ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಹತ್ಯೆಗೈದು ಶವದ ಜೊತೆ ಕರ್ನಾಟಕಕ್ಕೆ ಪ್ರಯಾಣಿಸಿದ ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥಾಪಕಿ: ಚಿತ್ರದುರ್ಗದಲ್ಲಿ ಬಂಧನ
ಪಣಜಿ: ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್ ಸಂಸ್ಥಾಪಕಿಯಾಗಿರುವ 39 ವರ್ಷದ ಮಹಿಳೆಯೊಬ್ಬಳು ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದು ಮಗನ ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸಿರುವ ಘಟನೆ ವರದಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಹ ಸಂಸ್ಥಾಪಕಿ ಸುಚನಾ ಸೇಠ್ ಅವರನ್ನು ಸೋಮವಾರದಂದು ಕರ್ನಾಟಕದ ಚಿತ್ರದುರ್ಗದಲ್ಲಿ ಆಕೆಯ ಮಗನ ಶವದ ಚೀಲದ ಜೊತೆ ಬಂಧಿಸಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ವರದಿ ಹೇಳಿದೆ. ಆದರೆ ಕೊಲೆಯ ಉದ್ದೇಶ ಇನ್ನೂ ತಿಳಿದಿಲ್ಲ. […]
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಜ. 22ರಂದು ಅವಿಭಜಿತ ದ.ಕ ಜಿಲ್ಲೆಯ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ ವಿತರಣೆ
ಉಡುಪಿ/ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Ayodhya Ram Lalla Pran Pratishta) ದಿನಗಣನೆ ಆರಂಭಗೊಂಡಿದ್ದು, ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಜ. 22ರಂದು ದ.ಕ – ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಯಾ ಊರಿನ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ರಾಮ ಮಂದಿರ ಪ್ರತಿಷ್ಠಾಪನೆಯ ನೇರವೀಕ್ಷಣೆಗಾಗಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ರಾಮನಾಪ ಜಪ, ಭಜನೆ ಸಂಕೀರ್ತನೆ, ಪಾನಕ, […]
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಂದ ಶ್ರೀಕೃಷ್ಣ ಮಠ ಭೇಟಿ
ಉಡುಪಿ: ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣನ್ ಎಚ್ ಅವರು ಕುಟುಂಬ ಸಮೇತರಾಗಿ ಶ್ರೀ ಕೃಷ್ಣ ಮಠಕ್ಕಾಗಮಿಸಿ ದೇವರ ದರ್ಶನ ಪಡೆದುಕೊಂಡು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಗಳಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಜಿ.ಎಂ. ವಿನಯ ಭಟ್, ನಿರ್ದೇಶಕಬಾಲಕೃಷ್ಣ ಅಲ್ಸೇ ,ಪಿ.ಆರ್.ಓ ಮಾಧವ ವಿ.ಪಿ. ,ಸಿ.ಎಸ್.ಓ ನಾಗರಾಜ ಭಟ್, ಉಡುಪಿ ಎ.ಜಿ.ಎಂ.ರಾಜಗೋಪಾಲ್ ಹಾಗೂ ಪರ್ಯಾಯ ಮಠ ದಿವಾನ ವರದರಾಜ ಭಟ್, ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆ ಕುರಿತು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರ ಸಭೆ
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜ. 7 ರಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಹಾಗೂ ವಿವಿಧ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ಮುಂಬರುವ ಲೋಕಸಭಾ ಚುನಾವಣೆ, ಉಡುಪಿ ನಗರಸಭೆ ಚುನಾವಣೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಬೂತ್‌ಗಳ ಸಮಿತಿ ರಚನೆ, ಪಕ್ಷ ಸಂಘಟನೆ, ಕರ್ನಾಟಕ ರಾಜ್ಯದ ವಿವಿಧ ನಿಗಮ ಮಂಡಳಿಗಳ ಸ್ಥಾನವನ್ನು ಕಾರ್ಯಕರ್ತರಿಗೆ ದೊರಕಿಸುವ ಬಗ್ಗೆ, ನಾಮನಿರ್ದೇಶಿತ ಸ್ಥಾನಗಳ ಬಗ್ಗೆ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು […]
ಕಾರ್ಕಳ: ಸರಕಾರಿ ಜಾಗ ಒತ್ತುವರಿ ಆರೋಪ; ಗಡಿ ಗುರುತು ಮಾಡುವಂತೆ ಹಿಂಜಾವೇ ಒತ್ತಾಯ
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಚರ್ಚ್ ಮುಂಭಾಗದಲ್ಲಿ ನಡೆಯುತ್ತಿರುವ ಪ್ರಾಂಗಣ ವಿಸ್ತರಣೆಯ ಕಾಮಗಾರಿ ನಡೆಯುತ್ತಿರುವ ಸ್ಥಳವು ಸರಕಾರಿ ಜಾಗವಾಗಿದ್ದು, ಕಂದಾಯ ಅಧಿಕಾರಿಗಳು ತಕ್ಷಣವೇ ಚರ್ಚ್ ಸುತ್ತಮುತ್ತಲಿನ ಸ್ಥಳದಲ್ಲಿ ಗಡಿ ಗುರುತಿಸಬೇಕು ಹಾಗೂ ಸರಕಾರಿ ಜಾಗವನ್ನು ಸಂರಕ್ಷಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯು ಕಾರ್ಕಳ ತಹಶೀಲ್ದಾರ್ ನರಸಪ್ಪ ಇವರಿಗೆ ಜ. 8 ರಂದು ಮನವಿ ಸಲ್ಲಿಸಿದೆ. ಚರ್ಚ್ ನಡೆಸುವ ಜಾತ್ರೆಗೆ ಅಡ್ಡಿಇಲ್ಲ. ಆದರೆ ಮುಂದಿನ ಎರಡು ವಾರದ ಒಳಗೆ ಆಕ್ರಮಿತ ಸರಕಾರಿ ಜಾಗಗಳಲ್ಲಿ ಗಡಿ ಗುರುತು ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ […]