ಕರಸೇವಕರ ಬಂಧನ ವಿರುದ್ಧ ಠಾಣೆ ಎದುರು ಧರಣಿ ಪ್ರಾರಂಭಿಸಿದ ಸುನಿಲ್ ಕುಮಾರ್: ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ರಾಮ ಮಂದಿರ ಹೋರಾಟದಲ್ಲಿ ಕರಸೇವಕರಾಗಿದ್ದ ಶ್ರೀಕಾಂತ್ ಪೂಜಾರಿಯವರನ್ನು 30 ವರ್ಷಗಳ ಬಳಿಕ ಬಂಧಿಸಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಕಾಂತ್ ಪೂಜಾರಿ ಬಂಧನವನ್ನು ವಿರೀಧಿಸಿ ಬಿಜೆಪಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಸುನಿಲ್ ಕುಮಾರ್ ಇಂದು ಬೆಳಗ್ಗೆ ಏಕಾಂಗಿಯಾಗಿ ಧರಣಿ […]
ತಮಿಳುನಾಡಿನಲ್ಲಿ ಇವಿ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಟೆಸ್ಲಾ ಪ್ರತಿಸ್ಪರ್ಧಿ ವಿನ್‌ಫಾಸ್ಟ್?
ಚೆನ್ನೈ: ಟೆಸ್ಲಾ ಮತ್ತು ಚೀನಾದ ಬಿವೈಡಿ ಕಂಪನಿಯ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ವಿನ್‌ಫಾಸ್ಟ್ ತನ್ನ ಮೊದಲ ಭಾರತೀಯ ಉತ್ಪಾದನಾ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಂಪನಿಯ ಹೊಸ ಸ್ಥಾವರವು ತೂತುಕುಡಿ ನಗರದಲ್ಲಿ ತೆರೆಯಲಿದ್ದು, ಇವಿಗಳಿಗಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿಗಳನ್ನು ಉತ್ಪಾದಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. “ಹಲವಾರು ವಿನ್‌ಫಾಸ್ಟ್ ಅಧಿಕಾರಿಗಳು ಸೈಟ್‌ಗಳನ್ನು ಪರಿಶೀಲಿಸಲು ತಮಿಳುನಾಡಿನ ತೂತುಕುಡಿ ಜಿಲ್ಲೆಗೆ ಭೇಟಿ ನೀಡಿದ್ದಾರೆ” ಎಂದು ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ವಿನ್‌ಫಾಸ್ಟ್ […]
ಮುಖ್ಯಮಂತ್ರಿ ಪುತ್ರ ಯತೀಂದ್ರ ಹೇಳಿಕೆಗೆ ಪೇಜಾವರ ಸ್ವಾಮೀಜಿ ತಿರುಗೇಟು
ವಿಜಯಪುರ: ಬಿಜೆಪಿ ಮತ್ತು ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿವೆ ಎಂಬ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. […]
ಮಾಹೆ: ಜ 4 ರಿಂದ 6 ರವರೆಗೆ ಭಾರತೀಯ ಮೂಲದ ಅಮೇರಿಕಾ ವೈದ್ಯರ ಜಾಗತಿಕ ಆರೋಗ್ಯ ಶೃಂಗ ಸಭೆ
ಮಣಿಪಾಲ: ಅಮೆರಿಕನ್ ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ (AAPI) – ಗ್ಲೋಬಲ್ ಹೆಲ್ತ್ ಶೃಂಗಸಭೆಯು, ಮಾಹೆ ಸಹಯೋಗದೊಂದಿಗೆ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಜನವರಿ 4 ರಿಂದ 6 ರವರೆಗೆ ನಡೆಯಲಿದೆ. 100 ಕ್ಕೂ ಹೆಚ್ಚು AAPI USA ವೈದ್ಯರು, ಪ್ರಧಾನವಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ‘ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ’ ಕುರಿತು ಚರ್ಚಿಸಲಿದ್ದಾರೆ. ಶೃಂಗಸಭೆಯು CME ಉಪನ್ಯಾಸಗಳು, ಸಿಇಒ ವೇದಿಕೆ ಮತ್ತು ಮಹಿಳಾ ವೇದಿಕೆಯನ್ನು ಒಳಗೊಂಡಿರುತ್ತದೆ. […]
ಶಾರದಾ ಇಂಟರ್ನ್ಯಾಷನಲ್ ಹೋಟೇಲ್ ಮಾಲೀಕ ಬಿ. ಸುಧಾಕರ್ ಶೆಟ್ಟಿ ನಿಧನ
ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಶಾರದಾ ಇಂಟರ್ನ್ಯಾಷನಲ್ ಹೋಟೇಲ್ ಮಾಲೀಕ ಬಿ. ಸುಧಾಕರ್ ಶೆಟ್ಟಿ(72) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸುಧಾಕರ್ ಶೆಟ್ಟಿಯವರು ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. 2009 ರಿಂದ 2012 ರವರೆಗೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿದಿದ್ದ ಇವರು 1999 ರಲ್ಲಿ ಉಡುಪಿ ವಿಧಾನಸಭೆ ಚುನಾವಣೆಯಲ್ಲಿ ಯು.ಆರ್ ಸಭಾಪತಿ ವಿರುದ್ದ ಸೋಲು ಕಂಡಿದ್ದರು. 2004 ರಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದ ಸಂದರ್ಭದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. […]