ಹಿರಿಯಡಕ: ಬೊಮ್ಮರಬೆಟ್ಟು ಗ್ರಾ.ಪಂ.ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ – ವಿವಿಧ ಸವಲತ್ತು ವಿತರಣೆ
ಉಡುಪಿ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ನಿಧಿ ಯೋಜನೆ ಅಡಿ ವಿದ್ಯಾರ್ಥಿ ವೇತನ, ಶವ ಸಂಸ್ಕಾರ, ವೈದ್ಯಕೀಯ ವೆಚ್ಚದ ಚೆಕ್ ಅನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಶೆಟ್ಟಿ, ನಾರಾಯಣ ನಾಯ್ಕ, ಬೊಮ್ಮರಬೆಟ್ಟು […]
ಯುವನಿಧಿ ಯೋಜನೆ: 7 ದಿನಗಳಲ್ಲಿ ರಾಜ್ಯಾದ್ಯಂತ 19,392 ಮಂದಿ ಯುವಕರು ನೋಂದಣಿ
ಕಲಬುರಗಿ: ಯುವನಿಧಿ ಯೋಜನೆಗೆ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 19,392 ಮಂದಿ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್‌ನ ಐದನೇ ಗ್ಯಾರಂಟಿ ಯುವ ನಿಧಿಯ ನೋಂದಣಿಯನ್ನು ಡಿಸೆಂಬರ್ 26 ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಯುವ ನಿಧಿ ಅಡಿಯಲ್ಲಿ, 2023 ರಲ್ಲಿ ತಮ್ಮ ಪದವಿ ಮತ್ತು ಡಿಪ್ಲೊಮಾವನ್ನು ಪೂರ್ಣಗೊಳಿಸಿದ ನಂತರ ನಿರುದ್ಯೋಗಿಗಳಾಗಿ ಉಳಿದಿರುವ ಯುವಕರು ಎರಡು ವರ್ಷಗಳವರೆಗೆ ಅಥವಾ ಅವರು ಉದ್ಯೋಗ ಪಡೆಯುವವರೆಗೆ ಕ್ರಮವಾಗಿ […]
ಹಿರಿಯಡಕ: ಪುತ್ತಿಗೆ ವಿದ್ಯಾಪೀಠದ ವಿಸ್ತೃತ ಕಟ್ಟಡ ಸುವರ್ಣ ಸ್ಮೃತಿ ಸೌಧ ಕಟ್ಟಡ ಉದ್ಘಾಟನೆ
ಹಿರಿಯಡಕ: ಪುತ್ತಿಗೆ ವಿದ್ಯಾಪೀಠದ ವಿಸ್ತೃತ ಕಟ್ಟಡ ಸುವರ್ಣ ಸ್ಮೃತಿ ಸೌಧ ಇದರ ಉದ್ಘಾಟನಾ ಕಾರ್ಯಕ್ರಮವು ಪುತ್ತಿಗೆ ಹಿರಿಯ- ಕಿರಿಯ ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ವ್ಯಾಸರಾಜ ಮಠಾಧೀಶರಿಂದ ನಡೆಯಿತು. ಪುತ್ತಿಗೆ ಮೂಲಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಗಳ ಆಶ್ರಮ ಸ್ವೀಕಾರದ ಸುವರ್ಣಮಹೋತ್ಸವದ ಅಂಗವಾಗಿ ಪೂಜ್ಯ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಪುತ್ತಿಗೆಯಲ್ಲಿ ನಿರ್ಮಾಣಗೊಂಡಿರುವ ಪುತ್ತಿಗೆ ವಿದ್ಯಾಪೀಠದ ಭವ್ಯ ಕಟ್ಟಡ ಸುವರ್ಣ ಸ್ಮೃತಿ ಸೌಧ ವನ್ನು ಭಾನುವಾರ ಲೋಕಾರ್ಪಣೆಗೊಳಿಸಿದರು. ಮಠದ ಹಿರಿ ಕಿರಿಯ ಸ್ವಾಮೀಜಿಗಳು, ಗಣ್ಯರು, ವಿದ್ಯಾರ್ಥಿಗಳು, ಭಕ್ತರು […]
ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡ ಉದ್ಘಾಟನೆ
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡಿಗೆ ಆಗಮಿಸಲಿದ್ದು, ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. 1100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಎರಡು ಹಂತದ ಹೊಸ ಅಂತಾರಾಷ್ಟ್ರೀಯ ಟರ್ಮಿನಲ್ ಕಟ್ಟಡವು ವಾರ್ಷಿಕ 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಧಾನಿ ಮೋದಿಯವರು ತಿರುಚಿರಾಪಳ್ಳಿಯಿಂದ ದಕ್ಷಿಣ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ. ಪ್ರಧಾನಮಂತ್ರಿ ಮೋದಿ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ತಮಿಳುನಾಡಿನಲ್ಲಿ19,850 ಕೋಟಿ ರೂ ಗೂ ಹೆಚ್ಚು ಮೊತ್ತದ […]
ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ಇನ್ನಿಲ್ಲ
ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ಅವರು ಕೋಟೇಶ್ವರದ ಡಾಕ್ಟರ್ ಎನ್ ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಪಯಣ, ಪಲಾಯನ, ಪರಿಭ್ರಮಣ, ಪದರಗಳು ಮುಂತಾದ ಕಾದಂಬರಿಗಳು, ಸಾತತ್ತೆಗೊಂದು ಸನ್ಮಾನ, ಸೆಕ್ರೆಟರ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು ಹಾಗೂ ಅಸ್ತಮಾ ಕೊಂಕಣಿ ಕಾದಂಬರಿ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಇವರ ಲೇಖನಿಯಿಂದ ಮೂಡಿ ಬಂದಿವೆ. ಅತ್ಯುತ್ತಮ ಸಂಘಟಕಿಯಾಗಿದ್ದ ಇವರು ಅಂಕಣ ಬರೆಹಗಾರ್ತಿಯಾಗಿದ್ದರು. ಹತ್ತು ವರ್ಷಗಳ ಕಾಲ ಚಡಗ ಕಾದಂಬರಿ ಪ್ರಶಸ್ತಿ […]