3 ವರ್ಷದಲ್ಲಿ 400 ಸಿಂಹಗಳ ಮರಣ : 5 ವರ್ಷಗಳಲ್ಲಿ ಹುಲಿ ದಾಳಿಗೆ 293, ಆನೆ ದಾಳಿಗೆ 2,657 ಜನ ಸಾವು

ನವದೆಹಲಿ: ಕಳೆದ ಐದು ವರ್ಷದಲ್ಲಿ (2018-2022) ಹುಲಿ ದಾಳಿಗೆ 293 ಮಂದಿ ಬಲಿಯಾಗಿದ್ದು, 2018-19 ಮತ್ತು 2022-23ರ ಅವಧಿಯಲ್ಲಿ 2,657 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರೆದಿದ್ದು, ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ […]

2 ಕಾರು 13 ದ್ವಿಚಕ್ರವಾಹನಗಳು ಭಸ್ಮ : ಅಪಾರ್ಟ್​​​ಮೆಂಟ್​​​ನಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ರಾಜ್ ನಗರ ಭಾಗ-II ಪ್ರದೇಶದ ವೈಷ್ಣವಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎರಡು ಕಾರುಗಳು ಮತ್ತು 13 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ, ಈ ಅಗ್ನಿ ಅವಘಡದಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.ಅಪಾರ್ಟ್‌ಮೆಂಟ್‌ವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 13 ದ್ವಿಚಕ್ರ ವಾಹನಗಳು, 2 ಕಾರುಗಳು ಸುಟ್ಟು ಕರಕಲಾಗಿವೆ. 5 […]

ಉತ್ತರ ಕನ್ನಡದಲ್ಲಿ ವಿನೂತನ ಕ್ರಮ ಜಾರಿ : ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕ್ಯೂಆರ್ ಕೋಡ್

ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಲೋಕಸ್ಪಂದನ ಕ್ಯೂಆರ್ ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ, ಸಲಹೆಗಳನ್ನು ಮುಕ್ತವಾಗಿ ನೀಡಬಹುದು. ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗಿದ್ದು, ಠಾಣೆಗೆ ಭೇಟಿ ನೀಡುವವರು ಪೊಲೀಸರ ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದು. ಈ ಕ್ರಮವು ಪೊಲೀಸರಿಗೆ ಉತ್ತಮ ಸೇವೆ ನೀಡಲು ಮತ್ತು ಸಿಬ್ಬಂದಿಯ ದಕ್ಷತೆ ಸುಧಾರಿಸುವುದರೊಂದಿಗೆ ಪಾರದರ್ಶಕತೆಯನ್ನು ತರಲು ಸಹಾಯಕವಾಗಲಿದೆ. […]

ಡಿ. 10-11 ರಂದು ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಕಂಬಳ

ಹೆರಂಜೆ: ಹೆರಂಜೆ ಜನ್ನಕಂಬಳ ಪಟ್ಟದ ರಜತ ಸಂಭ್ರಮ ಪ್ರಯುಕ್ತ ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವವು ಡಿ.10 ರಂದು ನಡೆಯಲಿದೆ. ಸಂಜೆ 7 ರಿಂದ ಜನ್ಸಾಲೆ ರಾಘವೇಂದ್ರ ಆಚಾರ್ ಸಾರಥ್ಯದಲ್ಲಿ “ಚೂಡಾಮಣಿ” ಯಕ್ಷಗಾನ ಪ್ರದರ್ಶನ. ಡಿ.11 ರಂದು ಹೆರಂಜೆ ಜನ್ನ ಕಂಬಳ ನಡೆಯಲಿದೆ.

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗುರುವಾರದಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಪ್ರಥಮ ಬಾರಿಗೆ ಭೇಟಿ ನೀಡಿದರು. ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ದೇವಳದ ವತಿಯಿಂದ ಪಾದಪೂಜೆ, ಗೌರವಾರ್ಪಣೆ ಮತ್ತು ಗುರುಕಾಣಿಕೆ ಸಮರ್ಪಿಸಲಾಯಿತು. ತಮ್ಮ ಆಶೀರ್ವಚನದಲ್ಲಿ ಸ್ವಾಮಿಗಳು ಮಾತನಾಡಿ, ದೇವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳುತ್ತಾ ಸ್ವಾರ್ಥಿಯಾಗುವ ಬದಲು ಭಕ್ತರು ದೇವರ ಬಗ್ಗೆ ಚಿಂತಿಸಿ ಪರರ ಸೇವೆ ಮಾಡಬೇಕು. ದೇವಳದ ಜಿರ್ಣೋದ್ಧಾರದಿಂದ ಊರು, ರಾಜ್ಯ, ರಾಷ್ಟ್ರ ಉದ್ದಾರವಾಗುತ್ತದೆ. ದೇವಳದ […]