ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕ ಹುದ್ದೆಗಾಗಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ದ್ವಿತೀಯ ಪಿ ಯು ಸಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ ಹುದ್ದೆಗಳು: ಅರಣ್ಯ ಪಾಲಕ(Forest Guard)ವಯಸ್ಸಿನ ಮಿತಿ :ಕನಿಷ್ಠ: 18ಗರಿಷ್ಠ: 27(ಸಾಮಾನ್ಯ ಅಭ್ಯರ್ಥಿ)30(ಒಬಿಸಿ)32(ಎಸ್ ಸಿ/ಎಸ್ ಟಿ)ದೈಹಿಕ ಸದೃಢತೆಎತ್ತರ: 163cm(ಪುರುಷ ಅಭ್ಯರ್ಥಿ)150cm(ಮಹಿಳಾ ಅಭ್ಯರ್ಥಿ) ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು: ಫೋಟೋ, ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಸದೃಢತೆ,ವೈದ್ಯಕೀಯ ಪರೀಕ್ಷೆ ವಿಭಾಗವಾರು ಲಭ್ಯವಿರುವ ಹುದ್ದೆಗಳ ಸಂಖ್ಯೆ ಮಂಗಳೂರು-62, ಕೊಡಗು -26 […]

ಸೋಲಾರ್ ಅಲ್ಟ್ರಾ ವಯೋಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರ ಸೆರೆಹಿಡಿದ ಆದಿತ್ಯ-L1 ನೌಕೆ

ಬೆಂಗಳೂರು: ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿರುವ ಸೋಲಾರ್ ಅಲ್ಟ್ರಾ ವಯೋಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣವು 200-400 nm ತರಂಗಾಂತರ ಶ್ರೇಣಿಯಲ್ಲಿ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿಯಿತು. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ. ನವೆಂಬರ್ 20, 2023 ರಂದು, SUIT (ಸೌರ ನೇರಳಾತೀತ ಚಿತ್ರಣ ದೂರದರ್ಶಕ) ಪೇಲೋಡ್ ಅನ್ನು ಆನ್ ಮಾಡಲಾಗಿದೆ. ಯಶಸ್ವಿ ಪೂರ್ವ ನಿಯೋಜಿತ ಹಂತದ […]

ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ 41 ಸ್ಥಳಗಳಲ್ಲಿ ಎನ್.ಐ.ಎ ದಾಳಿ: ಭಯೋತ್ಪಾದಕಾ ಸಂಚಿನಲ್ಲಿ 15 ಜನ ವಶಕ್ಕೆ

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ 41 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡಗಳು ಶನಿವಾರ ದಾಳಿ ನಡೆಸಿದ್ದು, 15 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರು ಪುಣೆ ಮೂಲದವರಾಗಿದ್ದು, ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದರು. ವರದಿಗಳ ಪ್ರಕಾರ, ಕರ್ನಾಟಕದ ಕೆಲವು ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿದ್ದರೆ, ಮಹಾರಾಷ್ಟ್ರದಲ್ಲಿ ಪುಣೆ, ಥಾಣೆ ಗ್ರಾಮಾಂತರ, ಥಾಣೆ ನಗರ ಮತ್ತು ಮೀರಾ ಭಯಂದರ್‌ನಲ್ಲಿ ದಾಳಿ ನಡೆಸಲಾಗುತ್ತಿದೆ. ಅಂತರರಾಷ್ಟ್ರೀಯ ಸಂಪರ್ಕಗಳೊಂದಿಗೆ ದೊಡ್ಡ ಪಿತೂರಿ ಮತ್ತು ತನಿಖೆ ನಡೆಯುತ್ತಿರುವ […]

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್‌ಗೆ ಷರತ್ತು ಬದ್ದ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: 2017ರ ಸೆಪ್ಟೆಂಬರ್ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಾಯಕ್ ಈ ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ಆರೋಪಿ. ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ನಾಯಕ್ ಅವರು 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತಕ್ಕೆ ಇನ್ನಿತರ ಇಬ್ಬರು ಶ್ಯೂರಿಟಿ ಒದಗಿಸುವಂತೆ ಮತ್ತು ನ್ಯಾಯಾಲಯವು ನೀಡಿದ ಕಾರಣಗಳಿಗಾಗಿ ಅವರ ಹಾಜರಾತಿಗೆ […]

ಔದ್ಯೋಗಿಕ ಜೀವನದಲ್ಲಿ ಹೊಂದಾಣಿಕೆಗಾಗಿ ಮೃದು ಕೌಶಲ್ಯ ಅತ್ಯವಶ್ಯಕ: ಡಾ. ಜಿ. ರಾಬರ್ಟ್ ಕ್ಲೈವ್

ಉಡುಪಿ: ಮೃದು ಕೌಶಲ್ಯ(ಸಾಫ್ಟ್ ಸ್ಕಿಲ್) ಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳುವುದರಿಂದ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಕೆಲಸದ ಒತ್ತಡ ಮತ್ತು ಪರಿಸರದಲ್ಲಿ ಹೊಂದಿಕೊಂಡು ಹೋಗಲು ಮೃದು ಕೌಶಲ್ಯಗಳು ಸಹಾಯ ಮಾಡುತ್ತದೆ ಎಂದು ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ಗ್ರಾಮೀಣಾಭಿವೃದ್ಧಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಿ. ರಾಬರ್ಟ್ ಕ್ಲೈವ್ ಹೇಳಿದರು. ನಗರದ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಗ್ರಾಮೀಣ ಅಭಿವೃದ್ಧಿ ವಿಭಾಗ ಮತ್ತು […]