ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಗೆ ನುಗ್ಗಿದ ಆಂಬ್ಯುಲೆನ್ಸ್; ಚಾಲಕ ಪ್ರಾಣಾಪಯದಿಂದ ಪಾರು

ಮಣಿಪಾಲ: ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದ ಆಂಬ್ಯುಲೆನ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಒಳಗೆ ನುಗ್ಗಿದ ಘಟನೆ ಲಕ್ಷ್ಮೀಂದ್ರ ನಗರದ ಬಳಿ ಮಂಗಳವಾರ(ಜ.2 ರಂದು) ಮುಂಜಾನೆ ನಡೆದಿದೆ. ಆಂಬ್ಯುಲೆನ್ಸ್ ನಲ್ಲಿ ಚಾಲಕನ ಹೊರತು ಬೇರೆ ಯಾರೂ ಇರಲಿಲ್ಲ. ಲಕ್ಷ್ಮೀಂದ್ರ ನಗರದ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಒಮ್ಮೆಗೆ ಬಲಕ್ಕೆ ತಿರುಗಿದ ಆಂಬ್ಯುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಇದರಿಂದ ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. […]

‘ಕೃಷ್ಣ ಶಿಲೆ’ಯಲ್ಲಿ ಮೂಡಿಬಂತು ‘ರಾಮ ಲಲ್ಲಾ’ನ ಸ್ವರೂಪ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ವಿಗ್ರಹ ಪ್ರಾಣಪ್ರತಿಷ್ಠಾಪನೆಗೆ ಆಯ್ಕೆ

ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೊಳ್ಳುತ್ತಿರುವ ‘ರಾಮ ಲಲ್ಲಾ’ನ ಸಂಕೀರ್ಣವಾದ ಕೆತ್ತನೆಯ ವಿಗ್ರಹವನ್ನು ಕರ್ನಾಟಕದ ಮೈಸೂರು ಮೂಲದ ನುರಿತ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿದ್ದಾರೆ. ಇದನ್ನು ಬಿಜೆಪಿ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೃಢಪಡಿಸಿದ್ದಾರೆ. ಅವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿಯೋಗಿರಾಜ್ ಅವರ ರಚನೆಗೆ ಸಂತಸ ವ್ಯಕ್ತಪಡಿಸಿ, “ರಾಮಾಯಣದಲ್ಲಿ ನಮ್ಮ ಕಿಷ್ಕಿಂಧೆಯ ಆಂಜನೇಯ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕದಲ್ಲಿ ವಿಶೇಷ ಪಾತ್ರ ವಹಿಸಿದ್ದನ್ನು ನೆನಪಿಸುವಂತೆ ಈಗ ಮತ್ತೊಂದು ಸುಯೋಗ […]

ನಿಟ್ಟೆ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜೀವನ್ ಕೆ ಶೆಟ್ಟಿ ಆಯ್ಕೆ

ಕಾರ್ಕಳ: ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸುಮಾರು 21 ಸಾವಿರ ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘದ 2023-24 ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿಯ ಜೀವನ್ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ. ನಿಟ್ಟೆ ಸಂಸ್ಥೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1996 ರಲ್ಲಿ ನಿಟ್ಟೆ ಮಹಾವಿದ್ಯಾಲಯದಲ್ಲಿ ಬಿ.ಇ(ಸಿವಿಲ್ ಇಂಜಿನಿಯರಿಂಗ್) ಮತ್ತು 2015 ರಲ್ಲಿ ಎಂ.ಟೆಕ್ (ಕನ್ ಸ್ಟ್ರಕ್ಷನ್ ಟೆಕ್ನಾಲಜಿ)ನಲ್ಲಿ ಪದವಿ ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ […]

ಕೆಂಪು ಸಮುದ್ರ ಪ್ರದೇಶದಲ್ಲಿ ಉದ್ವಿಗ್ನತೆ: ಕೆಂಪು ಸಮುದ್ರವನ್ನು ಪ್ರವೇಶಿಸಿದ ಇರಾನ್‌ನ ಅಲ್ಬೋರ್ಜ್ ಯುದ್ಧನೌಕೆ; ಯೂರೋಪ್ ನಿಂದ ಕ್ರಮದ ಎಚ್ಚರಿಕೆ

ಟೆಹ್ರಾನ್‌: ಇರಾನ್‌ನ ಅಲ್ಬೋರ್ಜ್ ಯುದ್ಧನೌಕೆ ಕೆಂಪು ಸಮುದ್ರವನ್ನು ಪ್ರವೇಶಿಸಿದೆ ಎಂದು ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ. ಮೂರು ಹಡಗುಗಳನ್ನು ಮುಳುಗಿಸಿ 10 ಹೌತಿ ಉಗ್ರಗಾಮಿಗಳನ್ನು ಕೊಂದಿದೆ ಎಂದು ಅಮೇರಿಕಾ ಹೇಳಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. ಮಾರ್ಗದಲ್ಲಿ ಸಾಗಾಟದ ಮೇಲೆ ಮತ್ತಷ್ಟು ದಾಳಿಗಳನ್ನು ತಡೆಗಟ್ಟಲು “ನೇರ ಕ್ರಮ” ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಬ್ರಿಟನ್ ಎಚ್ಚರಿಸಿದೆ. ಇರಾನ್ ಯುದ್ಧನೌಕೆಯ ಉಪಸ್ಥಿತಿಯು ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಹೆಚ್ಚಿನ ಉದ್ವಿಗ್ನತೆಯನ್ನು ಹೆಚ್ಚಿಸುವ […]

ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ: ಕನಿಷ್ಠ 20 ಸಾವು; ರಕ್ಷಣಾ ಕಾರ್ಯ ಜಾರಿ

ಟೋಕಿಯೋ: ಹೊಸ ವರ್ಷದ ದಿನದಂದು ಪ್ರಬಲ ಭೂಕಂಪದಿಂದ ಹಾನಿಗೊಳಗಾದ ಜಪಾನಿನ ಹಲವು ಪ್ರದೇಶಗಳನ್ನು ತಲುಪಲು ರಕ್ಷಣಾ ತಂಡಗಳು ಹೆಣಗಾಡಿವೆ. ಭೂಕಂಪಕ್ಕೆ ಕಟ್ಟಡಗಳು ಉರುಳಿಬಿದ್ದದ್ದು ದುರಂತದಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ವಿದ್ಯುತ್ ಕಂಬಗಳು ಧಾರಾಶಾಯಿಯಾಗಿವೆ ಎಂದು ವರದಿಯಾಗಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ 7.6 ರ ಪ್ರಾಥಮಿಕ ತೀವ್ರತೆಯ ಭೂಕಂಪನವು ಸಂಭವಿಸಿದ್ದು, ಸುನಾಮಿ ಅಲೆಗಳು ಜಪಾನ್‌ನ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದರಿಂದ ಕೆಲವು ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳು ಎತ್ತರದ ಪ್ರದೇಶಕ್ಕೆ ಓಡಿಹೋಗಿದ್ದಾರೆ. 5 ಮೀ ಎತ್ತರದ ಸುನಾಮಿ ಅಲೆಗಳಿಂದಾಗಿ […]