ಉಡುಪಿ: ಗಂಗಾವತಿ ಪ್ರಾಣೇಶ್ ಅವರಿಗೆ ಕಸಾಪದಿಂದ ಗೌರವ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಕನ್ನಡದ ಪ್ರಸಿದ್ಧ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಉಡುಪಿಯಲ್ಲಿ ಗೌರವಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು , ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ , ಕಲಾಪೋಷಕ ವಿಘ್ನೇಶ್ವರ ಅಡಿಗ ಉಪಸ್ಥಿತರಿದ್ದರು.

ಮಣಿಪಾಲ: ರಸ್ತೆ ಬ್ಲಾಕ್ ಮಾಡಿ ಹುಚ್ಚಾಟ ಮೆರೆದಿದ್ದ ಯುವಕರಿಂದ ಸಾರ್ವಜನಿಕರಿಗೆ ತೊಂದರೆ: 1 ಕಾರು ಹಾಗೂ 8 ಮೋಟಾರ್ ಸೈಕಲ್ ಗಳ ವಶ

ಮಣಿಪಾಲ: ಹೊಸ ವರ್ಷದ ಆಚರಣೆಯ ಸಂದರ್ಭ ಕಾರು ಮತ್ತು ಮೋಟಾರ್ ಸೈಕಲ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸಿದ ಪ್ರಕರಣದಲ್ಲಿ 01 ಕಾರು ಮತ್ತು 08 ಮೋಟಾರ್ ಸೈಕಲ್ ಗಳನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ವಿವರ ಹೀಗಿವೆ: ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ರವರು ಸಿಬ್ಬಂದಿಯವರೊಂದಿಗೆ ದಿನಾಂಕ 01.01.2024 ರಂದು 00:30 ಗಂಟೆ ಹೊಸ ವರ್ಷದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲದ ರಸ್ತೆಯಲ್ಲಿ ಸುಮಾರು […]

ಬ್ರಹ್ಮಾವರ: ಶಿರಿಯಾರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ದನ ಕಳ್ಳತನ

ಬ್ರಹ್ಮಾವರ: ತಾಲೂಕಿನ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮರ್ಗಿ ಶಿರಿಯಾರ ಶ್ರೀ ರಾಮ ಮಂದಿರದ ಎದುರಿನಲ್ಲಿ ಜ.2 ರಂದು ಬೆಳಿಗ್ಗೆ 10.30 ಕ್ಕೆ ದನ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಬಿಳಿ ಬಣ್ಣದ ವಿಐಪಿ ಕಾರಿನಲ್ಲಿ ಬಂದಿದ್ದ ಮುಸುಕುಧಾರಿ ದೃಢಕಾಯದ ವ್ಯಕ್ತಿ ಕಾರಿನಲ್ಲಿ ದನವನ್ನು ಹಾಕುತ್ತಿದ್ದ ಶಬ್ದಕ್ಕೆ ಎಚ್ಚೆತ್ತ ಸ್ಥಳೀಯ ಮನೆಯವರು ಎದ್ದು ಕ್ಯಾಮರಾದಲ್ಲಿ ಫೋಟೋ ತೆಗೆದ ಕೂಡಲೇ ವ್ಯಕ್ತಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಜನರು ಠಾಣೆಗೆ ಯಾವುದೇ ದೂರನ್ನು ನೀಡಿಲ್ಲ. ಜನತೆಗೆ ಪೊಲೀಸರಿಂದ ನ್ಯಾಯ […]

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿ ಪ್ಯಾಟ್ ಕಮಿನ್ಸ್ ವಿಶ್ವ ದಾಖಲೆ

ಸಿಡ್ನಿ: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತನ್ಮೂಲಕ ತನ್ನ ಸಹ ಆಟಗಾರ ನಾಥನ್ ಲಿಯಾನ್ ಅವರ ವಿಕೆಟ್​ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಿಡ್ನಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ 57 ರನ್​ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಐದು ವಿಕೆಟ್​ಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ವಿಶ್ವ ದಾಖಲೆ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಹೆಸರಿನಲ್ಲಿತ್ತು. 69 […]

ಬ್ಯಾಂಕ್ ಗಳಲ್ಲಿನ ನಿಷ್ಕ್ರಿಯ ಖಾತೆ, ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರ್‌ಬಿಐ: ಏಪ್ರಿಲ್ 1 ರಿಂದ ಜಾರಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿದಂತೆ ಹೊಸ ಸೂಚನೆಗಳನ್ನು ಹೊರಡಿಸಿದ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕ್‌ಗಳಲ್ಲಿ ನಿರ್ವಹಿಸಲಾದ ಯಾವುದೇ ಠೇವಣಿ ಖಾತೆಯಲ್ಲಿನ ಯಾವುದೇ ಕ್ರೆಡಿಟ್ ಬ್ಯಾಲೆನ್ಸ್, ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸದಿದ್ದರೆ, ಆರ್‌ಬಿಐ ನಿರ್ವಹಿಸುವ ಡಿಇಎ (ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ) ನಿಧಿಗೆ ಬ್ಯಾಂಕ್‌ಗಳು ವರ್ಗಾಯಿಸಬೇಕಾಗುತ್ತದೆ ಎಂದು ಸುತ್ತೋಲೆ ಹೇಳುತ್ತದೆ. ಎರಡು ವರ್ಷಗಳ ಅವಧಿಗೆ ಯಾವುದೇ ವಹಿವಾಟು ಇಲ್ಲದಿದ್ದರೆ ಖಾತೆ ನಿಷ್ಕ್ರಿಯವಾಗಿರುತ್ತದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಹೇಳಲಾಗಿದೆ. “ಖಾತೆದಾರರಿಗೆ […]