‘AAI’ ಮುಖ್ಯಸ್ಥ: ‘ಅಯೋಧ್ಯೆ ವಿಮಾನ’ ನಿಲ್ದಾಣವನ್ನು 20 ತಿಂಗಳಲ್ಲಿ ನಿರ್ಮಿಸಿ ಹೊಸ ದಾಖಲೆ

ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಾಖಲೆಯ 20 ತಿಂಗಳು ಅಥವಾ ಒಂದು ವರ್ಷ ಮತ್ತು ಎಂಟು ತಿಂಗಳಲ್ಲಿ ನಿರ್ಮಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿದ್ದಾರೆ.ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದು, ಇದನ್ನು ಕೇವಲ 20 ತಿಂಗಳಲ್ಲಿ ನಿರ್ಮಿಸಿ ದಾಖಲೆ ಬರೆಯಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ […]
ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ʻಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲʼ

ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಇತ್ತೀಚಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛತೆ ಮಾಡಿಸುತ್ತಿರುವ ಕುರಿತಾದ ಘಟನೆಗಳು ಸರ್ಕಾರದ ಮತ್ತು ಇಲಾಖೆಯ ಗಮನಕ್ಕೆ ಬಂದಿದೆ. ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ ಎಂದು ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಅದರ ವಿವರ ಹೀಗಿದೆ ಈ ಕಳಕಂಡತಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಶೌಚಾಲಯಗಳನ್ನು […]
ಉಡುಪಿ ಆಟೋ ಎಕ್ಸ್‌ಪೋ-2023 ಇಂದು ಕೊನೆ ದಿನ: 33 ವಿವಿಧ ಕಂಪನಿಗಳ ಸೌಲಭ್ಯ ಒಂದೇ ಸೂರಿನಡಿ ಲಭ್ಯ; ಭಾಗವಹಿಸದವರೆಗೆಲ್ಲರಿಗೂ ಚಿನ್ನ ಗೆಲ್ಲುವ ಅವಕಾಶ

ಉಡುಪಿ: ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಮತ್ತು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ‘ಉಡುಪಿ ಆಟೋ ಎಕ್ಸ್‌ಪೋ-2023’ ಡಿ. 29 ರಂದು ಉದ್ಘಾಟನೆಗೊಂಡು ಇಂದು ಸಮಾರೋಪಗೊಳ್ಳಲಿದೆ. 33 ವಿವಿಧ ಅಟೋ ಕಂಪನಿಗಳ ಎಲ್ಲಾ ರೀತಿಯ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಿದೆ. ಇಂದು ಸಂಜೆ 4ರಿಂದ ನಡೆಯಲಿರುವ ಸಮಾರೋಪದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ರಿಂದ ಕಲಾಮಯಂ […]
ಮೂಡುಪೆರಂಪಳ್ಳಿ ವಾರ್ಡ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾಗೆ ಒಲಿದ ವಿಜಯಲಕ್ಷ್ಮಿ

ಉಡುಪಿ: ಉಡುಪಿ ನಗರಸಭೆಯ ಮೂಡುಪೆರಂಪಳ್ಳಿ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಡಿಸೋಜಾ ಆರು ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಅನಿತಾ ಬೆಲಿಂಡಾ ಡಿಸೋಜಾ 6 ಮತಗಳ ಅಂತರದಲ್ಲಿ ಜಯಗಳಿಸುವುದರ ಮೂಲಕ 10 ವರ್ಷಗಳ ಬಳಿಕ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮೂಡುಪೆರಂಪಳ್ಳಿ ವಾರ್ಡ್ ಬಿಜೆಪಿ ಮಡಿಲಿಗೆ ವರ್ಗವಾಗಿದೆ.
ಭೂಮಿಯನ್ನು ಹಾದುಹೋಗಲಿದೆ ದೆವ್ವದ ಕೊಂಬುಗಳುಳ್ಳ ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾದ “ಡೆವಿಲ್ ಕಾಮೆಟ್”!!

ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾದ “ಡೆವಿಲ್ ಕಾಮೆಟ್” ಎಂಬ ಅಡ್ಡಹೆಸರಿನ ಬೃಹತ್ ಧೂಮಕೇತು ಭೂಮಿಯತ್ತ ಧಾವಿಸುತ್ತಿದೆ. ಅಧಿಕೃತವಾಗಿ 12P/Pons–Brooks ಎಂದು ಕರೆಯಲ್ಪಡುವ ಈ ಆಕಾಶಕಾಯವು 71 ವರ್ಷಗಳ ಕಕ್ಷೆಯ ಅವಧಿಯನ್ನು ಹೊಂದಿರುವ ಆವರ್ತಕ ಧೂಮಕೇತುವಾಗಿದೆ. ವರ್ಷವಿಡೀ, ಧೂಮಕೇತು 12P ಆಕಾಶದ ಘಟನೆಗಳ ಅದ್ಭುತ ಪ್ರದರ್ಶನದಲ್ಲಿ ಆಕಾಶದಾದ್ಯಂತ ಪ್ರಜ್ವಲಿಸಿದೆ. ಇದು ಪ್ರತಿ 15 ದಿನಗಳಿಗೊಮ್ಮೆ ಜ್ವಾಲಾಮುಖಿ ಸ್ಫೋಟಗಳ ರೂಪದಲ್ಲಿ ಭಯಂಕರವಾಗಿ ಸ್ಫೋಟಗೊಂಡು ಮಂಜುಗಡ್ಡೆ ಮತ್ತು ಅನಿಲವನ್ನು ಹೊರಹಾಕುತ್ತದೆ. ಈ ನಿಯಮಿತ ಸ್ಫೋಟಗಳು ಧೂಮಕೇತುವಿಗೆ ಅನಿಯಮಿತ ಆಕಾರವನ್ನು ನೀಡುತ್ತವೆ ಮತ್ತಿದು ದೆವ್ವದ […]