ಒಂದೇಟಿಗೆ ನಾಲ್ಕು ಹಕ್ಕಿ!! ಒಂದೇ ಬಾರಿಗೆ ನಾಲ್ಕು ಟಾರ್ಗೆಟ್ ಗಳನ್ನು ಧ್ವಂಸ ಮಾಡಿ ಶಕ್ತಿ ಪ್ರದರ್ಶಿಸಿದ ಭಾರತದ ಆಕಾಶ್ ಮಿಸೈಲ್ ಲಾಂಚರ್!
ಹೈದರಾಬಾದ್: ಆಂಧ್ರಪ್ರದೇಶದ ಸೂರ್ಯಲಂಕಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಇತ್ತೀಚೆಗೆ ನಡೆದ ‘ಅಸ್ತ್ರಶಕ್ತಿ 2023’ ವಾಯು ವ್ಯಾಯಾಮದ ಸಮಯದಲ್ಲಿ ಭಾರತದಲ್ಲಿ ನಿರ್ಮಿಸಲಾದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಶಕ್ತಿಯನ್ನು ಪ್ರದರ್ಶಿಸಲಾಯಿತು. ಡಿಸೆಂಬರ್ 12 ರಂದು ಭಾರತೀಯ ವಾಯುಪಡೆ (ಐಎಎಫ್) ನಡೆಸಿದ ಅಸ್ತ್ರಶಕ್ತಿ ವ್ಯಾಯಾಮದ ಸಮಯದಲ್ಲಿ ಒಂದೇ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆಯು ಏಕಕಾಲದಲ್ಲಿ ನಾಲ್ಕು ಮಾನವರಹಿತ ವೈಮಾನಿಕ ಗುರಿಗಳನ್ನು ಹೊಡೆದುರುಳಿಸಿದೆ. ಒಂದೇ ಫೈರಿಂಗ್ ಘಟಕವನ್ನು ಬಳಸಿಕೊಂಡು ಕಮಾಂಡ್ ಮಾರ್ಗದರ್ಶನದ ಮೂಲಕ ಸುಮಾರು 30 ಕಿಮೀ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಾಲ್ಕು ಗುರಿಗಳನ್ನು […]
ಹೆಬ್ರಿ: ಭೂ ಹಿಡುವಳಿದಾರರು ಜಮೀನಿನ ಮಾಹಿತಿಯನ್ನು FRUITS ತಂತ್ರಾಂಶದಲ್ಲಿ ತಕ್ಷಣ ದಾಖಲಿಸಿ
ಹೆಬ್ರಿ: ಸರ್ಕಾರದ ಆದೇಶದಂತೆ ಜಿಲ್ಲೆಯ ಹೆಬ್ರಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದ್ದು, ಹೆಬ್ರಿ ತಾಲೂಕಿನ ಸಾಗುವಳಿ ಭೂಮಿಯ ಹಿಡುವಳಿದಾರರಿಗೆ ಸರಕಾರದಿಂದ ಬರ ಪರಿಹಾರದ ಮೊತ್ತವು ನೇರವಾಗಿ ರೈತರಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಆದ್ದರಿಂದ ಹೆಬ್ರಿ ತಾಲೂಕಿನ ಎಲ್ಲಾ ಸಾಗುವಳಿ ಭೂಮಿ ಹೊಂದಿದ ಸಾರ್ವಜನಿಕರು ತಮ್ಮ ಕೃಷಿ ಜಮೀನಿನ ಪಹಣಿಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲು ತಮ್ಮ ಸಮೀಪದ ತಾಲೂಕು ಕಛೇರಿ, ಗ್ರಾಮಕರಣಿಕರ ಕಚೇರಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೊಂದಿಗೆ […]
ಸಮಾರಂಭ, ಖಾದ್ಯ ಮಳಿಗೆಗಳಲ್ಲಿ ಮರು ಬಳಕೆಯ ವಸ್ತುಗಳನ್ನು ಬಳಸುವುದು ಕಡ್ಡಾಯ: ಉಡುಪಿ ನಗರಸಭೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ, ಮದುವೆ ಹಾಲ್, ಹೊಟೇಲ್‌ಗಳಲ್ಲಿ ಸಮಾರಂಭ ಮಾಡುವಾಗ ಹಾಗೂ ರಸ್ತೆ ಬದಿ ಟೀ, ಕಾಫಿ, ತಿಂಡಿ ಮಾರಾಟ ಮಾಡುವವರು ರಾಜ್ಯ ಸರ್ಕಾರದ ನಿರ್ದೇಶನದಂತೆ ರೆಡ್ಯೂಸ್,ರೀಯೂಸ್ ಹಾಗೂ ರೀಸೈಕಲ್ ಮಾದರಿಯಲ್ಲಿ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು ಹಾಗೂ ಪ್ರಸ್ತುತ ಬಳಸುತ್ತಿರುವ ಪೇಪರ್ ಪ್ಲೇಟ್, ಪೇಪರ್ ಗ್ಲಾಸ್ ಮತ್ತು ಟಿಶ್ಯೂಗಳನ್ನು ಬಳಸಬಾರದು. ಉಡುಪಿ ನಗರವನ್ನು ಕಸ ಮುಕ್ತ ನಗರವನ್ನಾಗಿಸಲು, ಸಾರ್ವಜನಿಕರ ಆರೋಗ್ಯ ಕಾಪಾಡುವ […]
ಕೆರಾಡಿ ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ನಟ ರಿಷಬ್ ಶೆಟ್ಟಿ ನಿರ್ಧಾರ: ಕಲಿತ ಶಾಲೆ ಉಳಿವಿಗೆ ಪಣ
ಕುಂದಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಾವು ಓದಿದ್ದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇತ್ತೀಚಿಗೆ ಹುಟ್ಟೂರು ಕೆರಾಡಿಗೆ ಭೇಟಿ ನೀಡಿದ್ದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಮಾತನಾಡಿದ್ದಾರೆ. ಈ […]
ಶಿರೂರಿನಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ: ಇಬ್ಬರು ಮೃತ್ಯುವಶ
ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಮೃತರನ್ನು ಅಬ್ಸುಲ್ ಸತ್ತರ್ (45 ) ಹಡವಿನಕೋಣೆ ಶಿರೂರು ಮಿಸ್ಬಾ ಯೂಸುಫ್ (48) ಕುದ್ವಾಯಿ ರೋಡ್, ಭಟ್ಕಳ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆಗೆ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ಎಂಬ ದೋಣಿಯಲ್ಲಿ 3 ಜನ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದಾಗ ಸೋಮವಾರ ಮುಂಜಾನೆ 01.30 ಗಂಟೆಗೆ ಶಿರೂರು […]