ತೈಲ ಬೆಲೆ ಹೆಚ್ಚಳ ಸಾಧ್ಯತೆ : ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ
ಲಂಡನ್(ಬ್ರಿಟನ್) : ಯೆಮೆನ್ ನ ಹೌತಿ ಬಂಡುಕೋರರು ಹಡಗುಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವುದರಿಂದ ಹಲವಾರು ಶಿಪ್ಪಿಂಗ್ ಕಂಪನಿಗಳು ಈ ಮಾರ್ಗದ ಮೂಲಕ ಸಾಗಣೆಯನ್ನು ಸ್ಥಗಿತಗೊಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ತೈಲ ಮತ್ತು ಇತರ ಸರಕುಗಳ ಬೆಲೆಗಳು ಹೆಚ್ಚಾಗುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ ವಿಶ್ವದ ಎರಡನೇ ಅತಿದೊಡ್ಡ ಹಡಗು ಸಾರಿಗೆ ಕಂಪನಿ ಮೆರ್ಸ್ಕ್ ಮಂಗಳವಾರ ತನ್ನ ಕೆಲವು ಹಡಗುಗಳನ್ನು […]
ಪ್ರಸ್ತುತ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಕೋವಿಡ್ 19ರ ಹೊಸ ರೂಪಾಂತರ ತಳಿ JN.1 ಎಂದ WHO
ಹೈದರಾಬಾದ್ : ಕೋವಿಡ್ 19 ಉಪತಳಿಯಾಗಿರುವ ಜೆಎನ್.1 (JN.1) ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಜೆಎನ್.ಪ್ರಸ್ತುತ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಕೊರೊನಾದ ಜೆಎನ್.1 ತಳಿ ಕಡಿಮೆ ಸಾರ್ವಜನಿಕ ಅಪಾಯ ಹೊಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಪ್ರಸ್ತುತ ಹೊರ ಹೊಮ್ಮಿರುವ ಜೆಎನ್ 1ತಳಿ ಕಡಿಮೆ ಸಾರ್ವಜನಿಕ ಆರೋಗ್ಯ ಅಪಾಯವನ್ನು ಹೊಂದಿದೆ. ಇದರ ಹೊರತಾಗಿ, ಉತ್ತರಾರ್ಧ ಗೋಳದಲ್ಲಿ ಚಳಿ ಪ್ರಮಾಣ ಹೆಚ್ಚಿದ್ದು, ಇದು ಅನೇಕ ದೇಶಗಳಲ್ಲಿ ಶ್ವಾಸಕೋಶ ಸೋಂಕಿನ ಅಪಾಯವನ್ನು ಹೆಚ್ಚಿಸಲಿದೆ ಎಂದು […]
ಅಧ್ಯಯನ ವರದಿ : ಡಿಜಿಟಲ್ ಎಂಟರ್ಟೇನ್ಮೆಂಟ್ ಉದ್ಯಮ ಮೂರು ಪಟ್ಟು ಬೆಳವಣಿಗೆ ಸಾಧ್ಯತೆ
ನವದೆಹಲಿ: ಪ್ರಸ್ತುತ 12 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಭಾರತದ ಡಿಜಿಟಲ್ ಮಾಧ್ಯಮ ಮತ್ತು ಮನರಂಜನಾ ಉದ್ಯಮವು 2030ರ ವೇಳೆಗೆ ಗಾತ್ರದಲ್ಲಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ.ಭಾರತದ ಡಿಜಿಟಲ್ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಕೆಲ ವರ್ಷಗಳಲ್ಲಿ ಮೂರು ಪಟ್ಟು ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಸೀರ್ ರಿಸರ್ಚ್ ವರದಿ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ, ನಾನ್-ರಿಯಲ್ ಮನಿ ಗೇಮಿಂಗ್ (ಆರ್ ಎಂಜಿ) ಮತ್ತು ಒಟಿಟಿ ವೀಡಿಯೊದ ಹೆಚ್ಚಿದ ಬಳಕೆಯು ಡಿಜಿಟಲ್ […]
ಭಾರತದ ಐತಿಹಾಸಿಕ ಸಾಧನೆಯ ಹಿನ್ನೋಟ : ಏಷ್ಯನ್ ಗೇಮ್ಸ್ 2023
ಹೈದರಾಬಾದ್: ಈ ವರ್ಷದ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಭಾರತದ ಪಾಲಿಗೆ ಅವಿಸ್ಮರಣೀಯ.ಈ ವರ್ಷ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿ ದಾಖಲೆ ನಿರ್ಮಿಸಿದೆ. ಈ ಅವಿಸ್ಮರಣೀಯ ಕ್ರೀಡಾ ಕೂಟದ ಹಿನ್ನೋಟ. ನಮ್ಮ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯಗಳು ಮತ್ತು 4 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಕ್ರೀಡಾ ಕೂಟದಲ್ಲಿ ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚಿನ ಪದಕವನ್ನು ಬಾಚಿಕೊಂಡು ದಾಖಲೆ […]
ನೆರೆಯ ದೇಶಗಳಲ್ಲಿ ಭಾರಿ ಏರಿಕೆ : ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ
ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಕಡಿಮೆಯಾಗಿದ್ದರೆ, ನೆರೆಯ ಮತ್ತು ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲಿ ಅವುಗಳ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.ನವೆಂಬರ್ 2021 ಮತ್ತು ನವೆಂಬರ್ 2023ರ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. “ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಸವಾಲನ್ನು ಎದುರಿಸುತ್ತಿರುವ ಮೋದಿ ಸರ್ಕಾರ ನಾಗರಿಕರನ್ನು ಆರ್ಥಿಕ ಹೊರೆಯಿಂದ […]