ನಾಳೆಯಿಂದ ‘ಎಣ್ಣೆ’ ದರ ಭಾರಿ ಹೆಚ್ಚಳ : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್
ಬೆಂಗಳೂರು: ಜನವರಿ.1ರಿಂದ ಜಾರಿಗೆ ಬರುವಂತೆ ಮದ್ಯದ ದರ ಕೂಡ ಭಾರಿ ಹೆಚ್ಚಳವಾಗಲಿದೆ.ಒಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದ್ರೇ, ಇದೇ ಮಾದರಿಯಲ್ಲಿ ಕಳೆದ ಬಜೆಟ್ ನಲ್ಲಿ ಮದ್ಯದ ಬೆಲೆಯನ್ನು ಏರಿಕೆ ಮಾಡಲಾಗಿತ್ತುಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭದ ಬೆನ್ನಲ್ಲೇ, ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ, ನಾಳೆಯಿಂದ ಎಣ್ಣೆ ದರಗಳಲ್ಲಿಯೂ ಭಾರಿ ಹೆಚ್ಚಳವಾಗಲಿದೆ. ಈ ಮೂಲಕ ಹೊಸ ವರ್ಷಕ್ಕೆ ಮದ್ಯಪ್ರಿಯರಿಗೆ ಬಿಗ್ ಶಾಕ್ ಸಿಗೋದಂತೂ ಗ್ಯಾರಂಟಿಯಾಗಿದೆ. ಅಂದಹಾಗೇ ನಾಳೆಯಿಂದ 180 ಎಂ.ಎಲ್ ಓಟಿ ಬೆಲೆ ರೂ.100 ಇದ್ದದ್ದು ರೂ.123ರಷ್ಟು ಆಗಲಿದೆ. 180 […]
ವಿಜ್ಞಾನಿಗಳಿಂದ ಆವಿಷ್ಕಾರ : ಹೊಸ ತಂತ್ರಜ್ಞಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ: 99% ʻಕ್ಯಾನ್ಸರ್ ಕೋಶʼ ನಾಶ
ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಜ್ಞಾನಿಗಳು ಕ್ರಾಂತಿಕಾರಿ ಆವಿಷ್ಕಾರ ಮಾಡಿದ್ದಾರೆ. ಅವರು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ಈ ಹೊಸ ತಂತ್ರವು ಅಮಿನೊಸೈನೈನ್ ಅಣುಗಳನ್ನು ಬಳಸುತ್ತದೆ. ಇದು ಸಾಮಾನ್ಯವಾಗಿ ಜೈವಿಕ ಚಿತ್ರಣದಲ್ಲಿ ಸಂಶ್ಲೇಷಿತ ಬಣ್ಣಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಅಣುಗಳು ಸಮೀಪದ ಅತಿಗೆಂಪು ಬೆಳಕಿನಿಂದ ಉತ್ಸುಕಗೊಂಡಾಗ, ಅವು ಕ್ಯಾನ್ಸರ್ ಕೋಶಗಳ ಪೊರೆಯನ್ನು ಒಡೆಯುತ್ತವೆ. ಅದು 99% ರಷ್ಟು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಹೊಸ ತಂತ್ರಜ್ಞಾನದ ಫಲಿತಾಂಶಗಳು ಬಹಳ ಉತ್ತೇಜನಕಾರಿಯಾಗಿದೆ. ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ, […]
4000ಕ್ಕೂ ಹೆಚ್ಚು ಜನರಲ್ಲಿ JN.1 ಸೋಂಕು ಪತ್ತೆ : ದೇಶದಲ್ಲಿ ರೂಪಾಂತರಿ ವೈರಸ್ ಅಟ್ಟಹಾಸ
ನವದೆಹಲಿ: ಕೊರೊನಾ ಸೋಂಕಿನ ನಡುವೆ ಮಹಾಮಾರಿ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ 4000ಕ್ಕೂ ಹೆಚ್ಚು ಜನರಲ್ಲಿ JN.1 ಸೋಂಕು ಪತ್ತೆ ಆಗಿದೆ. ಇನ್ನು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,997ಕ್ಕೂ ಅಧಿಕವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ಮಾಹಾಮಾರಿ ಕೋವಿಡ್ ಆತಂಕವೂ ಹೆಚ್ಚಾಗಿದೆ. ದೇಶದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ದೇಶದಲ್ಲಿ ರೂಪಾಂತರಿ ವೈರಸ್ ಅಟಹಾಸ ಹೆಚ್ಚುತ್ತಿದೆ.
ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ 32ನೇ ವಾರ್ಷಿಕ ಮಹೋತ್ಸವದ ಮಹಾಸಭೆ
ಬಂಟ್ವಾಳ: ಉತ್ತಮ ಆಶಯದ ಸಂಘ- ಸಂಘಟನೆಯು ಉತ್ತಮ ಸಮಾಜ ನಿರ್ಮಿಸುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಸಂಘಟನೆಯನ್ನು ಮುನ್ನಡಿಸಿದ್ದಾಗ ಮತ್ತಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಎಂ.ಆರ್.ಪಿ.ಎಲ್. ಹಿರಿಯ ಪ್ರಬಂಧಕ ಗಣೇಶ್ ಬಿ. ಹೇಳಿದರು. ಬಂಟ್ವಾಳ ತಾಲೂಕಿನ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ 32ನೇ ವಾರ್ಷಿಕ ಮಹೋತ್ಸವದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸಂಘದ ಅಧ್ಯಕ್ಷ ಎನ್.ಕೆ. ಶಿವ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಹರೀಶ್ […]
ಹಿರಿಯಡ್ಕ: ಜ.1 ರಂದು ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ
ಹಿರಿಯಡ್ಕ: ಯಕ್ಷ ಧ್ರುವ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಜನವರಿ 1 ರಂದು ಹಿರಿಯಡ್ಕ ಮಾತೃಶ್ರಿ ಶೇಡಿ ಕೊಂಡಾಡಿ ಇಲ್ಲಿ ಸಂಜೆ 6 ಗಂಟೆಗೆ ಪ್ರಪ್ರಥಮ ಬಾರಿಗೆ ನಡೆಯಲಿದೆ. ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ದಂಪತಿಗಳ ಮನೆಯಲ್ಲಿ ಸೇವಾ ರೂಪದಲ್ಲಿ ನಡೆಯುವ ಪ್ರದರ್ಶನಕ್ಕೂ ಮೊದಲು ಸಂಜೆ 4 ಗಂಟೆಗೆ ಸತ್ಯನಾರಾಯಣ ಪೂಜೆ […]