ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ; ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ: ಜಿಲ್ಲಾಧಿಕಾರಿ

ಉಡುಪಿ: ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ದಿನಾಚರಣೆ ಹಾಗೂ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳಾಗಿದ್ದು, ಮತದಾನದ ಮೂಲಕ ಜನಪ್ರತಿನಿಧಿಗಳಲ್ಲಿ ಆಯ್ಕೆ ಮಾಡುವ ಅವಕಾಶವಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾರ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅವಶ್ಯ. […]

ಫೆಬ್ರವರಿ 6 ರ ಒಳಗೆ ವಾಯುಪಡೆ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಸಲ್ಲಿಸಿ

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು. ಆಸಕ್ತ ಅರ್ಜಿದಾರರು ಫೆಬ್ರವರಿ 6 ರ ಒಳಗಾಗಿ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2004 ರ ಜನವರಿ 02 ಮತ್ತು 2007 ರ ಜುಲೈ 02 ನಡುವೆ ಜನಿಸಿರುವ, ಪಿ.ಯು.ಸಿ. ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ. 50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ. 50 ಅಂಕಗಳೊAದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ- ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ […]

ದೊಡ್ಡಣಗುಡ್ಡೆ: ಜ. 26-28 ರ ವರೆಗೆ ತೋಟಗಾರಿಕಾ ಕ್ಷೇತ್ರದಲ್ಲಿ ಫಲಪುಷ್ಪ ಪ್ರದರ್ಶನ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನವು ಜನವರಿ 26 ರಿಂದ 28 ರ ವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜನವರಿ 26 ರಂದು ಬೆಳಗ್ಗೆ 8.30 ಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ […]

Kidzee ಮಣಿಪಾಲ್ ನಲ್ಲಿ ಕೋರ್ಡಿನೇಟರ್ ಹಾಗೂ ಟೀಚರ್ ಹುದ್ದೆಗಳು ಖಾಲಿ

ಮಣಿಪಾಲ: ಅನಂತನಗರದಲ್ಲಿರುವ Kidzee ಮಣಿಪಾಲ್ ನಲ್ಲಿ ಕೋರ್ಡಿನೇಟರ್ ಹಾಗೂ ಟೀಚರ್ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಯು ಇಂಗ್ಲೀಷ್ ಬಲ್ಲವರಾಗಿರಬೇಕು. ಆಸಕ್ತರು ಸಿವಿ ಮತ್ತು ರೆಸ್ಯೂಮ್ ಅನ್ನು [email protected] ಗೆ ಇ ಮೇಲ್ ಮಾಡಬಹುದು. ಸಂಪರ್ಕ: 9591982777

ಮೈಸೂರಿನ ಕೃಷ್ಣಶಿಲೆ, ಶಿಲ್ಪಿ ಅರುಣ್ ಯೋಗಿರಾಜ್: ಅಯೋಧ್ಯೆಯಲ್ಲಿ ಮುದ್ದು ‘ಬಾಲರಾಮ’ನಾದ ಅವಿಸ್ಮರಣೀಯ ಕ್ಷಣಕ್ಕೆ ವಿಶ್ವವೇ ಸಾಕ್ಷಿ!!

ಮೈಸೂರು: ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ರಾಮಲಲ್ಲಾ ಮೂರ್ತಿಯನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರದಂದು ಶಂಕುಸ್ಥಾಪನೆ ಮಾಡಲಾಯಿತು. ನೋಡಿದರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಮುದ್ದಾಗಿರುವ ಈನೂತನ ವಿಗ್ರಹವು 150-200 ಕೆಜಿ ತೂಕದ ಕಲ್ಲಿನಿಂದ ಮಾಡಲ್ಪಟ್ಟಿದೆ. ವಿಗ್ರಹವು ಐದು ವರ್ಷದ ಬಾಲಕ ರಾಮ ನಿಂತಿರುವ ಭಂಗಿಯಲ್ಲಿದೆ. ದೇಶದ ಇತರ ಇಬ್ಬರು ನುರಿತ ಕುಶಲಕರ್ಮಿಗಳಾದ ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರೊಂದಿಗೆ ಅರುಣ್ ಯೋಗಿರಾಜ್ ಅವರಿಗೆ ಶ್ರೀರಾಮನ ಮಗುವಿನ ರೂಪವನ್ನು ಬಿಂಬಿಸುವ […]