ಕಾಪು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರ ಹುದ್ದೆ ಖಾಲಿ
ಉಡುಪಿ: ಕಾಪುವಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಯಾಂತ್ರಿಕ ವಿಭಾಗ ಮತ್ತು ಗಣಕತಂತ್ರ ವಿಭಾಗಗಳಲ್ಲಿ 4 ವರ್ಷಗಳ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳಿಂದ ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕಾಪು ಮೊ.ನಂ: 9480773870 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿ.ಎ. ಅಂತಿಮ ಪರೀಕ್ಷೆ: ಜ್ಞಾನಸುಧಾ ಕಾಲೇಜಿನ ಹಳೆ ವಿದ್ಯಾರ್ಥಿಗಳು ತೇರ್ಗಡೆ
ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸವಿತಾ ಶೆಣೈ ಮತ್ತು ತೇಜಸ್ ಆಚಾರ್ಯ ಇವರು ಐ.ಸಿ.ಎ.ಐ ನಡೆಸಿದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾರ್ಕಳದ ನಿವಾಸಿ ಕು.ಸವಿತಾ ಶೆಣೈ ಇವರು ಸುರೇಶ್ ಶೆಣೈ ಅಲೆವೂರು ಮತ್ತು ವಿದ್ಯಾವತಿ.ಎಸ್. ಶೆಣೈ ದಂಪತಿಗಳ ಪುತ್ರಿ ಹಾಗೂ ತೇಜಸ್ ಆಚಾರ್ಯ ನೆಲ್ಲಿಗುಡ್ಡೆಯ ಕುಕ್ಕುಂದೂರು ನಿವಾಸಿ ಲಕ್ಮೀ ನಾರಾಯಣ ಆಚಾರ್ಯ ಮತ್ತು ಶಾರದಾ ಆಚಾರ್ಯ ದಂಪತಿಗಳ ಪುತ್ರ. ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ […]
ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕಿಯ ಮಗು ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆ ಸಂಪೂರ್ಣ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ?
ಬೆಂಗಳೂರು: ಇಲ್ಲಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಅವರ ನಾಲ್ಕು ವರ್ಷದ ಮಗ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಕುಮಾರ್ ನಾಯ್ಕ್ ತಿಳಿಸಿದ್ದಾರೆ. ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಒಂದೋ ಬಟ್ಟೆ ಅಥವಾ ದಿಂಬು ಬಳಸಲಾಗಿದೆ. ಕತ್ತು ಹಿಸುಕಿದ ಕಾರಣ ಮಗು ಸಾವನ್ನಪ್ಪಿದೆ. ಕೈಗಳನ್ನು ಬಳಸಿ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ದಿಂಬು ಅಥವಾ ಇನ್ನಾವುದೋ ವಸ್ತುಗಳನ್ನು ಬಳಸಿದಂತೆ ತೋರುತ್ತಿದೆ. ಮಗುವಿನಲ್ಲಿನ ರಿಗರ್ ಮೋರ್ಟಿಸ್ ಪರಿಹಾರವಾಗಿದೆ […]
ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘದ 35 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಉಡುಪಿ: ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘ ದೊಡ್ಡಣಗುಡ್ಡೆ ಉಡುಪಿ ಇದರ 35 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ರಜತ ಮಹೋತ್ಸವ ಆದಿತ್ಯವಾರ ಸಂಜೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿತು. ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಅರ್ಚಕ ವೃಂದದವರು ನಡೆಸಿಕೊಟ್ಟರು. ಉಡುಪಿ ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘಟನೆಯಿಂದ ವ್ಯಕ್ತಿಯ ವಿಕಾಸ ಹಾಗೂ ಸಂಘದ ಐಕ್ಯತೆಗೆ ಸಾಮರಸ್ಯ ಶಕ್ತಿ […]
ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಬಿಡುಗಡೆ ಆದೇಶ ರದ್ದು ಮಹಿಳಾ ಸಮುದಾಯಕ್ಕೆ ಸಂದ ಜಯ: ವೆರೋನಿಕಾ ಕರ್ನೆಲಿಯೊ
ಉಡುಪಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಪಡಿಸಿದ ಸುಪ್ರಿಂ ಕೋರ್ಟ್ ನ ತೀರ್ಪು ಇಡೀ ಮಹಿಳಾ ಸಮುದಾಯಕ್ಕೆ ಸಂದ ಜಯವಾಗಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ. ದೇಶದ ಹಲವು ಮೂಲೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೊಂದ ಮಹಿಳೆಯರು ನ್ಯಾಯ ಸಿಗದೆ ಸಮಸ್ಯೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಅಂತಹ ಮಹಿಳೆಯರಿಗೆ ಅಶಾವಾದದಿಂದ ಬದುಕಲು ಪ್ರೇರಣೆ ನೀಡಿದಂತಾಗಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಹಾರಾಷ್ಟ್ರ […]