ಆಯುರಾರೋಗ್ಯಕ್ಕಾಗಿ ನಂದಿ ಆರ್ಗಾನಿಕ್ ಫಾರ್ಮ್ ಹೌಸ್ ನ ಸಾವಯವ ಮೊರಿಂಗಾ(ನುಗ್ಗೆ) ಉತ್ಪನ್ನಗಳು
ಮಾನವ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಮುಖ್ಯ ಅಷ್ಟೇ ನೆಮ್ಮದಿಯು ಆತನ ದೇಹದಿಂದಲೂ ಅವನಿಗೆ ದೊರೆಯುವುದು ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಮನುಷ್ಯನಿಗೆ ತನ್ನ ದೇಹ ಸಹಕರಿಸಿದಾಗ ಮಾತ್ರ ಆತನ ಮನಸ್ಸು ದೃಢವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಕೊಪ್ಪಳದ ತಾವರೆಕೆರೆಯಲ್ಲಿ ಡಾ. ಬಸಯ್ಯ ಹಿರೇಮಠ ಎಂಬುವವರು “ನಂದಿ ಆರ್ಗಾನಿಕ್ ಫಾರ್ಮ್ ಹೌಸ್” ಎಂಬ ಒಂದು ಸಂಸ್ಥೆಯನ್ನು ನಿರ್ಮಿಸಿ ಸಂಪೂರ್ಣವಾಗಿ ಸಾವಯವತೆಯನ್ನು ಉಳಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಂದಿದ್ದಾರೆ. ಈ ಕಂಪನಿಯು ಕರ್ನಾಟಕದ ಏಕೈಕ ಮೋರಿಂಗಾ […]
ಕಾರ್ಕಳ: ಡಿ. 23 ರಂದು ಜ್ಞಾನಸುಧಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿ
ಕಾರ್ಕಳ: ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್‌ರವರ ಜನ್ಮದಿನದಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಡಿಸೆಂಬರ್ 23 ರಂದು ಸಂಜೆ 5 ಗಂಟೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜೆ.ಇ.ಇ. ಅಡ್ವಾನ್ಸ್ಡ್ ಮೂಲಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ ಮೂಲಕ ನ್ಯಾಶನಲ್ […]
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ವತಿಯಿಂದ ವೃದ್ದೆಯ ಬಾಳಿಗೆ ದೊರಕಿತು ನೆಮ್ಮದಿಯ ಸೂರು ‘ಗೃಹಲಕ್ಷ್ಮಿ’!
ಕಾಪು: ಪೆರ್ಡೂರು ಗ್ರಾಮದ ಬಾಳೆಬೈಲು ಕಾಲನಿಯ ನಿವಾಸಿ ಗುಲಾಬಿ ಶೇರಿಗಾರ್ 76ರ ವಯಸ್ಸಿನ ಹಿರಿಯ ಜೀವಿ. ಗಂಡ, ಮಕ್ಕಳು ಬಂಧು-ಬಾಂಧವರೆಂಬ ಯಾವ ಕೌಟುಂಬಿಕ ಕೊಂಡಿಗಳೇ ಇಲ್ಲದ ಬದುಕು ಸವೆಸುತ್ತಿರುವ ಒಂಟಿ ಜೀವ. ಕೆಲ ವರ್ಷಗಳ ಹಿಂದೇ ಮಾನವೀಯ ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಕೊಡಮಾಡಿದ ಐದು ಸೆಂಟ್ಸ್ ಜಾಗದಲ್ಲಿ ಪುಟ್ಟ ಮನೆಯನ್ನು ಕಟ್ಟಿಕೊಂಡು ಹೇಗೂ ಬದುಕು ನಡೆಸುತ್ತಿದ್ದರು. ಆದರೆ ಮಳೆ-ಗಾಳಿಗೆ ತೋಯ್ದ ಆ ಪುಟ್ಟ ಬಿಡಾರ ಒಂದು ದಿನ ಧರೆಗುರುಳಿತು. ಒಂಟಿ ಜೀವ ಗುಲಾಬಿಯವರ ಬದುಕು ಬೀದಿಗೆ ಬಿದ್ದಿತು. […]
ಮಣಿಪಾಲ: ಡಿ.23- 24 ರಂದು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ ವತಿಯಿಂದ 34 ನೇ ರಾಜ್ಯಮಟ್ಟದ ಇಂಟರ್ ಡೋಜೋ ಚಾಂಪಿಯನ್ ಶಿಪ್
ಮಣಿಪಾಲ: ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ ಕರಾವಳಿಯ ಅತಿದೊಡ್ಡ ಮಾರ್ಷಲ್ ಆರ್ಟ್ಸ್ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ 200 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಉದಯೋನ್ಮುಖ ಕರಾಟೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಡೋಜೋ ಚಾಂಪಿಯನ್ ಶಿಪ್ ಅನ್ನು ಆಯೋಜಿಸುತ್ತಿದೆ. ಈ ಬಾರಿಯ 34 ನೇ ರಾಜ್ಯಮಟ್ಟದ ಇಂಟರ್ ಡೋಜೋ ಚಾಂಪಿಯನ್ ಶಿಪ್ ಡಿ.23 ಹಾಗೂ 24 ರಂದು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ನಡೆಯಲಿದೆ. ವಿವಿಧ ಭಾಗಗಳಿಂದ 1800 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಹಾಗೂ […]
ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ ದಿವೀಶ್ ರಾಜ್ಯ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯವರು ಡಿ.16 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದಿವೀಶ್ ಶೆಣೈ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.