ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಸಂಚಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ: ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಭಾರತವು ತಕ್ಷಣವೇ ಜಾರಿಗೆ ಬರುವಂತೆ ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಚಲನೆಯ ಆಡಳಿತವನ್ನು ಅಮಾನತುಗೊಳಿಸಿದೆ. ಇದರರ್ಥ ಇನ್ನು ಮುಂದೆ ಗಡಿ ಪ್ರದೇಶಗಳಲ್ಲಿ ವಾಸಿಸುವ ಭಾರತಕ್ಕೆ ಬರಲಿಚ್ಛಿಸುವ ಜನರಿಗೆ ವೀಸಾ ಅಗತ್ಯವಿರುತ್ತದೆ. ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಭಾರತದ ಈಶಾನ್ಯ ರಾಜ್ಯಗಳ ಜನಸಂಖ್ಯಾ ರಚನೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ ಮುಕ್ತ ಚಲನೆಯ ಆಡಳಿತವನ್ನು (FMR) ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ಅದಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ವ್ಯವಸ್ಥೆಯನ್ನು ರದ್ದು […]

ಮಂಗಳೂರಿನಿಂದ ಅಯೋಧ್ಯೆಗೆ ತೆರಳಲಿದೆ ಕೊಯಮತ್ತೂರು ಅಯೋಧ್ಯಾ ಧಾಮ್ ಆಸ್ತಾ ರೈಲು

ಮಂಗಳೂರು: ಮಂಗಳೂರು ನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ವಿಶೇಷ ರೈಲು ಸೇವೆಯನ್ನು ನೀಡಲಾಗುತ್ತಿದೆ. ರೈಲು ಸಂಖ್ಯೆ 06517 ಕೊಯಮತ್ತೂರು-ದರ್ಶನ್ ನಗರ-ಕೊಯಮತ್ತೂರು ಆಸ್ತಾ, ಫೆಬ್ರವರಿ 8 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಟು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಅಯೋಧ್ಯೆ ಜಂಕ್ಷನ್‌ಗೆ ಪ್ರಯಾಣಿಸಲಿದೆ. ಫೆಬ್ರವರಿ 8 ರಂದು ಸಂಜೆ 5:50 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಹೊರಡಲಿದೆ. ರೈಲು ಫೆಬ್ರವರಿ 11 ರಂದು ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ […]

ಬೊರಿವಿಲಿ-ದಹಿಸರ್ ಬಿಲ್ಲವರ ಅಸೋಸಿಯೇಶನ್ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

ಬೊರಿವಿಲಿ: ಹಳದಿ ಕುಂಕುಮ ಸುಮಂಗಲೆಯರ ಬರೇ ಸಂಕೇತವೆಂದು ತಿಳಿಯದೆ ಅದರ ಇತಿಹಾಸ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಹುಟ್ಟು ಜನ್ಮದಿಂದ ಜೀವನಪೂರ್ತಿ ಹಳದಿ ಕುಂಕುಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವ ವಸ್ತುವಾಗಿದೆ. ದೇವತಾ ಕಾರ್ಯಕ್ರಮದಲ್ಲಿ ತೀರ್ಥ ಪ್ರಸಾದದ ಅರಿವಾಣದಲ್ಲಿ ಯಾವಾಗಲೂ ಅರಸಿನ ಕುಂಕುಮ ಎರಡನ್ನು ಒಟ್ಟಿಗೆ ಇರುವುದು ಪ್ರತಿ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ಕಾಣ ಬಹದು. ಧಾರ್ಮಿಕತೆಯ ಪ್ರತಿ ಹಂತದಲ್ಲೂ ಅರಿಶಿನ ಕುಂಕುಮ ವಿಶೇಷ ಮಹತ್ವ ಪಡೆದೆ ಎಂದು ಸಮಾಜ ಸೇವಕಿ ಸರಸ್ವತಿ ರಾವ್ […]

ಮೀರಾ ಡಹಾಣೂ ಬಂಟ್ಸ್ ವಾರ್ಷಿಕ ಟರ್ಫ್ ಫುಟ್ ಬಾಲ್ ಪಂದ್ಯಾವಳಿ

ಬೊಯಿಸರ್: ಸ್ಪರ್ಧೆಗಳು ನಮ್ಮಲ್ಲಿನ ಕ್ರೀಡಾಮನೋಭಾವವನ್ನು ಹುರಿದುಂಬಿಸುತ್ತವೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಂತಹ ಕ್ರೀಡೆಗಳಲ್ಲಿ ಸ್ಪರ್ಧಿಸುವಲ್ಲಿನ ಹುಮ್ಮಸ್ಸು ನಮ್ಮಲ್ಲಿನ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಹಾಗೂ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಹೇಳಿದರು. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲಾ ಬೊಯಿಸರ್ ಪೂರ್ವದಲ್ಲಿನ ಸ್ಕೋರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರವಿವಾರ ಜರಗಿದ ಮೀರಾ ಡಹಾಣೂ ಬಂಟ್ಸ್ (ರಿ) ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್ ಉದ್ಘಾಟನೆಯ ಸಮಾರಂಭದಲ್ಲಿ […]

ಬೆಂಗಳೂರು: ಫೆ. 26-27 ರಂದು ರಾಜ್ಯಮಟ್ಟದ ಉದ್ಯೋಗ ಮೇಳ

ಬೆಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಬೆಂಗಳೂರು, ಇದರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶವನ್ನು ನೀಡುವ ಸಲುವಾಗಿ ಫೆಬ್ರವರಿ 26 ಮತ್ತು 27 ರಂದು ರಾಜ್ಯ ಮಟ್ಟದ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ-2024 ವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಎಲ್ಲಾ ರೀತಿಯ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು https://skillconnect.kaushalkar.com/ಲಿಂಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.