ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ವಿ.ಸುನಿಲ್ ಕುಮಾರ್ ನೇಮಕ
ಕಾರ್ಕಳ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ವಿ. ಸುನಿಲ್ ಕುಮಾರ್ ಅವರನ್ನು ನೇಮಿಸಲಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಿ. 23 ರಂದು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ […]
ಹಿಜಾಬ್ ಬ್ಯಾನ್ ಹಿಂಪಡೆದಲ್ಲಿ ಉಗ್ರ ಪ್ರತಿಭಟನೆ ಮತ್ತು ಹೋರಾಟ: ಹಿಂದೂ ಯುವಸೇನೆ ಎಚ್ಚರಿಕೆ
ಉಡುಪಿ: ರಾಜ್ಯದ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಯನ್ನು ಉಡುಪಿ ಜಿಲ್ಲಾ ಹಿಂದೂ ಯುವ ಸೇನೆ ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು ತೀವ್ರವಾಗಿ ಖಂಡಿಸಿದ್ದಾರೆ. ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಆಯ್ಕೆ. ಈ ವಿಚಾರದಲ್ಲಿ ಸರ್ಕಾರ ಯಾಕೆ ಅಡ್ಡಿ ಮಾಡಬೇಕು? ನಾನು ಪಂಚೆ ಧರಿಸುತ್ತೇನೆ, ನೀವು ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತೀರಿ. ಇದರಲ್ಲಿ ತಪ್ಪೇನಿದೆ […]
ಉಡುಪಿ: ಎಂ.ಜಿ.ಎಂ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮ
ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು 1949ರಲ್ಲಿ ಆರಂಭವಾಗಿ ಪ್ರಸ್ತುತ ವರ್ಷದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಶನಿವಾರ ಕಾಲೇಜಿನ ಕ್ಯಾಂಪಸ್ ಅಕ್ಷರಶಃ ಹಳೆ ವಿದ್ಯಾರ್ಥಿಗಳ ನೆನಪು, ಭಾವನೆಗಳ ಸಮಾಗಮಕ್ಕೆ ವೇದಿಕೆಯಾಗಿತ್ತು. ಬೆಳಗ್ಗೆ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿರುವ ಡಾ| ಟಿಎಂಎ ಪೈ ಅವರ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗೀತಾಂಜಲಿ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಫೋಟೋ ಗ್ಯಾಲರಿ ಪ್ರದರ್ಶನ ಉದ್ಘಾಟನೆ ನಡೆಯಿತು. ಮುದ್ದಣ ಮಂಟಪ ಸಭಾಂಗಣದಲ್ಲಿ ಕಾಲೇಜಿನ ನಿವೃತ್ತ […]
ಮಣಿಪಾಲದಲ್ಲಿ “ಬೇಕ್ ಲೈನ್” ಕೇಕ್ ಶಾಪ್ ಉದ್ಘಾಟನೆ.
ಮಣಿಪಾಲ: ಮಣಿಪಾಲ ಅನಂತ ನಗರದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್ಸ್ಟಿ ಟ್ಯೂಶನ್ಸ್ ನ ಬಳಿ ಇರುವ ಅವಂತಿ ಕಾರ್ನರಿನಲ್ಲಿ ಡಿ.22 ರಂದು ಹೊಸದಾದ ಶಾಖೆ ‘ಬೇಕ್ ಲೈನ್’ ಕೇಕ್ ಶಾಪ್ ಉದ್ಘಾಟನೆಗೊಂಡಿತು. ಬೇಕ್ ಲೈನ್ ಫ್ರೆಶ್ ಬರ್ತಡೇ ಐಸ್ ಕೇಕ್ಸ್, ಪೆಸ್ಟ್ ಕೇಕ್ಸ್, ಸ್ವೀಟ್ಸ್, ಸ್ನ್ಯಾಕ್ಸ್ ಅಂಡ್ ಜ್ಯೂಸ್ ಗಳು ಲಭ್ಯವಿದ್ದು, ಗ್ರಾಹಕರಿಗೆ ಬರ್ತಡೆ ಆಚರಣೆ ಮಾಡಲು ಪಾರ್ಟಿ ಹಾಲ್ ನ್ನು ಕಲ್ಪಿಸಿದೆ. ಇಲ್ಲಿ ನಿಮ್ಮ ಸಂತೋಷದ ಕ್ಷಣಗಳನ್ನು ಸಿಹಿಯೊಂದಿಗೆ ಆಚರಿಸಿಕೊಳ್ಳಬಹುದು. ಅಲ್ಲದೆ, ನಿಮ್ಮ ಮನೆ ಬಾಗಿಲಿಗೆ […]
ಪೆರ್ಡೂರು: ಡಿ.24 ರಂದು ಗಿರಿಜನ ಉತ್ಸವ – ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘ (ರಿ) ಪೆರ್ಡೂರು ಇವರ ಸಹಯೋಗದೊಂದಿಗೆ ಗಿರಿಜನ ಉತ್ಸವ – ಸಾಂಸ್ಕೃತಿಕ ಕಾರ್ಯಕ್ರಮವು ಡಿಸೆಂಬರ್ 24 ರಂದು ಬೆಳಗ್ಗೆ 9.30 ಕ್ಕೆ ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಕಾಪು ಶಾಸಕ […]