ನಾಳೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ – ವೆತಾ ಉಡುಪಿ ಕೇಂದ್ರದ ಉದ್ಘಾಟನೆ
ಉಡುಪಿ: ಇಲ್ಲಿನ ಅಲಂಕಾರ್ ಚಿತ್ರಮಂದಿರದ ಹಿಂದಿರುವ ಮಹಾಲಸ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಜ.13 ರಂದು ಬೆಳಗ್ಗೆ 11 ಗಂಟೆಗೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ -ವೆತಾ ಉಡುಪಿ ಕೇಂದ್ರದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಗಳಾಗಿ ಬಿ ಇ ಒ ಅಶೋಕ್ ಕಾಮತ್, ಅಲೆವೂರು ಶಾಂತಿ ನಿಕೇತನ ಶಾಲೆಯ ದಿನೇಶ್ ಕಿಣಿ, ಮುಕುಂದಕೃಪ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಧ್ಯಾಯಿನಿ ಸುಜಾತ ಶೆಟ್ಟಿ ಉಪಸ್ಥತರಿರಲಿದ್ದಾರೆ ಎಂದು ಸುಪ್ರೀತಾ ಕಾಮತ್ ಹಾಗೂ ಪ್ರಶಾಂತ್ ಕಾಮತ್ ತಿಳಿಸಿದ್ದಾರೆ.
ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿನ 8 ಹಳೆ ವಿದ್ಯಾರ್ಥಿಗಳು ಸಿ ಎ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ತೇರ್ಗಡೆ.
ಕುಂದಾಪುರ: 2023 ನವೆಂಬರ್ ನಲ್ಲಿ ನಡೆದ ಸಿ ಎ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಶ್ರವಣ್ ಕಾಮತ್, ಶ್ರದ್ಧಾ ಬಿ ಸಾಲಿಯಾನ್, ಪಂಚಮಿ ಕಿಣಿ, ರಕ್ಷಿತಾ, ಅಪೇಕ್ಷಾ, ವಂದನಾ, ಶೀತಲ್ ಬಾಳಿಗಾ, ಶ್ರೀನಿವಾಸ ಮಲ್ಯ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ತಾಯಿ, ಮಗಳಿಗೆ ರಾಜ್ಯ ಮಟ್ಟದ ಫಿಲಾಟಲಿಯಲ್ಲಿ ಕಂಚಿನ ಪದಕ
ಬೆಂಗಳೂರು: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ 2024 ರಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹಣೆ “ಸ್ಪೆಷಲ್ ನ್ಯಾಷನಲ್ ಅಂಡ್ ಇಂಟರ್ ನ್ಯಾಷನಲ್ ಡೇಸ್” ಹಾಗೂ ಪ್ರಜ್ಞಾ ಜನಾರ್ದನ್ ಕೊಡವೂರು ಇವರ ಸಂಗ್ರಹದ “ಆರ್ಮಿ ಪೋಸ್ಟಲ್ ಕವರ್”ಗೆ ಕಂಚಿನ ಪದಕದ ಪುರಸ್ಕಾರ ದೊರೆತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್, ಬೆಂಗಳೂರು ದಕ್ಷಿಣ […]
ಶ್ರೀಪುತ್ತಿಗೆ ಪರ್ಯಾಯದಲ್ಲಿ ವಿದುಷಿ ಶುಭಶ್ರೀ ಅಡಿಗರವರಿಂದ ವೀಣಾವಾದನ
ಉಡುಪಿ: ಉಡುಪಿ ಶ್ರೀಪುತ್ತಿಗೆ ವಿಶ್ವಗೀತಾ ಪರ್ಯಾಯೋತ್ಸವ ಪ್ರಯುಕ್ತ ರಥಬೀದಿಯ ಆನಂದ ತೀರ್ಥಮಂಟಪದಲ್ಲಿ ವಿದುಷಿ ಶುಭಶ್ರೀ ಅಡಿಗ ರವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮವು ನಡೆಯಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್ – ಮೃದಂಗ, ವಿದ್ವಾನ್ ಮಾಧವಾಚರ್ – ತಬಲಾ ಮತ್ತು ಮಾಸ್ಟರ್ ಕಾರ್ತಿಕ್ – ರಿದಂ ಪ್ಯಾಡ್ ನಲ್ಲಿ ಸಹಕರಿಸಿದರು.
ಐ.ಎ.ಎಸ್ ವರ್ಸಸ್ ಐ.ಪಿ.ಎಸ್: ರೂಪಾ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದ ರೋಹಿಣಿ; ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿಕೆ
ನವದೆಹಲಿ: ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರದಂದು ನಡೆಸಿತು. ಡಿ. ರೂಪಾ ಅವರು ಕ್ಷಮೆ ಕೇಳಲೇಬೇಕು ಎಂದು ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಅವಹೇಳನಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬೇಕು. ಇದರಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ ಎಂದು ಡಿ. ರೂಪಾ ಅವರು ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದ್ದಾರೆ. ರೋಹಿಣಿ […]