ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಡೆದರೆ ಎಲ್ಲರಿಗೂ ಒಳಿತು: ಭೀಮನಕಟ್ಟೆ ರಘುವರೇಂದ್ರತೀರ್ಥ ಸ್ವಾಮೀಜಿ
ದೊಡ್ಡಣ್ಣಗುಡ್ಡೆ: ಅಯೋಧ್ಯೆಯಲ್ಲಿ 5 ಶತಮಾನಗಳ ಅನಂತರ ಪುನಃ ಶ್ರೀರಾಮನಿಗೆ ಗುಡಿ ನಿರ್ಮಾಣಗೊಂಡು ಸಕಲ ಭಕ್ತರಿಗೆ ಹಬ್ಬದ ದಿನವಾಗಿದೆ. ಮನುಷ್ಯನಾಗಿ ಹೇಗೆ ಬಾಳಬೇಕೆಂದು ಪ್ರಪಂಚ ಮುಖಕ್ಕೆ ತೋರಿಸಿಕೊಡಲು ಧರೆಗಿಳಿದ ದೊಡ್ಡ ಅವತಾರವೇ ರಾಮಾವತಾರ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾದಂತೆ ನಮ್ಮ ಹೃದಯವೆಂಬ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಿಕೊಂಡರೆ ಎಲ್ಲವೂ ಒಳಿತಾಗುವುದು. ಶ್ರೀರಾಮನನ್ನು ಧ್ಯಾನಿಸುವಾಗ ಆತನ ಒಂದು ಗುಣ ಸ್ವಭಾವವನ್ನಾದರೂ ನಮ್ಮೊಳಗೆ ತುಂಬಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಶ್ರೀ ಮದಚ್ಚುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಭೀಮನಕಟ್ಟೆ ಮಠಾಧಿಪತಿ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಹೇಳಿದರು. […]
“ಸೂರ್ಯವಂಶಿ” ರಾಘವನ ಪ್ರತಿಷ್ಠೆಯ ಬಳಿಕ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಘೋಷಿಸಿದ ಮೋದಿ: ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳ ಮಾಹಿತಿ ಇಲ್ಲಿದೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಸೌರಶಕ್ತಿ ಯೋಜನೆಯಾದ “ಪ್ರಧಾನ ಮಂತ್ರಿ ಸೂರ್ಯೋದಯ” ( Pradhanmantri Suryoday Yojana) ಯೋಜನೆಯನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ದೇಶದ 1 ಕೋಟಿ ಮನೆಗಳ ಛಾವಣಿಯ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಲಾಗುವುದು. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ನಡೆಸಲಾಗಿದೆ. “ಪ್ರಪಂಚದ ಎಲ್ಲಾ ಭಕ್ತರು ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿಯನ್ನು ಪಡೆಯುತ್ತಾರೆ. ಇಂದು, ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಯ ಜೀವನದ ಶುಭ ಸಂದರ್ಭದಲ್ಲಿ, ಭಾರತದ […]
ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ರಾಮನಾಮ ತಾರಕ ಮಂತ್ರಯಾಗ ಸಂಪನ್ನ; ಪುಳಕಿತರಾದ ಭಕ್ತರು
ದೊಡ್ಡಣ್ಣಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಯೋಧ್ಯೆಯ ರಾಮ ಪ್ರತಿಷ್ಠಾಪನೆಯ ಸಂಭ್ರಮಾಚರಣೆಯ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಂಕಲ್ಪದಲ್ಲಿ ಸರ್ವರ ಹಿತಕ್ಕಾಗಿ ಶ್ರೀರಾಮನಾಮ ತಾರಕ ಮಂತ್ರಯಾಗ ಹಾಗೂ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಭೀಮಸೇತು ಮುನಿ ವೃಂದ ಮಹಾ ಸಂಸ್ಥಾನದ ಯತಿಗಳಾದ ರಘುವರೇಂದ್ರ ತೀರ್ಥ […]
ಫೆ.3 ರಿಂದ 5 ರ ವರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜಿಲ್ಲಾ ಪ್ರವಾಸ
ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಫೆಬ್ರವರಿ 3 ರಿಂದ 5 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.3 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು.2.30 ರಿಂದ 5 ಗಂಟೆಯ ವರೆಗೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬ ಆಗಿದ್ದಲ್ಲಿ ಅಥವಾ ನ್ಯಾಯಯುತವಾಗಿ ಮಾಡಿಕೊಡಬೇಕಾದ […]
ಶಂಕರನಾರಾಯಣ: ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡ ತಾಯಿ ಕೆರೆಗೆ ಬಿದ್ದು ಮೃತ್ಯು
ಶಂಕರನಾರಾಯಣ: ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡ ತಾಯಿ ಗದ್ದೆಯ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜ.22ರಂದು ಮಧ್ಯಾಹ್ನ ನಡೆದಿದೆ. ಮೃತರನ್ನು ವಾರಿಜಾ ಎಂದು ಗುರುತಿಸಲಾಗಿದೆ. ಇವರ ಮಗ ಅರುಣ್ ಎಂಬವರು ಜುಲೈ ತಿಂಗಳಲ್ಲಿ ವಂಡಾರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದರು. ಮಲ್ಪೆಯ ತೋನ್ಸೆ ಮನೆಯಲ್ಲಿದ್ದ ಅರುಣ್ ಸೋಮವಾರ ಮೃತಪಟ್ಟರು. ಈ ವಿಷಯ ತಿಳಿದ ತಾಯಿ ವಾರಿಜಾ ಆಘಾತದಲ್ಲಿ ಗದ್ದೆಯಲ್ಲಿದ್ದ ದನವನ್ನು ಮನೆಗೆ ತರುವ ವೇಳೆ ತೋಟದ ಬದಿಯಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ […]