ಕ್ರಿಕೆಟ್ ದಂತಕತೆ ಎಂ.ಎಸ್. ಧೋನಿಯ ಜರ್ಸಿ ನಂ.7 ಇನ್ನು ಮುಂದೆ ಆಟಗಾರರಿಗೆ ಲಭ್ಯವಿಲ್ಲ: ಜೆರ್ಸಿಗೆ ನಿವೃತ್ತಿ ನೀಡಲು BCCI ನಿರ್ಧಾರ
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಐಕಾನಿಕ್ ನಂ.7 ಜೆರ್ಸಿ ಇನ್ನು ಮುಂದೆ ಯಾವುದೇ ಭಾರತೀಯ ಆಟಗಾರ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಧೋನಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದ ಮೂರು ವರ್ಷಗಳ ನಂತರ, ಧೋನಿ ಅವರ ವೃತ್ತಿಜೀವನದುದ್ದಕ್ಕೂ ಅವರ ಜೊತೆ ಇದ್ದ ಸಂಖ್ಯೆಗೆ ನಿವೃತ್ತಿ ನೀಡಲು BCCI ನಿರ್ಧರಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, 2004 ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ ಧೋನಿ ಕ್ರೀಡೆಗೆ ನೀಡಿದ ಕೊಡುಗೆಗೆ ಗೌರವ […]
ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳದ ಆರೋಪ: ಜೀವನ ಕೊನೆಗೊಳಿಸಲು ಅನುಮತಿ ಕೋರಿ ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ; ವರದಿ ಕೇಳಿದ ಸಿಜೆಐ
ಲಕ್ನೋ: ಇತರರಿಗೆ ನ್ಯಾಯ ನೀಡಬೇಕಾಗಿರುವ ನ್ಯಾಯಾಧೀಶೆಯೆ ನ್ಯಾಯಕಾಗಿ ಮೊರೆ ಇಡುವ ಪ್ರಸಂಗ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳಾ ಸಿವಿಲ್ ನ್ಯಾಯಾಧೀಶೆಯೊಬ್ಬರಿಗೆ ಎದುರಾಗಿದೆ. ಹಿರಿಯ ನ್ಯಾಯಾಧೀಶರಿಂದ ಲೈಗಿಂಕ ಶೋಷಣೆ ಎದುರಿಸುತ್ತಿರುವ ನ್ಯಾಯಾಧೀಶೆಯು ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತಮ್ಮ ಹಿರಿಯರಿಂದ ಲೈಂಗಿಕ ಕಿರುಕುಳ ಎದುರಿಸುತ್ತಿರುವುದನ್ನು ಆರೋಪಿಸಿದ್ದಾರೆ. “ಇನ್ನು ನನಗೆ ಬದುಕುವ ಇಚ್ಛೆ ಇಲ್ಲ” ಎಂದಿರುವ ಅವರು ನ್ಯಾಯಯುತವಾದ ವಿಚಾರಣೆಯನ್ನು ಪಡೆಯುವ ಭರವಸೆ ಇಲ್ಲದ ಕಾರಣ ತನ್ನ ಜೀವನವನ್ನು ಕೊನೆಗೊಳಿಸಲು ಅನುಮತಿ ಕೋರಿದ್ದಾರೆ. ಗುರುವಾರ […]
ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ
ಉಡುಪಿ: ಶ್ರೀಕೃಷ್ಣಮಠಕ್ಕೆ ಮಾಜಿ ಉಪಮುಖ್ಯಮಂತ್ರಿಗಳಾದ ಈಶ್ವರಪ್ಪನವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಜಿಲ್ಲಾ ವಕ್ತಾರರಾದ ರಾಘವೇಂದ್ರ ಕಿಣಿ, ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಕುಂದಾಪುರ: ಇಲ್ಲಿನ ಪ್ರಸಿದ್ದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಡಿ.16 ರಂದು ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ರಥೋತ್ಸವ ಪ್ರಯುಕ್ತ ಬುಧವಾರದಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಹೋಮ, ಅಥರ್ವಶೀರ್ಷ, ಉಪನಿಷತ್ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ, ರಂಗಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ […]