು ಹೆಸರುವಾಸಿಯಾಗಿದ್ದು, ಇಲ್ಲಿ 77 ಸೆಂಟ್ಸ್ ವಿಸ್ತೀರ್ಣದ ಸುಮಾರು ಹತ್ತು ಅಡಿ ಆಳದ ಕೆರೆಯೊಂದು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು […]
ಅನ್ವೇಷಣಾ–2024: ಬಂಟಕಲ್ ಎಸ್.ಎಮ್.ವಿ.ಐ.ಟಿ.ಎಂ ನ ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳಿಗೆ ಬಹುಮಾನ; ಅಂತಿಮ ಸುತ್ತಿಗೆ ಆಯ್ಕೆ
ಉಡುಪಿ: “ಅನ್ವೇಷಣಾ–2024” ಎಂಬ ಸ್ಪರ್ಧೆಯು “ಆವಿಷ್ಕಾರಗಳಿಗೆ ಸೇತುವೆ ನಿರ್ಮಾಣ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಸಿನೋಪ್ಸಿಸ್, ಅಗಸ್ತ್ಯ ಅಂತರಾಷ್ಟ್ರೀಯ ಫೌಂಡೇಶನ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿಯಾಗಿ ಈ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತೀ ತಂಡದ ನಾಲ್ಕು ವಿದ್ಯಾರ್ಥಿಗಳಲ್ಲಿ ಇಬ್ಬರು ಸಮೀಪದ ಫ್ರೌಢಶಾಲೆಯ ವಿದ್ಯಾರ್ಥಿಗಳಾಗಿರಬೇಕು ಎಂಬ ನಿಯಮವು ಫ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಕರ್ನಾಟಕ ರಾಜ್ಯದ ನಾಲ್ಕು ವಲಯಗಳಲ್ಲಿ ಮೊದಲ ಹಂತದ […]
ರಾಜ್ಯ ಮೀನುಗಾರರ ಸಹಕಾರ ಸಂಘಗಳ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ
ಉಡುಪಿ: ಸರಕಾರದ ಅನುದಾನ, ಸಹಕಾರ ಸಿಗದೆ ಸಹಕಾರಿ ಕ್ಷೇತ್ರ ಕುಂಠಿತವಾಗಿದ್ದು ಮೀನುಗಾರಿಕೆ, ಒಳನಾಡು ಮೀನುಗಾರಿಕೆಯ ಪ್ರಗತಿ, ಭವಿಷ್ಯದ ಉದ್ಯೋಗ ಸೃಷ್ಟಿಗೆ ಉತ್ತೇಜನ ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು) ಅಧ್ಯಕ್ಷ ಹೆಚ್. ಜಿ. ಮಂಜಪ್ಪ ತಿಳಿಸಿದ್ದಾರೆ. ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ(ಬೆಂಗಳೂರು), ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು), ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ರಾಜ್ಯದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಕಾರ್ಯದಕ್ಷತೆ ಕುರಿತು ಉಡುಪಿ […]