NEET PG ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ: ಜುಲೈ 7 ರಂದು ಪರೀಕ್ಷೆ; ಆಗಸ್ಟ್ 15 ರಂದು ಅರ್ಹತಾ ಕಟ್-ಆಫ್

ನವದೆಹಲಿ: ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) 2024 ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಸ್ನಾತಕೋತ್ತರ (NEET PG) ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ, NEET PG 2024 ಪರೀಕ್ಷೆಯು ಜುಲೈ 7 ರಂದು ನಡೆಯಲಿದ್ದು ಅರ್ಹತೆಯ ಕಟ್-ಆಫ್ ಅನ್ನು ಆಗಸ್ಟ್ 15 ಕ್ಕೆ ನಿಗದಿಪಡಿಸಲಾಗಿದೆ. ಆರಂಭದಲ್ಲಿ ಮಾರ್ಚ್ 3ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಯನ್ನು ಈಗ ಜುಲೈ 7 ರಂದು ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಏತನ್ಮಧ್ಯೆ, ರಾಷ್ಟ್ರೀಯ […]

ಬಿಜೆಪಿ ಪಕ್ಷದ ಆಡಳಿತವಿರುವ ನಗರಸಭೆಗೆ ಮುತ್ತಿಗೆ ಹಾಕುವುದು ಹಾಸ್ಯಾಸ್ಪದ: ರಮೇಶ್ ಕಾಂಚನ್

ಉಡುಪಿ: ತಮ್ಮದೇ ಪಕ್ಷದ ಆಡಳಿತವಿರುವ ಉಡುಪಿ ನಗರಸಭೆಯ ವಿರುದ್ದ ಮುತ್ತಿಗೆ ಹಾಕಲು ಹೊರಟಿರುವ ನಗರ ಬಿಜೆಪಿ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ವರ್ತನೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ. 35 ನಗರಸಭಾ ವಾರ್ಡ್‌ಗಳಿರುವ ಉಡುಪಿ ನಗರಸಭೆಯಲ್ಲಿ 32 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದ್ದು ಪ್ರತಿ ತಿಂಗಳಿಗೊಮ್ಮೆ ಆಡಳಿತ ಪಕ್ಷದ ಸದಸ್ಯರನ್ನು ಸೇರಿಸಿ ಅಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಿದ್ದರೂ […]

ಜ. 23 ರಂದು ಪಿಎಸ್‌ಐ ಮರು ಪರೀಕ್ಷೆ ನಿಗದಿ: ಅಭ್ಯರ್ಥಿಗಳಿಗಾಗಿ ಸೂಚನೆ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ

ಬೆಂಗಳೂರು: ನೇಮಕಾತಿ ಹಗರಣದಿಂದಾಗಿ ರದ್ದಾಗಿದ್ದ ಕರ್ನಾಟಕ ಪೊಲೀಸ್‌ ಇಲಾಖೆಯ ಸಿವಿಲ್‌ ಸಬ್‌ ಇನ್ಸ್‌ಪೆಕ್ಟರ್‌ (PSI) ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 23ರಂದು ಪರೀಕ್ಷೆ ನಿಗದಿ ಪಡಿಸಿದೆ. ಈ ಹಿಂದೆ ಪರೀಕ್ಷೆ ನಡೆಸಿದ್ದು ನೇಮಕಾತಿಯಲ್ಲಿ ಹಗರಣ ನಡೆದ ಕಾರಣ ರದ್ದುಪಡಿಸಲಾಗಿತ್ತು. ಈಗ ಹೊಸ ದಿನಾಂಕವನ್ನು ನಿಗದಿಪಡಿಸಿ ಪಿಎಸ್‌ಐ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಸಂದರ್ಭ ಹಲವಾರು ಸೂಚನೆಗಳನ್ನು ನೀಡಲಾಗಿದ್ದು ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ರಮ್ಯಾ ತಿಳಿಸಿದ್ಧಾರೆ. […]

CA ಅಂತಿಮ ಮತ್ತು ಮಧ್ಯಂತರ ಪರೀಕ್ಷೆ ಫಲಿತಾಂಶ ಪ್ರಕಟ: ಅಧಿಕೃತ ವೆಬ್ ಸೈಟ್ ನಲ್ಲಿ ಪರಿಶೀಲಿಸಿ

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಇಂದು ಚಾರ್ಟರ್ಡ್ ಅಕೌಂಟೆನ್ಸಿ (CA) ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಸಂಸ್ಥೆಯು ಈ ಪರೀಕ್ಷೆಯನ್ನು ನವೆಂಬರ್ 2023 ರಲ್ಲಿ ನಡೆಸಿತು. CA ಅಂತಿಮ ಮತ್ತು ಮಧ್ಯಂತರ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ತನ್ನ ರೋಲ್ ನಂಬರ್ ಜೊತೆಗೆ ನೋಂದಣಿ ಸಂಖ್ಯೆಯನ್ನು ನಮೂದಿಸಿ ICAI ನ ಅಧಿಕೃತ ವೆಬ್‌ಸೈಟ್ https://icai.nic.in/caresult/ ನಲ್ಲಿ ಪರಿಶೀಲಿಸಬಹುದು.

ಮಂಗಳೂರು: ಎಂ.ಐ.ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕ್ಯಾನ್ಸರ್ ಸಹಾಯವಾಣಿ ಲೋಕಾರ್ಪಣೆ

ಮಂಗಳೂರು: ಕ್ಯಾನ್ಸರ್ ಬಗ್ಗೆ ಭಯಬೇಡ, ಅರಿವಿರಲಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ಸಹಾಯವಾಣಿಯನ್ನುಮಂಗಳೂರಿನಲ್ಲಿ ಎಂ.ಐ.ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರದಂದು ಲೋಕಾರ್ಪಣೆಗೊಳಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ ರಿಷ್ಯಂತ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಹಾಯವಾಣಿಗೆ ಅಧಿಕೃತ ಚಾಲನೆಯನ್ನು ನೀಡಿ ಮಾತನಾಡಿ ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಜನರಿಗಿರುವ ಭಯ, ತಪ್ಪು ತಿಳುವಳಿಕೆ, ಗೊಂದಲಗಳನ್ನು ಹೋಗಲಾಡಿಸಿ ಅರಿವು ಮೂಡಿಸಿ ಆರಂಭಿಕ ಹಂತದಲ್ಲಿಯೆ ಜನರು ಎಚ್ಚರ ಗೊಳ್ಳುವಂತೆ ಮಾಡುವುದು ಸಮಾಜದ ಜನರಿಗೆ ಸಹಾಯಹಸ್ತ ಚಾಚುವುದು ಇದರ ಪ್ರಮುಖ ಉದ್ದೇಶ. ಎಂ.ಐ. […]