ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಫೆಬ್ರವರಿ 14: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಒಳರೋಗಿಯಾಗಿ ದಾಖಲಾಗಿದ್ದ ಶಿವಕುಮಾರ್ (35) ಎಂಬ ವ್ಯಕ್ತಿಯು 2023ರ ಡಿಸೆಂಬರ್ 11 ರಂದು ಆಸ್ಪತ್ರೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. 168 ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹೆಬ್ರಿ: ವ್ಯಕ್ತಿ ನಾಪತ್ತೆ

ಉಡುಪಿ, ಫೆಬ್ರವರಿ 14: ಕೇರಳ ಮೂಲದ ಜೋನಿ ಸೆಬಸ್ಟೀನ್ (49) ಎಂಬ ವ್ಯಕ್ತಿಯು ಹೆಬ್ರಿ ತಾಲೂಕಿ ಅಲ್ಬಾಡಿ ಗ್ರಾಮದಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು ಫೆಬ್ರವರಿ 11 ರಂದು ಅಲ್ಲಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಸಪೂರ ಸದೃಢಕಾಯ ಮೈ ಕಟ್ಟು , ಬಿಳಿಯ ಗೋಧಿ ಮೈ ಬಣ್ಣ ಹೊಂದಿದ್ದು, ಇಂಗ್ಲೀಷ್ ಹಾಗೂ ಮಲಿಯಾಳಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಶಂಕರನಾರಯಣ ಪೊಲೀಸ್ ಠಾಣೆ ದೂ.ಸಂ:08259-280299, ಮೊ.ನಂ […]

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮದಲ್ಲಿ ಬಂದೂಕು ತೋರಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ಗ್ರಾಮಸ್ಥರಿಂದ ಬಲವಂತವಾಗಿ ಕಸಿದುಕೊಳ್ಳಲಾಗುತ್ತಿರುವ್ ಆರೋಪದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಪ.ಬಂಗಾಳದ ಸಂದೇಶಖಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಮೇಲೆ ಬಂದೂಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸುದ್ದಿ ವರದಿಗಳನ್ನು ಪರಿಶೀಲಿಸಿದ ನಂತರ “ತೀವ್ರವಾಗಿ ನಿರಾಶೆಗೊಂಡಿರುವುದಾಗಿ” ನ್ಯಾಯಮೂರ್ತಿ ಅಪೂರ್ವ ಸಿನ್ಹಾ ರೇ ಹೇಳಿದ್ದಾರೆ. […]

ಕರ್ಮಭೂಮಿಗೆ ಮರಳಿದ ಉದ್ಯಮಿ ಬಿ.ಆರ್.ಶೆಟ್ಟಿ

ಮಂಗಳೂರು: ಪ್ರಖ್ಯಾತ ಉದ್ಯಮಿ ಬಿ. ಆರ್ ಶೆಟ್ಟಿ ಮರಳಿ ಕರ್ಮಭೂಮಿಗೆ ತೆರಳಿದ್ದಾರೆ. ಬುಧ್ವಾರದಂದು ಯುಎಇಗೆ ಮರಳಿ ಆಗಮಿಸಿದ್ದು, ಕರ್ನಾಟಕ ಸಂಘ ದುಬೈ ತಂಡವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆ. ತುಳುನಾಡಿನ ಉಡುಪಿ ಜಿಲ್ಲೆಯಿಂದ ಯುಎಇಗೆ ಬಂದು ಯಶಸ್ವಿ ಉದ್ಯಮಿಯಾಗಿ ಸಾವಿರಾರು ಅನಿವಾಸಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಿದ್ದ ಬಿ.ಆರ್ ಶೆಟ್ಟಿಯವರು ಅಬುಧಾಬಿ ಸರ್ಕಾರ ಸೌಹಾರ್ದತೆಯ ಪ್ರತೀಕವಾಗಿ ನೀಡಿದ ಜಾಗದಲ್ಲಿ ಭವ್ಯ ಹಿಂದೂ ಮಂದಿರ ರಚನೆಯ ಸಮಿತಿಯ ಮುಖ್ಯಸ್ಥರಾಗಿ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇದೀಗ ಮಂದಿರ ಉದ್ಘಾಟನೆ ಸಂದರ್ಭದಲ್ಲೇ […]

ಜೆ.ಇ.ಇ ಮೈನ್ ಮೊದಲ ಹಂತದ ಫಲಿತಾಂಶ: ಜ್ಞಾನಸುಧಾದ ಏಳು ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್; 98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 18 ವಿದ್ಯಾರ್ಥಿಗಳು

ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.79 ಪರ್ಸಂಟೈಲ್, ಬಿಪಿನ್ ಜೈನ್ ಬಿ.ಎಂ. 99.75 ಪರ್ಸಂಟೈಲ್, ಚಿರಂತನ ಜೆ.ಎ. 99.70 ಪರ್ಸಂಟೈಲ್, ನಿಮೇಶ್ ಆರ್. ಆಚಾರ್ಯ 99.38 ಪರ್ಸಂಟೈಲ್, ಕ್ಷೀರಾಜ್.ಎಸ್ ಆಚಾರ್ಯ 99.28 ಪರ್ಸಂಟೈಲ್, ಶ್ರೀದ ಕಾಮತ್ 99.11 ಪರ್ಸಂಟೈಲ್ ಹಾಗೂ ರಿಷಿತ್‌ […]