ನ್ಯೂಯಾರ್ಕ್ ಸ್ಟ್ರೈಕರ್ಸ್​​ಗೆ ಚಾಂಪಿಯನ್ ಪಟ್ಟ: ಅಬುಧಾಬಿ ಟಿ10

ಅಬುಧಾಬಿ:ಕಳೆದ ಎರಡು ಆವೃತ್ತಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್‌ ಜಯ ದಾಖಲಿಸಿತ್ತು. ಅದರಲ್ಲೂ 2022ರ ಆವೃತ್ತಿಯ ಫೈನಲ್​ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನೇ ಮಣಿಸಿ ಡೆಕ್ಕನ್​​ ಚಾಂಪಿಯನ್​ ಆಗಿತ್ತು. 2023ರ ಫೈನಲ್​​ನಲ್ಲಿ ಈ ಎರಡು ತಂಡಗಳೇ ಮುಖಾಮುಖಿ ಆದವು. ಆದರೆ ಈ ಬಾರಿ ಕಿರನ್​ ಪೊಲಾರ್ಡ್​​ ನಾಯಕತ್ವದ ನ್ಯೂಯಾರ್ಕ್​ ತಂಡ ಗೆದ್ದು ಬೀಗಿತು. ನ್ಯೂಯಾರ್ಕ್ ಸ್ಟ್ರೈಕರ್ಸ್​​ ತಂಡಕ್ಕೆ ಇದು ಎರಡನೇ ಆವೃತ್ತಿಯಾಗಿದೆ. ಕಳೆದ ಬಾರಿ ಫೈನಲ್ಸ್​ ಪ್ರವೇಶಿಸಿ ರನ್​ರ್​ ಅಪ್​ ಆಗಿದ್ದ ಪಡೆ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್​ ಆಗಿದೆ.\ ಇಲ್ಲಿನ ಝಾಯೆದ್ […]

ಕದನವಿರಾಮ ನಿರ್ಣಯಕ್ಕೆ ವೀಟೋ; ಯುಎಸ್ ಕ್ರಮಕ್ಕೆ ವಿಶ್ವದ ರಾಷ್ಟ್ರಗಳ ಖಂಡನೆ

ವಿಶ್ವಸಂಸ್ಥೆ :”ಎರಡು ತಿಂಗಳ ಹೋರಾಟವು ಈಗಾಗಲೇ ಅಗಾಧ ಪ್ರಮಾಣದ ಸಾವು ಮತ್ತು ವಿನಾಶಕ್ಕೆ ಕಾರಣವಾಗಿದೆ ಮತ್ತು ತಕ್ಷಣದ ಕದನ ವಿರಾಮ ಈಗಿನ ತುರ್ತು ಅಗತ್ಯವಾಗಿದೆ” ಎಂದು ಜಾಂಗ್ ಹೇಳಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್, “ಕರಡನ್ನು ಯುಎಸ್ ವೀಟೋ ಮಾಡಿರುವುದಕ್ಕೆ ನಾವು ತೀವ್ರ ನಿರಾಶೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದ್ದಾರೆ. ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮವನ್ನು ಕೋರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕ […]

ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆ ಮುಂದುವರೆದಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಜಯಪುರ, ಅಜ್ಜಂಪುರ, ನಾಯಕನಹಟ್ಟಿ, ಹೊಸದುರ್ಗ, ಕಡೂರು, ಕೊಟ್ಟಿಗೆಹಾರ, ಎನ್ಆರ್ಪುರ, ತರೀಕೆರೆ, ಯುಗಟಿ, ಬೇಲೂರು, ಮೂರ್ನಾಡು, ಹುಂಚದಕಟ್ಟೆ, ಮಂಗಳೂರು ವಿಮಾನ ನಿಲ್ದಾಣ, ಭಾಗಮಂಡಲ, […]

ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ

ಉಡುಪಿ: ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಇಂದು ಬೆಳಿಗ್ಗೆ ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀಗಳನ್ನು ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ, ಗುರುಕಾಣಿಕೆ ಸಮರ್ಪಣೆ ಮಾಡಲಾಯಿತು ಶ್ರೀಗಳು ಭಜನಾ ಮಹೋತ್ಸವದ ದೀಪ ಪ್ರಜ್ವಲಿಸಿ ಆಶೀರ್ವದಿಸಿದರು . ನೂತನ ವರ್ಷದ ಶ್ರೀ ವೀರ ವಿಠಲ ದೇವರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎನ್ ಮಂಜುನಾಥ ಪಿ ನಾಯಕ್ […]

ಬ್ಯಾಂಕ್ ಆಫ್ ಬರೋಡ ವತಿಯಿಂದ ಹಣ್ಣಿನ ಗಿಡ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ

ಮಂಗಳೂರು: ಹಸಿರು ಜಗತ್ತು ಹಾಗೂ ಪ್ರಕಾಶಮಾನ ಭವಿಷ್ಯ ಎಂಬ ಗುರಿಯೊಂದಿಗೆ ಏರುತ್ತಿರುವ ತಾಪಮಾನ ತಡೆಗಟ್ಟಲು, ಹಸಿರು ಪರಿಸರ ಸಂರಕ್ಷಣೆ ಮಾಡುವ ಕಾಳಜಿಯೊಂದಿಗೆ ಬ್ಯಾಂಕ್ ಆಫ್ ಬರೋಡ ಇವರ ವತಿಯಿಂದ ಹಣ್ಣಿನ ಗಿಡಗಳ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ ಮಂಗಳೂರು ಸುತ್ತಮುತ್ತ ಕಾಲೇಜ್, ಶಾಲಾ ಪರಿಸರದಲ್ಲಿ ನಡೆಯಿತು. ಬ್ಯಾಂಕ್ ಆಫ್ ಬರೋಡದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ವಲಯ ಮುಖ್ಯಸ್ಥ ರಮೇಶ್ ಕಾನಡೆ ಹಾಗೂ DGM ಅಶ್ವಿನಿ ಕುಮಾರ್ ಇವರು ಹಣ್ಣಿನ ಗಿಡಗಳನ್ನು ಹಸ್ತಾಂತರ ಮಾಡಿ, ಗಿಡ […]