ಸರಕು ಯಾ ಸೇವೆಯಲ್ಲಿ ಮೋಸವಾದಾಗ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿ: ಡಾ.ಕೆ ವಿದ್ಯಾಕುಮಾರಿ
ಉಡುಪಿ: ಪ್ರತಿಯೊಬ್ಬರೂ ಗ್ರಾಹಕರಾಗಿದ್ದು, ತಮ್ಮ ದೈನಂದಿನ ಜೀವನದಲ್ಲಿ ಸರಕು ಹಾಗೂ ಸೇವೆಗಳನ್ನು ಪಡೆಯುವಾಗ ಎಚ್ಚರವಹಿಸಬೇಕು. ಒಂದೊಮ್ಮೆ ಮೋಸವಾದಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಹೇಳಿದರು. ಅವರು ಬುಧವಾರ ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ,ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, […]
ಭೂಮಿ ಖರೀದಿ ಪ್ರಕರಣ: ಆರೋಪ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಹೆಸರು ಉಲ್ಲೇಖಿಸಿದ ಜಾರಿ ನಿರ್ದೇಶನಾಲಯ
ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ವು ಇದೇ ಮೊದಲ ಬಾರಿ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಉಲ್ಲೇಖಿಸಿದೆ. 2006ರಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್ ಪಹ್ವಾ ಅವರಿಂದ ಹರಿಯಾಣದ ಫರಿದಾಬಾದ್‌ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿ, ಅದೇ ಭೂಮಿಯನ್ನು ಫೆಬ್ರವರಿ, 2010 ರಲ್ಲಿ ಅವರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ನಿರ್ದೇಶನಾಲಯವು ಪ್ರಿಯಾಂಕಾ ಗಾಂಧಿಯ ಹೆಸರನ್ನು ಉಲ್ಲೇಖಿಸಿದೆ. ತನಿಖಾ ಸಂಸ್ಥೆಯ […]
ಡಿ. 30 ರಂದು ಜಿಲ್ಲಾ ಆಟೋ ರಿಕ್ಷಾ ಟ್ಯಾಕ್ಸಿ ಚಾಲಕ-ಮಾಲಕರ ಕುಂದು ಕೊರತೆ ಸಭೆ
ಉಡುಪಿ: ಜಿಲ್ಲೆಯ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ ಹಾಗೂ ಮಾಲಕರ ಕುಂದು ಕೊರತೆ ಆಲಿಸುವ ಸಭೆಯು ಡಿ. 30 ರಂದು ಮಧ್ಯಾಹ್ನ 4 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ, ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಿರಿಜನರ ಕಲಾ ಪ್ರತಿಭೆಯನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಸದೃಢರನ್ನಾಗಿಸಿ: ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ: ವೈವಿಧ್ಯದಲ್ಲಿಏಕತೆಯನ್ನು ಹೊಂದಿರುವ ದೇಶದಲ್ಲಿ ವಿವಿಧ, ಧರ್ಮ, ಭಾಷೆ, ಸಂಸ್ಕೃತಿಗಳು ಸಮ್ಮಿಳಿತವಾಗಿದ್ದು, ಸಮಾಜದಲ್ಲಿ ಗಿರಿಜನರ ಕಲೆಯನ್ನು ಮುನ್ನೆಲೆಗೆ ತಂದು ಪ್ರೋತ್ಸಾಹಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾಸಂಘ (ರಿ) ಪೆರ್ಡೂರು ಇದರ ಸಹಯೋಗದೊಂದಿಗೆ ನಡೆದ ಗಿರಿಜನ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು. ವೈವಿಧ್ಯಮಯ ಕಲಾಪ್ರಕಾರಗಳನ್ನು ಗುರುತಿಸುವುದರ ಮೂಲಕ ಗಿರಿ ಜನರ […]
ಕ್ರಿಕೆಟಿಗನಂತೆ ಬಿಂಬಿಸಿಕೊಂಡು ಭಾರತದ ಸ್ಪೋಟಕ ಆಟಗಾರ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ ಯುವಕ!!
ನವದೆಹಲಿ: 25 ರ ಹರೆಯದ, ಪ್ರಸ್ತುತ ಓರ್ವ ವಂಚಕ ಮತ್ತು ಹಿಂದೆ ಹರಿಯಾಣದ U-19 ಕ್ರಿಕೆಟಿಗ ಮೃಣಾಂಕ್ ಸಿಂಗ್, ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ್ದಾನೆ. ಪ್ರತಿಷ್ಠಿತ ಬ್ರಾಂಡ್‌ಗಳು ಮತ್ತು ಜನರನ್ನು ವಂಚಿಸಲು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವ ಈತ ಹಲವರಿಗೆ ಇದೇ ರೀತಿ ಟೋಪಿ ಹಾಕಿದ್ದಾನೆ. ಐಷಾರಾಮಿ ಜೀವನಕ್ಕಾಗಿ ತಾನು ಪ್ರಸಿದ್ದ ವ್ಯಕ್ತಿ ಎಂಬಂತೆ ಬಿಂಬಿಸುತ್ತಿದ್ದ ಈತ 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್‌ಗಾಗಿ ಆಡಿದ IPL ಕ್ರಿಕೆಟಿಗನಂತೆ […]