ಉಡುಪಿ: ಉದಯ ಕಿಚನ್ ನಲ್ಲಿ ಬ್ರ್ಯಾಂಚ್ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ

ಉಡುಪಿ: ಅಡುಗೆ ಉಪಕರಣಗಳಿಗೆ ಹೆಸರಾಂತ ಮಳಿಗೆ ಉದಯ ಕಿಚನ್ ನಲ್ಲಿ ಬ್ರ್ಯಾಂಚ್ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಯಸ್ಸು 18 ಮೇಲ್ಪಟ್ಟಿದ್ದವರು. ಕ್ಷೇತ್ರದಲ್ಲಿ 2 ರಿಂದ 5 ವರ್ಷದ ಅನುಭವವಿರುವ ಯಾವುದೇ ಪದವಿ ಹೊಂದಿರುವ ಉದ್ಯೋಗಾಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಇ-ಮೇಲ್ ಮಾಡಬಹುದು. ಸಂಪರ್ಕ: 9379619026

ಕುಂದಾಪುರ: ವಾಹನ ದಟ್ಟಣೆ ಹಿನ್ನೆಲೆ; ನಗರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಕುಂದಾಪುರ: ನಗರದ ಒಳಗೆ ವಾಹನ ದಟ್ಟಣೆ ಹೆಚ್ಚಿರುವ ಹಿನ್ನೆಲೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳಾದ 1989ರ ಕಲಂ 221(ಎ)(2) ಮತ್ತು(5) ರ ಅನ್ವಯ ವಾಹನ ದಟ್ಟಣೆ ಇರುವ ಈ ಕೆಳಕಂಡ ಮಾರ್ಗಗಳ ರಸ್ತೆಗಳಲ್ಲಿ ಏಕಮುಖ ಸಂಚಾರ ರಸ್ತೆ ಹಾಗೂ ಘನ ವಾಹನಗಳ ಸಂಚಾರ ನಿಷೇಧ ರಸ್ತೆಯನ್ನಾಗಿ ಮಾರ್ಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಕುಂದಾಪುರ ಪುರಸಭಾ […]

ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ 59 ನೇ ವಾರ್ಷಿಕ ಕ್ರೀಡಾಕೂಟ

ಕೊಡವೂರು: ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ 59 ನೇ ವಾರ್ಷಿಕ ಕ್ರೀಡಾಕೂಟವು ಜ.8 ರಂದು ಸ್ಥಳೀಯ ಶಾಲಾ ಮೈದಾನದಲ್ಲಿ ಜರುಗಿತು. ನ್ಯಾಯವಾದಿ ಅನಿಲ್ ಕುಮಾರ್ ಪಾರಿವಾಳವನ್ನು ದಿಗಂತಕ್ಕೆ ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡೆ ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಕ್ರಿಯಾಶೀಲರನ್ನಾಗಿಸಿ ಶಿಸ್ತುಬದ್ಧ ಜೀವನ ನಮ್ಮಲ್ಲಿ ರೂಪುಗೊಳ್ಳುವಂತೆ ಮಾಡುತ್ತದೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಕ್ರೀಡೆ ಪೂರಕವಾಗಿರುತ್ತದೆ. ಕ್ರೀಡೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಮಾಡಿ ಆತ್ಮಸ್ಥೈರ್ಯವನ್ನು ಉದ್ದೀಪನಗೊಳಿಸುತ್ತದೆ ಎಂದರು. ಕ್ರೀಡಾಕೂಟ ಆರಂಭದ ಮುನ್ನ ಸ್ಥಳೀಯ […]

ಕುಂದಾಪುರ: ಉಳ್ತೂರು-ಕಟ್ಟೆಮನೆಯಲ್ಲಿ ಆಳುಪರ ಕಾಲದ ಶಾಸನೋಕ್ತ ವೀರಗಲ್ಲು ಪತ್ತೆ

ಉಡುಪಿ: ಕುಂದಾಪುರ ತಾಲೂಕಿನ, ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತವಾದ ಒಂದು ವೀರಗಲ್ಲು ಕಂಡುಬಂದಿದೆ ಎಂದು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ. ಶಾಸನವನ್ನು ಒಂದು ಆಯತಾಕಾರದ ಶಿಲೆಯ ಮೇಲೆ ಚಿತ್ರಪಟ್ಟಿಕೆ ಸಹಿತವಾಗಿ ಚಿತ್ರಿಸಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಚಿತ್ರಪಟ್ಟಿಕೆ ಇದ್ದು, ಅದರ ಕೆಳಭಾಗದಲ್ಲಿ ನಾಲ್ಕು ಸಾಲಿನ ಬರಹವನ್ನು ಬರೆಯಲಾಗಿದೆ. ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ಶಾಸನ ಶ್ರೀ ಗಣಾಧಿಪತಯೇ ನಮಃ ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ […]

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಿಮಿತ್ತ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘಕ್ಕೆ ರಜೆ ಘೋಷಣೆ: ಪ್ರಭಾಕರ ಪ್ರಭು

ಸಿದ್ದಕಟ್ಟೆ: ಜ. 22 ರಂದು ಅಯೋಧ್ಯೆಯ (Ayodhya) ಶ್ರೀರಾಮ ಜನ್ಮಸ್ಥಾನದಲ್ಲಿ ರಾಮಲಲ್ಲಾನ (Ram Lalla) ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ (Pran Pratishta) ನೆರವೇರಲಿದ್ದು, ಈ ಅಭೂತಪೂರ್ವ ಸಂಭ್ರಮದ ದಿನದಂದು ಪ್ರತಿ ಗ್ರಾಮದ ದೇವಸ್ಥಾನ, ದೈವಸ್ಥಾನ ಹಾಗೂ ಮನೆ, ಮಠಗಳಲ್ಲಿ ರಾಮಭಕ್ತರೆಲ್ಲರೂ ಒಟ್ಟುಗೂಡಿ ಭಾಗವಹಿಸಿ ಅಯೋಧ್ಯಾ ನಗರಿಯಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರಭು ಶ್ರೀ ರಾಮಚಂದ್ರನ ಕೃಪೆಗೆ ಪಾತ್ರರಾಗುವ ಹಿನ್ನಲೆಯಲ್ಲಿ ಸದ್ರಿ ದಿನದಂದು ಕಛೇರಿಗೆ ರಜೆ ನೀಡಲು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿ […]