ಜನವರಿ 1 ರಿಂದ ಜಾರಿ : KSRTCʼ ಅಪಘಾತ ಪರಿಹಾರ 10 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು : ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ:01.03.2017 ರಿಂದ ಪಾವತಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನು ದಿನಾಂಕ 31.10.2023 ರಂದು ಜರುಗಿದ 29ನೇ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ 3,00,000 ರೂ.ದಿಂದ 10 ಲಕ್ಷಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಪರಿಹಾರ ಮೊತ್ತವನ್ನು ₹ 3 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಳ […]

ಅಯೋಧ್ಯೆ: ರಾಮ ಮಂದಿರಕ್ಕಾಗಿ 600 ಕೆ.ಜಿ ತೂಕದ ಬೃಹತ್ ಘಂಟೆ

ಲಖನೌ: ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಡಿಸೆಂಬರ್ 30ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲ್ವೆ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ.ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ಅದಕ್ಕಾಗಿ, ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅಯೋಧ್ಯೆ ನಗರದಲ್ಲಿ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ನಡುವೆ, ರಾಮ ದೇವಾಲಯದಲ್ಲಿ ಅಳವಡಿಸಲು ತಯಾರಿಸಿರುವ 600 ಕೆ.ಜಿ ತೂಕದ ಬೃಹತ್ ಘಂಟೆ ಎಲ್ಲರ ಗಮನ […]

ನಳಿನ್‌ಕುಮಾರ್ : ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ₹957.39 ಕೋಟಿ

ಮಂಗಳೂರು :ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಉಜಿರೆ- ಧರ್ಮಸ್ಥಳ- ಪೆರಿಯಶಾಂತಿವರೆಗಿನ 28.49 ಕಿ.ಮೀ. ದ್ವಿಪಥ ಅಭಿವೃದ್ಧಿ ಯೋಜನೆಗೆ ₹613.65 ಕೋಟಿ ಹಾಗೂ ಚಾರ್ಮಡಿ ಘಾಟಿಯಲ್ಲಿ ಮಂಗಳೂರು- ಮೂಡಿಗೆರೆ- ತುಮಕೂರು ಸೆಕ್ಷನ್‌ನಲ್ಲಿ 11.20 ಕಿ.ಮೀ. ಅಭಿವೃದ್ದಿಗೆ ₹343.73 ಕೋಟಿ ಕಾಮಗಾರಿಗಳಿಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು ಟೆಂಡರ್ ಆಹ್ವಾನಿಸಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿ- ಮೈಸೂರು ರಸ್ತೆ ಚತುಷ್ಪಥ ಕಾಮಗಾರಿಯ (ಒಟ್ಟು 71.60 ಕಿ.ಮೀ) ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಅಂದಾಜು ₹1000 […]

ಮೂಡಿಗೆರೆಯಲ್ಲಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ , ಸವಾರರು ಹೈರಾಣು

ಮೂಡಿಗೆರೆ: ಚಿಕ್ಕಮಗಳೂರಿನಿಂದ ಟಿಎಪಿಎಇಎಂಎಸ್‌ಗೆ ಅಕ್ಕಿ ಸಾಗಿಸುತ್ತಿದ್ದ ಲಾರಿ, ರೈತ ಭವನದ ತಿರುವಿನಲ್ಲಿ ಕೆಟ್ಟು ನಿಂತಿತ್ತು. ಪಟ್ಟಣದ ರೈತ ಭವನದ ಬಳಿ ಗುರುವಾರ ಮಧ್ಯಾಹ್ನ ಲಾರಿಯೊಂದು ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ, ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟರು. ಸಂಜೆಯವರೆಗೂ ವಾಹನ ದಟ್ಟಣೆ ಮುಂದುವರಿದಿತ್ತು.ಇದರಿಂದ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಬೇರೆ ವಾಹನಗಳು ಸಾಗಲು ದಾರಿಯಿಲ್ಲದೆ ಕಡೂರು – ಮಂಗಳೂರು […]

ವರ್ಷಾಂತ್ಯಕ್ಕೆ ಕಳೆಗಟ್ಟುತ್ತಿದೆ ಕಡಲ ಕಿನಾರೆ : ಪಣಂಬೂರು ಬೀಚ್‌ನಲ್ಲಿ ಜನವೋ ಜನ

ಹೊಸ ಆಕರ್ಷಣೆಯಾಗಿ ಪಣಂಬೂರು ಕಡಲ ಕಿನಾರೆಗೆ ಫ್ಲೋಟಿಂಗ್ ಬ್ರಿಡ್ಜ್, ಬೋಟಿಂಗ್, ಪ್ಯಾರಚೂಟ್, ಸ್ಪೀಡ್ ಬೋಟ್‌ಗಳು ಬಂದಿದೆ. ಪ್ರವಾಸಿಗರು ವರ್ಷಾಂತ್ಯಕ್ಕೆ ಬೀಚ್‌ಗೆ ಆಗಮಿಸಿ ಈ ಎಲ್ಲದರ ಮೂಲಕ ಕಡಲ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಅಲ್ಲದೇ ಒಂಟೆಗಳ, ಕುದುರೆಗಳ ಬೆನ್ನೇರಿ ಕಡಲ ತೀರದುದ್ದಕ್ಕೂ ಸವಾರಿ ಮಾಡುವ, ಮಕ್ಕಳು ಗಾಳಿಪಟಗಳನ್ನು ಹಾರಿಸುತ್ತಿರುವ, ಜಾರುಬಂಡಿಯಲ್ಲಿ ಜಾರುತ್ತಾ, ಮೇಲಕ್ಕೆ ಕೆಳಗೆ ಹಗ್ಗದಲ್ಲಿ ಜೀಕಾಡುತ್ತಾ, ಸ್ಪೋಟ್ಸ್ ಕಾರು ಸವಾರಿ ಮಾಡುತ್ತಾ ಮಜಾ ಮಾಡುತ್ತಿರುವ ದೃಶ್ಯ ಕಡಲ ಕಿನಾರೆಯಲ್ಲಿ ಕಂಡು ಬಂದಿದೆ. ಪ್ರವಾಸಿಗರು ಸೂರ್ಯಾಸ್ತದ ಸೌಂದರ್ಯವನ್ನು ಆಸ್ವಾದಿಸುತ್ತಾ ಸೆಲ್ಫಿಗಳಲ್ಲಿ […]