ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿವಕುಮಾರ್ (35) ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ 11 ರಂದು ಆಸ್ಪತ್ರೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಬಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿ.17 ರಂದು ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಭಿನಂದನಾ ಸಮಾರಂಭ

ಉಡುಪಿ: ತುಳುನಾಡಿನ ಸಾಹಿತ್ಯಿಕ-ಸಾಂಸ್ಕೃತಿಕ-ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಇವರ 80 ನೇ ಸಂವತ್ಸರದ ಪ್ರಯುಕ್ತ ಸಿರಿತುಪ್ಪೆ ಕಾರ್ಯಕ್ರಮವನ್ನು ಡಿ.17 ರಂದು ಬೆಳಿಗ್ಗೆ 8.45 ರಿಂದ ಬನ್ನಂಜೆ ನಾರಾಯಣಗುರು ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ನಿಮಿತ್ತ ವಿಚಾರಗೋಷ್ಠಿ, ಆರಾಧನಾ ಗೋಷ್ಠಿ, ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ, ಪಾಡ್ದನ, ಜಾನಪದ ನೃತ್ಯ, ಯಕ್ಷಗಾನ, ತುಳುನಾಡ ಪರಿಕರಿಗಳ ಪ್ರದರ್ಶನ ನಡೆಯಲಿದೆ.

ಪಡುಬಿದ್ರಿ: ಅಕ್ರಮ ಮರಳು ಸಾಗಾಟದ ವಾಹನ ವಶ; ಪ್ರಕರಣ ದಾಖಲು

ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ನಯಾತ್ ಕಟ್ಟಡದ ಮುಂಭಾಗದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರನ್ನು ಮರಳು ಸಹಿತ ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಟಿಪ್ಪರ್ ಮಾಲಕ ಗುರುಪುರದ ರಾಜೇಶ್ ಹಾಗೂ ಚಾಲಕ ನಂದಿಕೂರು ದೇವಸ್ಥಾನ ಬಳಿಯ ನಿವಾಸಿ ಸರ್ಫ್ರಾಜ್ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. ಟಿಪ್ಪರ್ ಮಾಲಿಕನ ಸೂಚನೆಯಂತೆ ವಾಹನದಲ್ಲಿ ಮರಳು ತುಂಬಿಸಿ ಪಡುಬಿದ್ರಿ ಬೀಚ್ ಕಡೆ ಸಾಗಿಸಲು ಹೊರಟಿದ್ದ ಟಿಪ್ಪರನ್ನು ಪಡುಬಿದ್ರಿ ಪಿಎಸ್ ಐ ಪ್ರಸನ್ನ ಎಂ.ಎಸ್, ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ […]

ಡಿ.17 ರಂದು ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅಪೂರ್ವ ಸಮ್ಮಿಲನ: ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ

ಕುಂದಾಪುರ: ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ದಶಮಾನೋತ್ಸವದ ಪೂರ್ವಭಾವಿಯಾಗಿ 18 ಪೇಟೆಯ ಜಿ. ಎಸ್. ಬಿ. ಸಮಾಜ ಭಾಂದವರ ಅಪೂರ್ವ ಸಮ್ಮಿಲನ ಕಾರ್ಯಕ್ರಮವು ಡಿ.17 ರಂದು ಬೆಳಗ್ಗೆ9.30 ರಿಂದ ದೇವಸ್ಥಾನದ ಸುಕೃತೀಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 9.15 ಕ್ಕೆ ದೇವತಾ ಪ್ರಾರ್ಥನೆ ನಂತರ ಶ್ರೀ ಗುರುವರ್ಯರ ಭಾವಚಿತ್ರದೊಂದಿಗೆ ಸರ್ವ ಗಣ್ಯರೊಂದಿಗೆ ಮೆರವಣೆಗೆಯಲ್ಲಿ ಸಭಾಗ್ರಹ ಪ್ರವೇಶ ನಡೆಯಲಿದೆ. ಬಳಿಕ ಕಸ್ತೂರ್ಬಾ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಯಾದವೇಂದ್ರ […]

ಐಪಿಎಲ್ ನಾಯಕ ಸ್ಥಾನದ ಯುಗಾಂತ್ಯಕ್ಕೆ ಮುಂಬೈ ಇಂಡಿಯನ್ಸ್ ನಿಂದ ಭಾವಪೂರ್ಣ ವಿದಾಯ

ಮುಂಬೈ: ಮುಂಬೈ ಇಂಡಿಯನ್ಸ್ (MI) ತಂಡವು ನಾಯಕ ಸ್ಥಾನದಿಂದ ಹೊರನಡೆಯುತ್ತಿರುವ ತನ್ನ ಆಟಗಾರ ರೋಹಿತ್ ಶರ್ಮಾ ಅವರಿಗೆ ಹೃತ್ಪೂರ್ವಕ ವಿದಾಯ ಸಲ್ಲಿಸಿದೆ. ಶರ್ಮಾ ಅವರ ಐಪಿಎಲ್ ಪಯಣದ ಯುಗ ಅಂತ್ಯವಾಗಿದೆ. ಶರ್ಮಾ ಅವರ ನಾಯಕತ್ವದಲ್ಲಿ, ತಂಡವು 2013 ರಿಂದ ಐದು IPL ಪ್ರಶಸ್ತಿಗಳು ಮತ್ತು ಚಾಂಪಿಯನ್ಸ್ ಲೀಗ್ T20 ಗೆಲುವು ಸೇರಿದಂತೆ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಶರ್ಮಾ ಅವರ ಅಪ್ರತಿಮ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿದೆ. ಇನ್ನು ಮುಂದೆ ತಂಡದ ನ್ಯಾಕತ್ವವನ್ನು ಹಾರ್ದಿಕ್ […]