3.5 ತೀವ್ರತೆಯ ಭೂಕಂಪ ದಾಖಲು : ಆಸ್ಸಾಂ ಗುವಾಹಟಿ
ಗುವಾಹಟಿ (ಅಸ್ಸೋಂ): ಗುರುವಾರ ಬೆಳಗ್ಗೆ ಅಸ್ಸೋಂನ ಗುವಾಹಟಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಹಾನಿಯಾಗಿರುವ ಕುರಿತು ಇನ್ನೂ ವರದಿಯಾಗಿಲ್ಲ.ಇಂದು (ಗುರುವಾರ) ಬೆಳಗ್ಗೆ 5.42ರ ಸುಮಾರಿಗೆ ಅಸ್ಸೋಂನ ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಅದೇ ಜೂನ್ ತಿಂಗಳಲ್ಲಿ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ ಘಟನೆ ನಡೆದಿತ್ತು. ತೇಜ್ಪುರದ ಪಶ್ಚಿಮದಿಂದ 39 […]
ಬಿಬಿಸಿ : ಭಾರತ ಮೂಲದ ಡಾ.ಸಮೀರ್ ಷಾ ಹೊಸ ಬಾಸ್
ಲಂಡನ್: ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸಮೀರ್ ಅವರನ್ನು ಬಿಬಿಸಿಯ ಹೊಸ ಬಾಸ್ ಆಗಿ ಆಯ್ಕೆ ಮಾಡಲು ಹೌಸ್ ಆಫ್ ಕಾಮನ್ಸ್ನ ಸಂಸದರು ಒಪ್ಪಿಗೆ ಸೂಚಿಸಿದ್ದಾರೆ. ಜೊತೆಗೆ ಅವರ ನೇಮಕಾತಿ ಪೂರ್ವ ಪರಿಶೀಲನೆ ನಡೆಯಲಿದ್ದು, ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ಸ್ ಸೆಲೆಕ್ಟ್ ಕಮಿಟಿಯ ಕ್ರಾಸ್ ಸಂಸದರು ಸಮೀರ್ ಅವರ ಜೊತೆಗೆ ಪ್ರಶ್ನೋತ್ತರ ಸಂವಾದ ನಡೆಸಲಿದ್ದಾರೆ.40 ವರ್ಷಗಳಿಂದ ಇಂಗ್ಲೆಂಡ್ನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಭಾರತ ಮೂಲದ ಡಾ. ಸಮೀರ್ ಷಾ ಅವರನ್ನು […]
ಇಸ್ರೇಲ್ : ಹೌತಿ ಬಂಡುಕೋರರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಇಸ್ರೇಲ್
ಟೆಲ್ ಅವಿವ್(ಇಸ್ರೇಲ್): ಜತೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯಾಗುತ್ತಿದ್ದಂತೆಯೆ ಇಸ್ರೇಲ್‌ನ ದಕ್ಷಿಣದ ನಗರವಾದ ಐಲಾಟ್‌ನಲ್ಲಿ ಸೈರನ್‌ಗಳಾಗಿವೆ. ತಕ್ಷಣವೇ ಪ್ರತಿರೋಧ ತೋರಿದ ಐರನ್ ಡೋಮ್ ಕ್ಷಿಪಣಿಗಳನ್ನು ನಾಶಪಡಿಸುವಲ್ಲಿ ಇಸ್ರೇಲ್ ರಕ್ಷಣಾ ತಂಡ ಯಶಸ್ವಿಯಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್ ಕ್ಷಿಪಣಿಯು ಇಸ್ರೇಲ್‌ನ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಯೆಮೆನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಅವುಗಳನ್ನು ತಡೆದು ಹೊಡೆದುರುಳಿಸಿದೆ ಎಂದು ಇಸ್ರೇಲ್ ಅಧಿಕೃತ ಮಾಧ್ಯಮ ಸಂಸ್ಥೆ ಬುಧವಾರ ವರದಿ […]
ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ : ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ
ನವದೆಹಲಿ: ಸಮಾರಂಭದಲ್ಲಿ ಭಾಗಿಯಾಗುವಂತೆ ಸುಮಾರು 7000 ಗಣ್ಯರಿಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಿದೆ.ಅಯೋಧ್ಯಾ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವು 2024 ರ ಜನವರಿ 22 ರಂದು ಅತ್ಯಂತ ಅದ್ದೂರಿಯಾಗಿ ನಡೆಯಲಿದೆ.ಮುಂದಿನ ವರ್ಷದ ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗಲು 7 ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ರಾಮ ಮಂದಿರ ಟ್ರಸ್ಟ್ 3,000 ವಿಐಪಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರಿಗೆ ಆಹ್ವಾನ […]
ಸಶಸ್ತ್ರ ಪಡೆಗಳ ಯೋಧರ ಸೇವೆ, ಶೌರ್ಯ, ತ್ಯಾಗಕ್ಕೆ ಗೌರವಾರ್ಪಣೆ : ಇಂದು ಭಾರತದ ಧ್ವಜ ದಿನ
ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಯೋಧರ ತ್ಯಾಗ, ಶೌರ್ಯ ಹಾಗೂ ಸಮರ್ಪಣೆ ಗೌರವಿಸುವ ಹಾಗೂ ವೀರ ಯೋಧರ ತ್ಯಾಗದ ಸ್ಮರಣಾರ್ಥವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 7 ರಂದು ಅಂದರೆ ಇಂದು ಭಾರತದ ಧ್ವಜ ದಿನವನ್ನು ಆಚರಿಸಲಾಗುತ್ತದೆ.ಈ ದಿನವನ್ನು ಸಶಸ್ತ್ರ ಪಡೆಗಳ ಧ್ವಜ ದಿನ ಎಂದೂ ಆಚರಿಸಲ್ಪಡುವ ಈ ದಿನ ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಜೊತೆಗೆ ಮೂರೂ ಸೇನೆಗಳನ್ನು ಪ್ರತಿನಿಧಿಸುವ ಧ್ವಜ, ಬ್ಯಾಡ್ಜ್, ಸ್ಟಿಕ್ಕರ್ ಹಾಗೂ ಇತರ ವಸ್ತುಗಳ ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತದೆ.ಈ ದಿನ […]