ಜ.26ರ ವರೆಗೆ ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ಭರ್ಜರಿ ಕೊಡುಗೆಗಳು.
ಉಡುಪಿ: ಉಡುಪಿ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು, ಇನ್ನೂ ಕೇಲವು ದಿನಗಳು ಮಾತ್ರ ಉಳಿದಿವೆ. ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಲ್ಲಾಳ್ ಮೊಬೈಲ್ಸ್ ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ & ವಿನ್ […]
ಉಡುಪಿ ಶ್ರೀಕೃಷ್ಣ ಪರ್ಯಾಯೋತ್ಸವ: ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ವಹಿಸಿ – ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ
ಉಡುಪಿ: ಜನವರಿ 8 ರಿಂದ 18 ರ ವರೆಗೆ ಶ್ರೀಕೃಷ್ಣ ಮಠ ಪರ್ಯಾಯ ಮಹೋತ್ಸವ ಹಿನ್ನೆಲೆ, ನಗರ ವ್ಯಾಪ್ತಿಯಲ್ಲಿ ಪ್ರವಾಸಿಗರು, ಭಕ್ತಾಧಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿ, ಸಂಚಾರದಲ್ಲಿ ವ್ಯತ್ಯಯವಾಗದಂತೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ […]
ಕೋಟೇಶ್ವರ: ಕಾರು ಢಿಕ್ಕಿ ಹೊಡೆದು ಚಾಲಕನೋರ್ವ ಮೃತ್ಯು
ಕುಂದಾಪುರ: ಕಾರು ಢಿಕ್ಕಿ ಹೊಡೆದ ಪರಿಣಾಮ ಚಾಲಕನೋರ್ವ ಮೃತಪಟ್ಟ ಘಟನೆ ಕೋಟೇಶ್ವರದ ಅಂಕದಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತ ಲಾರಿ ಚಾಲಕನನ್ನು ಲಾಡಸಾಬ್ ನದಾಫ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯ ಟಯರ್ ಪಂಚರ್ ಆಗಿದ್ದು, ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ ಚಾಲಕ ನದಾಪ್ ಟಯರ್ ಚೆಕ್ ಮಾಡುತ್ತಿದ್ದರು. ಈ ವೇಳೆ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗದಿಂದ ಬಂದ ಕಾರು ನದಾಫ್ ಗೆ ಹಿಂದಿನಿಂದ […]
ಕರಾವಳಿ-ಮಲೆನಾಡಿನಲ್ಲಿ ಅಕಾಲಿಕ ಮಳೆ: ಕಾಫಿ, ಅಡಿಕೆ ಬೆಳೆಗಾರರಲ್ಲಿ ಆತಂಕ
ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಮಳೆ ನಿರೀಕ್ಷಿಸದ ರೈತರು ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ಅದರಲ್ಲೂ ಇದು ಕಾಫಿ ಬೆಳೆಯ ಸಮಯವಾಗಿದ್ದು, ಕಟಾವು ಮಾಡಿರುವ ಕಾಫಿ ಬೆಳೆ ಕೂಡ ಮಳೆಗೆ ಹಾನಿಯಾಗುವ ಭೀತಿ ಎದುರಾಗಿದೆ. ಕೊಡಗಿನ ನಾಪೋಕ್ಲು ಹಾಗೂ ಮಡಿಕೇರಿ ಭಾಗದಲ್ಲಿ ನಿರಂತರ ಮಳೆ ಬೀಳುತ್ತಿದ್ದು, ಕಾಫಿ ಹಣ್ಣುಗಳು ಹಾಳಾಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಗಾಬರಿಯಾಗಿದ್ದಾರೆ. ಚಿಕ್ಕಮಗಳೂರು,ಕೊಡಗು ಹಾಗೂ ಮಡಿಕೇರಿಯ ಕೆಲವು ಭಾಗಗಳಲ್ಲಿ ಕಾಫಿ ಕೊಯ್ಲು ಮಾಡಿ ಒಣಗಲು […]
ಉಡುಪಿ ಪರ್ಯಾಯ ಹಿನ್ನೆಲೆ ಉಜಿರೆ ಎಸ್.ಡಿ.ಎಸ್ಂ ಕಾಲೇಜಿನ ಸಹಸ್ರ ವಿದ್ಯಾರ್ಥಿಗಳಿಗೆ ಗೀತಾ ಲೇಖನ ದೀಕ್ಷೆ
ಮಂಗಳೂರು: ಪುತ್ತಿಗೆ ಮಠದ ಪರ್ಯಾಯ ಹಿನ್ನೆಲೆಯಲ್ಲಿ ಪರ್ಯಾಯ ಪೀಠವನ್ನೇರುತ್ತಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಯೋಜನೆಯಾದ ಕೋಟಿ ಗೀತಾ ಯಜ್ಞದ ಅಂಗವಾಗಿ ಉಜಿರೆಯಲ್ಲಿ ಸಹಸ್ರ ವಿದ್ಯಾರ್ಥಿಗಳಿಗೆ ಗೀತಾ ಲೇಖನ ದೀಕ್ಷೆ ನೀಡಲಾಯಿತು. ಉಜಿರೆಯ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ಪುತ್ತಿಗೆ ಪರ್ಯಾಯದ ಕೋಟಿ ಗೀತಾ ಲೇಖನ ಯಜ್ಞದ ಅಂಗವಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸಹಸ್ರ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ ನೀಡುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ […]