ಕುಂದಾಪುರ: ಮಹಿಳೆ ನಾಪತ್ತೆ
ಉಡುಪಿ: ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ನಿವಾಸಿ ಆಪ್ಸಾನಾ (23) ಎಂಬ ಮಹಿಳೆಯು ಜನವರಿ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಹೊಂದಿದ್ದು, ಉರ್ದು, ಹಿಂದಿ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂ: 08254-258233, ಮೊ.ನಂ:9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂ: 08254-251031, ಮೊ.ನಂ: 9480805434 […]
ಬ್ರಹ್ಮಾವರ: ವ್ಯಕ್ತಿ ನಾಪತ್ತೆ
ಉಡುಪಿ: ಬ್ರಹ್ಮಾವರ ತಾಲೂಕು ಪಾರಂಪಳ್ಳಿ ಗ್ರಾಮದ ನಿವಾಸಿ ಶರತ್ ರಾವ್ (39) ವ್ಯಕ್ತಿಯು ಜನವರಿ 18 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, 2526709, ಬ್ರಹ್ಮಾವರ ಪೋಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2561966, ಮೊ.ನಂ:9480805432 ಹಾಗೂ ಕೋಟ ಪೊಲೀಸ್ ಠಾಣೆಯ […]
ಬಂಟ್ವಾಳ: ಕಾರು- ಬೈಕ್ ನಡುವೆ ಭೀಕರ ಅಪಘಾತ – ಬೈಕ್ ಸವಾರ ಮೃತ್ಯು
ಬಂಟ್ವಾಳ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ನಡೆದಿದೆ. ಬೈಕ್ ಸವಾರ ಬೆಳ್ತಂಗಡಿಯ ರಮೇಶ್ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಪ್ರದೀಶ್ ಶೆಟ್ಟಿ ಸಾವನ್ನಪ್ಪಿದ ಯುವಕ. ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ ನಲ್ಲಿ ಬರುತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ […]
ಉಡುಪಿ: ಕಾಡಬೆಟ್ಟುವಿನ ಹುಲಿವೇಷದಾರಿ ಅಶೋಕ್ ರಾಜ್ ನಿಧನ
ಉಡುಪಿ: ಹುಲಿವೇಷದಾರಿ ಉಡುಪಿ ಕಾಡಬೆಟ್ಟುವಿನ ಅಶೋಕ್ ರಾಜ್ ಗುರುವಾರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಡುಪಿಯ ಕಾಡಬೆಟ್ಟುವಿನಲ್ಲಿ ಹುಲಿವೇಷ ತಂಡವನ್ನು ಕಟ್ಟಿ ಟೈಗರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದರು. 2023 ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಹುಲಿವೇಷ ಕಾರ್ಯಕ್ರಮ ನೀಡುತಿದ್ದ ಸಂಧರ್ಭದಲ್ಲಿ ಅಸ್ವಸ್ಥರಾಗಿದ್ದ ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆ ಬಳಿಕ ಉಡುಪಿ ಮತ್ತು ಮಣಿಪಾಲದ ಆಸ್ಪತ್ರೆಯ ಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಕಳೆದ 26 ವರ್ಷಗಳಿಂದ ಹುಲಿವೇಷ ಧರಿಸಿ ಅಷ್ಟಮಿ, […]
ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಿದ ರಾಜ್ಯ ಸರ್ಕಾರ: ಇಂದಿನಿಂದ ಬಿಯರ್ ದರದಲ್ಲಿ ಏರಿಕೆ
ಬೆಂಗಳೂರು: ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಇಂದಿನಿಂದ ಬಿಯರ್ ಬಾಟಲಿ ದರ 10 ರೂಪಾಯಿಂದ 15 ರೂಪಾಯಿ ಹೆಚ್ಚಳವಾಗಲಿದೆ. ಈ ಮೂಲಕ ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆ ಕಂಡಿದೆ. ರಾಜ್ಯ ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.185 ರಿಂದ 195ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಅಬಕಾರಿ ಇಲಾಖೆ ಜನವರಿ 20ಕ್ಕೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಕರ್ನಾಟಕ ಅಬಕಾರಿ ನಿಯಮ 1968 […]