ಕೊಡವೂರು: ಜ.14 ರಂದು ರಾಮಾಯಣಾಧಾರಿತ ಜಿಲ್ಲಾ ಮಟ್ಟದ ಭಿತ್ತಿ ಚಿತ್ರ ರಚನೆ ಸ್ಪರ್ಧೆ
ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ಸ್ನೇಹಿತ ಯುವ ಸಂಘ ಕಾನಂಗಿ ಕೊಡವೂರು ಜಂಟಿ ಆಶ್ರಯದಲ್ಲಿ ನಗರಸಭಾ ಸದಸ್ಯ ಕೆ.ವಿಜಯ್ ಕೊಡವೂರು ಸಂಯೋಜನೆಯಲ್ಲಿ ಚಂದ್ರಚಿತ್ರ ಕಡೆಕಾರ್ ಮಾರ್ಗದರ್ಶನದಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ನಿಮಿತ್ತ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ರಾಮಾಯಣಾಧಾರಿತ ಭಿತ್ತಿ ಚಿತ್ರ ಸರ್ಧೆಯು ಜ.14 ರಂದು ಬೆಳಿಗ್ಗೆ 8 ಗಂಟೆಯಿಂದ ಕೊಡವೂರು ಶ್ರೀ ಶಂಕರನಾರಾಯಣ ಮಂದಿರದಲ್ಲಿ ನಡೆಯಲಿದೆ. ಬಹುಮಾನ ಪ್ರಥಮ: 10,000/-ದ್ವಿತೀಯ: 5,000/-ತೃತೀಯ: 3,000/- 5 ಜನರಿಗೆ ಸಮಾಧಾನಕರ ಬಹುಮಾನ: 1,000/- ವಿಜೇತರು […]
ಕೋಟೆ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಕಾಂಗ್ರೆಸ್ ಸೇರ್ಪಡೆ
ಕಾಪು: ಕೋಟೆ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದ ವಿದ್ಯಾ ಗಿರೀಶ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಮೆಚ್ಚಿ ವಿನಯ್ ಕುಮಾರ್ ಸೊರಕೆಯವರ ಕಾರ್ಯವೈಖರಿ ಮತ್ತು ಜನಪರ ಕಾಳಜಿಗೆ ಮನ್ನಣೆ ನೀಡಿ, ಜೊತೆಗೆ ಕೋಟೆ ಗ್ರಾಮದ ಸಮಗ್ರ ಅಭಿವೃದ್ದಿಯ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ ಎಂದರು. ಕಾಪು ರಾಜೀವ್ ಭವನದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ವಿ.ಪ. ಸದಸ್ಯ ಐವನ್ ಡಿಸೋಜ, ಕೆ. ಪಿ. ಸಿ.ಸಿ ಪ್ರ […]
ಜ. 8 ರಂದು ಜೀವ ರಕ್ಷಕ ಸಿಬ್ಬಂದಿಗಳ ಆಯ್ಕೆ ಪ್ರಕ್ರಿಯೆ
ಉಡುಪಿ: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್-02, ತ್ರಾಸಿ- ಮರವಂತೆ ಬೀಚ್ 03, ಆಸರೆ ಬೀಚ್ 02, ಮಲ್ಪೆ ಬೀಚ್ 04, ಸೈಂಟ್ ಮೇರೀಸ್ ಐಲ್ಯಾಂಡ್-03, ಕಾಪು ಬೀಚ್ 02, ಪಡುಬಿದ್ರಿ ಮುಖ್ಯ ಬೀಚ್ 02 ಹಾಗೂ ಕುಂದಾಪುರ ಕೋಡಿ ಬೀಚ್-02 ಗಳಲ್ಲಿ ಒಟ್ಟು 20 ಜೀವ ರಕ್ಷಕ ಸಿಬ್ಬಂದಿಗಳಿಗೆ ಇಲಾಖೆಯ ವತಿಯಿಂದ ಜೀವ ರಕ್ಷಕ ತರಬೇತಿ ನೀಡಿ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಮುಂಚಿತವಾಗಿ ಆಯ್ಕೆ […]