ಟೆನ್ನಿಕೋಯಿಟ್ ಪಂದ್ಯಾಟ: ಶ್ರೀ ವೆಂಕಟರಮಣ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಕೊಡಗು ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಕೋಯಿಟ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂರ್ವಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟ: ಕೆ.ಬಿ.ಕೆ ಕುರ್ಕಾಲು ತಂಡಕ್ಕೆ 31 ಪ್ರಶಸ್ತಿ

ಹಿರಿಯಡ್ಕ: 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ್ದ ಕೆ.ಬಿ.ಕೆ ಕುರ್ಕಾಲು ತಂಡವು 12 ಪ್ರಥಮ, 11 ದ್ವಿತೀಯ, 8 ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎ ಪೂಜಾರಿ, ಮಾಜಿ ಅಧ್ಯಕ್ಷ ಭುವನೇಶ್ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಾದ ಶರಣ್ಯ, ರೈನಾರ್, ಅಮಯ್, ಅವಿಷ್, ಆದಿತ್ಯ, ಪ್ರೀತಮ್, ನಿಹಾಲ್, ಮನೀಶ್, ಯತಿನ್, ಶ್ರೀವತ್ಸ, ಸೃಜನ್, ಮೋಕ್ಷ,ತನಿಶ್, ನಿಕೊಲ್, ಆತ್ಮೀಕ್, ಐಫಾಜ್, ತಾಹಿರ್, ಫಿಧಾ, ಫಾಹಿಜ್, ಮಣಿಕಂಠ ಹಾಗೂ ಹರ್ಷ ಮನೋಹರ […]

ಪ್ರೆಸ್ಟೀಜ್ ಫಾಲ್ಕನ್ ಸಿಟಿ- ಕರಾವಳಿ ಕೂಟ ವತಿಯಿಂದ ಪ್ರಪ್ರಥಮ ನಮ್ಮ ಕರಾವಳಿ ಉತ್ಸವ ಆಯೋಜನೆ: ರಾಜ್ಯ ರಾಜಧಾನಿಯಲ್ಲಿ ತುಳುನಾಡ ಕಲರವ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ, ಇಲ್ಲಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಕರಾವಳಿ ಪ್ರದೇಶದ ನಿವಾಸಿಗಳ ಗುಂಪು “ನಮ್ಮ ಕರಾವಳಿ ಉತ್ಸವ” ಆಚರಿಸಿ ಕರಾವಳಿಯ ಕಂಪನ್ನು ರಾಜ್ಯಧಾನಿಯಲ್ಲೂ ಪಸರಿಸಿದೆ. ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ 2500 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಭಾರತದ ವಿವಿಧ ಭಾಗಗಳಿಂದ 5000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇದರಲ್ಲಿ ಸುಮಾರು 350 ಕ್ಕೂ ಹೆಚ್ಚು ಜನರು ಕರಾವಳಿ ಪ್ರದೇಶದವರು. ಕರಾವಳಿಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಆಚರಿಸುವ […]