5ನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿ ಪ್ರಕಿಯೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳ ಪೈಕಿ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೂ ಮುನ್ನ ಅದರ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಡವಾಗಿದೆ. ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು. ಸ್ವಾಮಿ […]

ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ಬಳಿಕ ಕುಟುಂಬದೊಂದಿಗೆ ಪುನರ್ಮಿಲನ ಕಂಡ ಯುವಕ

ಮಂಜೇಶ್ವರ: ಇಲ್ಲಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಮರಳಿ ಕುಟುಂಬಕ್ಕೆ ಸೇರಿಸಲಾಯಿತು. 2021 ಸೆಪ್ಟೆಂಬರ್ 15ರಂದು, ಇಮ್ತಿಯಾಸ್ ಎಂಬ 27 ವರ್ಷದ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮಂಜೇಶ್ವರದ ಬೀದಿಯಿಂದ ರಕ್ಷಿಸಿ ಆತನನ್ನು ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆದಾಖಲಿಸಿತ್ತು. ದಾಖಲಾತಿಯ ಸಮಯದಲ್ಲಿ, ಇಮ್ತಿಯಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಆತನಲ್ಲಿ ಮಾನಸಿಕ ಆರೋಗ್ಯಕ್ಕೆಸಂಬಂಧಪಟ್ಟ ರೋಗಲಕ್ಷಣಗಳು ಕಂಡುಬಂದವು. ಸ್ನೇಹಾಲಯದ ತಂಡವು ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿ ಮುಂಬೈಯ ಶ್ರದ್ಧಾ […]

ಹಿರಿಯಡ್ಕ ಬೈರಂಪಳ್ಳಿ: ಹೊಳೆಯ ನೀರಿನಲ್ಲಿ ಮುಳುಗಿ ಯುವಕ ಸಾವು

ಹಿರಿಯಡ್ಕ: ಹೊಳೆಯ ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್‌ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ. ಮೃತರನ್ನು ಎಲೆಕ್ನಿಷಿಯನ್ ಕೆಲಸ ಮಾಡುತ್ತಿದ್ದ ಅಜಯ್ (21) ಎಂದು ಗುರುತಿಸಲಾಗಿದೆ. ಇವರು ವಾಲಿಬಾಲ್ ಆಡಲೆಂದು ರವಿವಾರ ಅಪರಾಹ್ನ ಕೆ.ಸಿ.ರೋಡ್‌ಗೆ ತೆರಳಿದ್ದರು. ವಾಲಿಬಾಲ್ ಆಡಿದ ಬಳಿಕ 2:30ರ ಸುಮಾರಿಗೆ ಸ್ನೇಹಿತರೆಲ್ಲರೂ ಹೊಳೆಯ ದಂಡೆಯಲ್ಲಿ ಕುಳಿತಿದ್ದು, ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವಾಗಿ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಸ್ಥಳೀಯರೊಬ್ಬರು ಮೃತಪಟ್ಟರು. 4 ಬಳಿಕ ಗಂಟೆ […]

ಮುಲ್ಕಿ: ಇತಿಹಾಸ ಪ್ರಸಿದ್ಧ “ಮೂಡು – ಪಡು” ಜೋಡುಕರೆ ಕಂಬಳ – ಫಲಿತಾಂಶ

ಮುಲ್ಕಿ: ಡಿ.24 ರಂದು ನಡೆದ ಇತಿಹಾಸ ಪ್ರಸಿದ್ಧ “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 02 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 24 ಜೊತೆ ಹಗ್ಗ ಕಿರಿಯ: 27 ಜೊತೆ ನೇಗಿಲು ಕಿರಿಯ: 73 ಜೊತೆ ಒಟ್ಟು ಕೋಣಗಳ ಸಂಖ್ಯೆ: 152 ಜೊತೆ ಕನೆಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ […]

ಮಂಗಳೂರಿಗೂ ಬಂತು ವಂದೇ ಭಾರತ್ ರೈಲು!! ಇಂದು ಮಂಗಳೂರು-ಮಡಗಾಂವ್ ಮಾರ್ಗದಲ್ಲಿ ಪ್ರಾಯೋಗಿಕ ಓಡಾಟ; ಡಿಸೆಂಬರ್ 30 ರಂದು ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ

ಮಂಗಳೂರು: ದಕ್ಷಿಣ ರೈಲ್ವೆಯು ಮಂಗಳೂರು ಸೆಂಟ್ರಲ್-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟವನ್ನು ಇಂದು (ಡಿಸೆಂಬರ್ 26 ರಂದು) ನಡೆಸಿದೆ. ಪ್ರಾಯೋಗಿಕ ಚಾಲನೆಯಲ್ಲಿರುವ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 8.30 ಕ್ಕೆ ಹೊರಡಲಿದ್ದು, ಹಿಂದಿರುಗುವ ಪ್ರಯಾಣದಲ್ಲಿ ಅದು ಮಧ್ಯಾಹ್ನ 1.45 ಕ್ಕೆ ಮಡಗಾಂವ್‌ನಿಂದ ಮಂಗಳೂರಿಗೆ ಹಿಂತಿರುಗಲಿದೆ. ಇಂದು ನಡೆಸಿದ ಪರೀಕ್ಷೆಯು ಯಶಸ್ವಿಯಾಗಿದ್ದು ಉಡುಪಿಗೆ 9.50ಕ್ಕೆ ತಲುಪಿದೆ ಹಾಗೂ ಕುಂದಾಪುರ ನಿಲ್ದಾಣವನ್ನು 10.05ಕ್ಕೆ ದಾಟಿದೆ. ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಐದು ಇತರ ರೈಲುಗಳೊಂದಿಗೆ […]