ಗುಣಮಟ್ಟದ ಜೊತೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಜ್ಞಾನಸುಧಾ ಸಂಸ್ಥೆಯ ಕಾರ್ಯ ಶ್ಲಾಘನೀಯ: ಮಧು ಬಂಗಾರಪ್ಪ

ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಿಗೂ ಮಹತ್ವ ನೀಡುತ್ತಿರುವುದು ಅಭಿನಂದನಾರ್ಹ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು ಡಿ.23 ರಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕರಾವಳಿ ನೀಡಿದ ಕೊಡುಗೆ ಅಪಾರ. ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು […]

84 ಸೆಕೆಂಡ್‌ಗಳ ಸೂಕ್ಷ್ಮ ಕ್ಷಣದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ: ರಾಮನ ಆಗಮನದ ಮಂಗಳಕರ ಮುಹೂರ್ತದಿಂದ ಸುಖ ಸಮೃದ್ದಿ

ಅಯೋಧ್ಯೆ: 84 ಸೆಕೆಂಡ್‌ಗಳ ಸೂಕ್ಷ್ಮ ಕ್ಷಣದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. 84 ಸೆಕೆಂಡ್‌ಗಳ ಈ ಕ್ಷಣವು ಅತ್ಯಂತ ಮಂಗಳಕರವಾಗಿದ್ದು ಇದು ಭಾರತಕ್ಕೆ ಜೀವರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಶುಭ ಮುಹೂರ್ತವನ್ನು ಕಾಶಿಯ ಪಂಡಿತರು ನಿರ್ಧರಿಸಿದ್ದಾರೆ. ಮೂಲ ಮುಹೂರ್ತವು ಜನವರಿ 22 ರಂದು ನಡು ಮಧ್ಯಾಹ್ನ 12:29: 8 ಸೆಕೆಂಡುಗಳಿಂದ ಪ್ರಾರಂಭವಾಗುತ್ತದೆ. ಇದು 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ಅಂದರೆ ಸುಮಾರು 1 ನಿಮಿಷ 24 ಸೆಕೆಂಡ್‌ಗಳಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಆದರೆ, ಪ್ರಾಣಪ್ರತಿಷ್ಠೆಗೂ ಮುನ್ನ […]

ಮೂಡಬಿದ್ರೆ: ಜನವರಿ 5-6 ರಂದು ಕುಪ್ಮಾ ವತಿಯಿಂದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024

ಮೂಡಬಿದ್ರೆ: ಜನವರಿ 5 ಮತ್ತು 6 ರಂದು ಆಳ್ವಾಸ್ ಕಾಲೇಜಿನಲ್ಲಿ ಕರ್ನಾಟಕ ಅನುದಾನರಹಿತ ಪದವಿ ಪೂರ್ವಕಾಲೇಜು ಆಡಳಿತ ಮಂಡಳಿಗಳ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ‘ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024’ ಎಂಬ ವಿಷಯದ ಮೇಲೆ ಎರಡು ದಿನಗಳ ಸಮಾವೇಶವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ವಿವರ: ಜನವರಿ 5 ಶುಕ್ರವಾರ ಬೆಳಿಗ್ಗೆ 11.30 ರಿಂದ 12.30 ರವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 2 ರ ವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 2 ರಿಂದ 4 ರವರೆಗೆ ಉದ್ಘಾಟನಾ […]

ರಾಜ್ಯದಲ್ಲಿ 125 ಹೊಸ ಕೋವಿಡ್ -19 ಪ್ರಕರಣ; ಸಕ್ರಿಯ ಪ್ರಕರಣಗಳ ಸಂಖ್ಯೆ 436ಕ್ಕೆ ಏರಿಕೆ: ಇಂದು ಕೋವಿಡ್ ಉಪ ಸಮಿತಿ ಸಭೆ

ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿಯು ಡಿಸೆಂಬರ್ 26 ರಂದು ಸಭೆ ಸೇರಲಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿಯ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಮಾಡಿದ ಶಿಫಾರಸುಗಳನ್ನು ಚರ್ಚಿಸುವುದು ಈ ಸಭೆಯ ಉದ್ದೇಶವಾಗಿದೆ. ಸದ್ಯಕ್ಕೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಸೂಚಿಸಿದ ಅವರು, ಜನರು ಜಾಗರೂಕರಾಗಿರಬೇಕು ಅಥವಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದರು. ಕರ್ನಾಟಕದಲ್ಲಿ ಸೋಮವಾರ 125 ಹೊಸ […]

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಮಂಗಲೋತ್ಸವವು ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರ ದೊಂದಿಗೆ ಅಹೋರಾತ್ರಿ ಭಜನೆ ಜರುಗಿತು. ದೇವಳದ ಪ್ರಧಾನ ಅರ್ಚಕ ಜಯದೇವ ಭಟ್, ಗಣಪತಿ ಭಟ್, ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಭಜನಾ ಸಮಿತಿಯ ಅಧ್ಯಕ್ಷ ಕೆ. ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್, ದೇವಳದ ಆಡಳಿತ ಮಂಡಳಿಯ ಸದಸ್ಯರು, ಭಜನಾ […]