ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಹೊಸ ವೇಳಾಪಟ್ಟಿ ಪ್ರಕಟ

ಬೆಂಗಳೂರು: ನಿತ್ಯ ಮಧ್ಯಾಹ್ನ ಸುಬ್ರಹ್ಮಣ್ಯದಿಂದ ಹೊರಡುವ ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸಮಯವನ್ನು ಪರಿಷ್ಕರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದ್ದು, ಡಿ.6 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಮಧ್ಯಾಹ್ನ 1.30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಹೊರಡುತ್ತಿದ್ದ ರೈಲು ಮಧ್ಯಾಹ್ನ 3.03 ಗಂಟೆಗೆ ಬಂಟ್ವಾಳ ನಿಲ್ದಾಣ ತಲುಪುತ್ತಿತ್ತು. ಡಿ. 6 ರಿಂದ ಜಾರಿಯಾದ ಹೊಸ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 1.45 ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಮಂಗಳೂರು ರೈಲು ಹೊರಡಲಿದೆ. ಬಜಕೆರೆ ನಿಲ್ದಾಣದಿಂದ […]

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗಾಗಿ ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಇತರೆ ಉಪಚಾರಗಳು ಕಾರ್ಯಕ್ರಮದಡಿ ವೈಯಕ್ತಿಕ ನೀರು ಸಂಗ್ರಹಣಾ ವಿನ್ಯಾಸ, ಅಂತರ್ಜಲ ಸುರಕ್ಷಿತ ಪ್ರದೇಶಗಳಲ್ಲಿ ಅಲ್ಪ/ ಮಧ್ಯಮ ಆಳದ ಕೊಳವೆ ಬಾವಿಗಳು (ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಅಧಿಸೂಚನೆಯಾಗಿರುವ ಶೋಷಿತ ನಿರ್ಣಾಯಕ ಮತ್ತು ಅರೆ ನಿರ್ಣಾಯಕ ಪ್ರದೇಶಗಳನ್ನು ಹೊರತುಪಡಿಸಿ), ಸಣ್ಣ ಬಾವಿಗಳ ಮರುಸ್ಥಾಪನೆ/ ನವೀಕರಣ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮರು ಪೂರಣ, ಪೈಪ್/ ಪ್ರಿ-ಕಾಸ್ಟ್ ವಿತರಣಾ ವ್ಯವಸ್ಥೆ ಹಾಗೂ ನೀರೆತ್ತುವ ಸಾಧನಗಳು (ವಿದ್ಯುತ್, ಡೀಸೆಲ್, ಪವನ/ಸೌರ) […]

ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ: ತುಳುನಾಡಿನ ಪರಂಪರೆ ಬಿಂಬಿಸುವ ಮಾಹೆಯ ಯಕ್ಷಗಾನ ಕಿರುಚಿತ್ರಕ್ಕೆ ತೀರ್ಪುಗಾರರ ಪ್ರಶಸ್ತಿಯ ಗರಿ

ಮಣಿಪಾಲ: ಮಾಹೆಯ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು ತುಳು ಕರಾವಳಿಯ ಸಂಸ್ಕೃತಿಅಧ್ಯಯನ,ಸಂಶೋಧನೆ ಮತ್ತು ದಾಖಲೀಕರಣದ ವಿಭಾಗಗಳಲ್ಲಿ ಮಹತ್ತ್ವದ ಕೆಲಸಗಳನ್ನು ಮಾಡುತ್ತಿದ್ದು, ಇದರ ‘ಯಕ್ಷಗಾನ’ ಸಾಕ್ಷ್ಯಚಿತ್ರವು ವಾರಾಣಸಿಯಲ್ಲಿ ಡಿಸೆಂಬರ್‌ 1 ರಿಂದ 3 ರವರೆಗೆ ಜರಗಿದ ಸಾಂಸ್ಕೃತಿಕ ಪ್ರವಾಸೋದ್ಯಮದ ಕುರಿತ ಪ್ರತಿಷ್ಠಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ‘ತೀರ್ಪುಗಾರರ ಪ್ರಶಸ್ತಿ’ಗೆ ಭಾಜನವಾಗಿದೆ. ಈ ಚಿತ್ರೋತ್ಸವದಲ್ಲಿ 44 ದೇಶಗಳ 94 ಕಿರುಚಿತ್ರಗಳು ಭಾಗವಹಿಸಿದ್ದು ಕರಾವಳಿಯ ಶ್ರೀಮಂತ ಕಲಾಪರಂಪರೆಯನ್ನು ಪ್ರತಿನಿಧಿಸುವ ‘ಯಕ್ಷಗಾನ’ ಕಿರುಚಿತ್ರವು ಎಲ್ಲ ಕಿರುಚಿತ್ರಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.                   ‘ಯಕ್ಷಗಾನ’ […]

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿಧಾನಸಭೆಯಲ್ಲಿ 24 ಸ್ಥಾನ ಮೀಸಲು: ಪಿಒಕೆ ನಮ್ಮದು ಎಂದು ಗೃಹ ಸಚಿವ ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ “ಪಿಒಕೆ ನಮ್ಮದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಂಸತ್ತಿನಲ್ಲಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಅನ್ನು ಮಂಡಿಸಿದ ಶಾ, ಈ ಹಿಂದೆ ಜಮ್ಮು 37 ಸ್ಥಾನಗಳನ್ನು ಹೊಂದಿತ್ತು ಆದರೆ ಈಗ ಅದು 43ಕ್ಕೇರಿದೆ ಹಾಗೂ ಕಾಶ್ಮೀರ 46 ಸ್ಥಾನಗಳನ್ನು ಹೊಂದಿದ್ದು, ಈಗ ಅದು 47 ಸ್ಥಾನಗಳನ್ನು ಹೊಂದಿದೆ ಎಂದು […]

ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ಸಂಪನ್ನ; ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿ‌ಲ್ಲಿ ನಾಲ್ಕನೇ ಬಾರಿ‌ ಜ.18 ರಂದು ಸರ್ವಜ್ಞ ಪೀಠವನ್ನೇರಲಿದ್ದು, ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು. ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.8 ರಂದು ತಮ್ಮ ಶಿಷ್ಯ‌ ಶ್ರೀಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀಸುಗುಣೇಂದ್ರತೀರ್ಥರು ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ […]