ಪಾಕಿಸ್ತಾನದ ಹಲವೆಡೆ ಇಂಟರ್​ನೆಟ್​ ಸಂಪೂರ್ಣ ಸ್ಥಗಿತ : ಇಮ್ರಾನ್ ಪಕ್ಷದಿಂದ ವರ್ಚುವಲ್​ ಸಭೆ

ಲಾಹೋರ್​ (ಪಾಕಿಸ್ತಾನ): ಅಪ್ಲಿಕೇಶನ್‌ಗಳು, ವಿಶೇಷವಾಗಿ ವೆಬ್‌ಸೈಟ್ ಆವೃತ್ತಿಗಳು ಸುಮಾರು 8 ಗಂಟೆಯಿಂದ ಸ್ಥಗಿತಗೊಂಡಿವೆ. ಸ್ಥಳೀಯ ಸಮಯ ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿ, ಲಾಹೋರ್, ಮೀರ್​ ಪುರ್ ಖಾಸ್ ಮತ್ತು ರಾವಲ್ಪಿಂಡಿ ನಗರಗಳು ದೇಶದ ಅತಿ ಹೆಚ್ಚು ಇಂಟರ್​ನೆಟ್​ ಸ್ಥಗಿತದ ತೊಂದರೆ ಅನುಭವಿಸಿದ ನಗರಗಳಾಗಿವೆ. ಕೆಲವು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಲು WhatsApp ಅನ್ನು ಬಳಸಿಕೊಂಡಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್​ ಪಕ್ಷವು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ವರ್ಚುವಲ್ ಸಭೆಯನ್ನು ಆಯೋಜಿಸಿತ್ತು. ಆದರೆ ಅದಕ್ಕೂ ಮೊದಲು X, […]

16 ಜನ ಸಾವು, ಅನೇಕರಿಗೆ ಗಾಯ: ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದಲ್ಲಿ ಗುಂಡಿನ ದಾಳಿ

ಗ್ವಾನಾಜುವಾಟೊ (ಮೆಕ್ಸಿಕೋ): ಗ್ವಾನಾಜುವಾಟೊ ರಾಜ್ಯದ ಅಧಿಕಾರಿಗಳು ಗುಂಡಿನ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಲ್ವಾಟಿಯೆರಾ ನಗರದಲ್ಲಿ ಹಿಂಸಾಚಾರ ನಡೆದಿದೆ. ಇದುವರೆಗೆ, 16 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ ಅಂತಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ. ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ಮುಂಜಾನೆ ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 16ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.ಮೆಕ್ಸಿಕೋದ […]

ಹೊಸ ಪ್ರಸ್ತಾವನೆ ಮುಂದಿಟ್ಟ ಕತಾರ್: ಇಸ್ರೇಲ್-ಹಮಾಸ್ ಕದನವಿರಾಮ

ಗಾಝಾ : ಕದನವಿರಾಮಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಪುನರಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ. ಡಿಸೆಂಬರ್ 16 ರಿಂದ ನಾರ್ವೆಯಲ್ಲಿ ನಡೆದ ಅಘೋಷಿತ ಸಭೆಗಳಲ್ಲಿ ಉನ್ನತ ಮಟ್ಟದ ಕತಾರ್ ನಿಯೋಗವು ಇಸ್ರೇಲ್ ಅಧಿಕಾರಿಗಳೊಂದಿಗೆ ಈ ಪ್ರಸ್ತಾಪಗಳನ್ನು ಚರ್ಚಿಸುತ್ತಿದೆ ಎಂದು ಮೂಲಗಳು ಭಾನುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ. ಗಾಜಾ ಪಟ್ಟಿಯಲ್ಲಿ ಮತ್ತೊಂದು ಹಂತದ ಕದನ ವಿರಾಮ ಜಾರಿಗೊಳಿಸಲು ಕತಾರ್ ಹೊಸ ಪ್ರಸ್ತಾಪಗಳನ್ನು ಮಂಡಿಸಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ.ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ […]

ಕಾರ್ಕಳ: ವ್ಯಕ್ತಿ ನಾಪತ್ತೆ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ನಂದಳಿಕೆ ಗ್ರಾಮದ ಅಂಬಾಡಾಗಿ ಮನೆಯ ನಿವಾಸಿ ವಿಠಲ ಆಚಾರ್ಯ(56) ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಡಿ. 12ರಂದು ಬೆಳಿಗ್ಗೆ ಮನೆಯಿಂದ ಪಿಲಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆಲಸಕ್ಕೆಂದು ಹೋದವರು, ಇದುವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಇವರು ಎಲ್ಲಿಯಾದರೂ ಕಂಡು ಬಂದಲ್ಲಿ 9480805462, 7411973927 ಕರೆ ಮಾಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಗ ಸಮುದಾಯದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಯಶ್ ಪಾಲ್ ಸುವರ್ಣ

ಬ್ರಹ್ಮಾವರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ, ಇದರ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೊರಗ ಸಮುದಾಯದ ಅಭಿವೃದ್ಧಿ, ಸಮಸ್ಯೆಗಳು ಹಾಗೂ ಪರಿಹಾರ ಉಪಾಯಗಳ ಬಗ್ಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಶಾಸಕ ಯಶ್ ಪಾಲ್ ಸುವರ್ಣ ವಹಿಸಿ, ಕೊರಗ ಸಮುದಾಯದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ತಕ್ಷಣ ಸ್ಪಂದಿಸಲು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಗಿರಿಜನ ಸಮಗ್ರ ಅಭಿವೃಧ್ದಿ ಇಲಾಖೆಯ ಯೋಜನಾಧಿಕಾರಿ ದೂದ್ ಪೀರ್, ಉಪ […]