ಹೀರೋ ಶಕ್ತಿ ಮೋಟರ್ಸ್ ನಲ್ಲಿ ಜಿಲ್ಲೆಯ ಪ್ರಪ್ರಥಮ ಹಾರ್ಲೆ ಡೇವಿಡ್ ಸನ್- X440 ಬೈಕ್ ಅನಾವರಣ
ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಕರಾವಳಿ ಜಂಕ್ಷನ್ ಬಳಿ ಶ್ರೀರಾಮದರ್ಶನ ಕಟ್ಟಡದಲ್ಲಿರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ಹಾರ್ಲೆ ಡೇವಿಡ್ ಸನ್- X440 ಬೈಕ್ ಗಳನ್ನು ಶನಿವಾರದಂದು ಅನಾವರಣಗೊಳಿಸಲಾಯಿತು. ಹಾರ್ಲೆ ಡೇವಿಡ್ ಸನ್- X440 ಪ್ರಥಮ ಗ್ರಾಹಕರಾದ ಶಯಾನ್ ಕ್ರಾಸ್ತಾ, ರೋಲ್ಸನ್ ಡಿ ಅಲ್ಮೇಡಾ ಹಾಗೂ ನಿತ್ಯಾನಂದ ಕೇಶವ ಮೇಸ್ತ ಇವರಿಗೆ ಬೈಕ್ ಗಳನ್ನು ಕಂಪನಿಯ ನಿರ್ದೇಶಕ ವಿಜಯ್ ಕರ್ಣೆ ಹಸ್ತಾಂತರಿಸಿದರು. ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಹಾಲೆ ಡೇವಿಡ್ ಸನ್- X440 […]
ಉಡುಪಿ ಪುತ್ತಿಗೆ ಪರ್ಯಾಯೋತ್ಸವ: ಜ.8ರಂದು ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರಸನ್ಮಾನ
ಉಡುಪಿ: ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಸುಶ್ರೀಂದ್ರತೀರ್ಥ ಶ್ರೀಪಾದರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ ಜನವರಿ 8ರ ಸೋಮವಾರ ಸಂಜೆ 7 ಗಂಟೆಗೆ ಉಡುಪಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನಡೆಯಲಿದೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು. ಉಡುಪಿಯ ಪುತ್ತಿಗೆ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳು ಜನವರಿ 18ರಂದು ತಮ್ಮ ಶಿಷ್ಯ […]
ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ – ಇಬ್ಬರ ಬಂಧನ
ಉಡುಪಿ: ನಗರದ ಲಾಡ್ಜ್ ಒಂದರಲ್ಲಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೂಡನಿಡಂಬೂರು ಗ್ರಾಮದ ಮೀನು ಮಾರ್ಕೆಟ್ ಬಳಿ ಇರುವ ಕಾರ್ತಿಕ್ ಟವರ್ನಲ್ಲಿರುವ ಎಸ್.ಎಸ್ ರೆಸಿಡೆನ್ಸಿಯಲ್ಲಿ ಮಹಿಳೆಯರನ್ನು ಕರೆಸಿ ಅಕ್ರಮವಾಗಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಧು ಹಾಗೂ ರೂಂ ಬಾಯ್ ಸುಕುಮಾರ್ ಎಂಬವರನ್ನು ವಶಕ್ಕೆ ಪಡೆದು, ಅವರ ವಶದಲ್ಲಿದ್ದ ಸೊತ್ತುಗಳನ್ನು […]
ಕುಂದಾಪುರ: ಲಕ್ಷಾಂತರ ಮೌಲ್ಯದ ಅಡಿಕೆ ಕಳವು – ಮೂವರ ಬಂಧನ
ಕುಂದಾಪುರ: ತಾಲೂಕಿನ ಅಂಪಾರು ಗ್ರಾಮದ ನೈಲಕೊಂಡ ಕೆ. ಉಮೇಶ ಎಂಬವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಲಕ್ಷಾಂತರ ಮೌಲ್ಯದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾವ್ರಾಡಿ ಗ್ರಾಮದ ಇಮ್ರಾನ್ (19), ಖಾಜಾ ಅಖೀಬ್ (19) ಹಾಗೂ ಮುಝಾಫರ್ (26) ಎಂದು ಗುರುತಿಸಲಾಗಿದೆ. ಡಿ. 14ರಂದು ಕೆ. ಉಮೇಶ ಅವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಸುಮಾರು 1 ಲಕ್ಷ ಮೌಲ್ಯದ ಸುಮಾರು 16 ಚೀಲದಷ್ಟು ಸಿಪ್ಪೆ ಅಡಿಕೆ (480 ಕೆ.ಜಿ)ಯನ್ನು […]
ಅಸಂಘಟಿತ ವಲಯದ ಕಾರ್ಮಿಕರ ಗ್ರಾಚ್ಯುಟಿ ಪಾವತಿ ಕಾಯ್ದೆಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರು ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಚ್ಯುಟಿ ಪಾವತಿ ಕಾಯ್ದೆ 2024ನ್ನು ಜಾರಿಗೆ ತರುವ ಕಾರ್ಮಿಕ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕಾಯ್ದೆಯ ಅನುಷ್ಠಾನದಿಂದ ಕಾರ್ಖಾನೆಗಳು, ಅಂಗಡಿಗಳು ಮತ್ತು ಇತರ ವಾಣಿಜ್ಯ ಮತ್ತು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಸಹಾಯವಾಗುತ್ತದೆ. ಸಂಘಟಿತ ವಲಯದಲ್ಲಿನ ಪ್ರಾವಿಡೆಂಟ್ ಫಂಡ್ ಸೌಲಭ್ಯದ ರೀತಿಯಲ್ಲಿ ಅವರು ವಲಯದ ಯಾವುದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ವರ್ಷಗಳ ಗ್ರಾಚ್ಯುಟಿಯನ್ನು […]