ಜ.5 ಮತ್ತು 6 ರಂದು KUPMA ವತಿಯಿಂದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ

ಮಂಗಳೂರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (KUPMA) ವತಿಯಿಂದ ರಾಜ್ಯಮಟ್ಟದ ‘ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024’ವು ಜನವರಿ 05 ಶುಕ್ರವಾರ ಮತ್ತು 06 ಶನಿವಾರ 2024 ರಂದು ಆಳ್ವಾಸ್ ಕಾಲೇಜು, ವಿದ್ಯಾಗಿರಿ ಮೂಡುಬಿದಿರೆ ಇಲ್ಲಿ ನಡೆಯಲಿದೆ. ಜ. 05 ಶುಕ್ರವಾರ ಬೆಳಿಗ್ಗೆ 11.30 ರಿಂದ 12.30 ರವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 02.00 ರ ವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 02.00 ರಿಂದ 04.00 ರವರೆಗೆ ಉದ್ಘಾಟನಾ […]

ವಾಮಂಜೂರು: ಬೆಥನಿ ಪ್ರಾಂತೀಯ ಸಂಸ್ಥೆಯ ಹೊಸ ಕಟ್ಟಡದ ಉದ್ಘಾಟನೆ

ವಾಮಂಜೂರು: ಬೆಥನಿ ಪ್ರಾಂತೀಯ ಸಂಸ್ಥೆ ಇದರ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಡಿ. 3 ರಂದು ದಿವ್ಯ ಬಲಿಪೂಜೆಯೊಂದಿಗೆ ನೆರವೇರಿತು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಪೂಜಾವಿಧಿಯನ್ನು ನೆರವೇಸಿದರು. ಬೆಥನಿ ಸಂಸ್ಥೆಯ ಮಹಾಮಾತೆ ಭಗಿನಿ ರೋಸ್ ಸೆಲಿನ್‌ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೊನ್ಸಾ ನಾಮ ಫಲಕ ಅನಾವರಣಗೊಳಿಸಿದರು. ಬಿಷಪ್ ಹಾಗೂ ಸಹ ಗುರುಗಳು ಕಟ್ಟಡವನ್ನು ಆಶೀರ್ವಚಿಸಿದರು. ಭಗಿನಿ ರೊಯ್ಲಿನ್ ಮತ್ತು ಭಗಿನಿ ಶುಭ ಆಶೀರ್ವಚನ ಕಾರ್ಯಕ್ರಮವನ್ನು ನಿರೂಪಿಸಿದರು. ಭಗಿನಿ ರೋಸ್ ಸೆಲಿನ್‌ […]

ಡಿ.5 ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

​ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಸಮಾರಂಭವು ಡಿಸೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ನ ಅಧ್ಯಕ್ಷ ಶಾಂತಾರಾಮ್ ಭಂಡಾರ್ಕರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಸಿಂಗಾಪುರದ ಜಾನಕಿ ಶ್ರೀಕಾಂತ್ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ.ಉದಯ ಕುಮಾರ್ ಶೆಟ್ಟಿ

ಉಡುಪಿ: ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿಸಲ್ಪಟ್ಟ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿರುವುದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿ ಮಗದೊಮ್ಮೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು […]

ಲೇಖಕ ಎಚ್ ಶಾಂತರಾಜ ಐತಾಳ್ ವಿರಚಿತ ಕೃತಿ ಬಿಡುಗಡೆ ಕಾರ್ಯಕ್ರಮ

ಉಡುಪಿ: ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು​ ವತಿಯಿಂದ ​ಲೇಖಕ ಎಚ್ ಶಾಂತರಾಜ ಐತಾಳರ​ ಬಿಸಿಲುದುರೆಯ ಬೆನ್ನೇರಿದವ (ಆತ್ಮಕಥನ)​ ಮತ್ತು ಬಾಲಂಗೋಚಿ (ಮಂದಹಾಸ ಮೂಡಿಸುವ ಮಾತ್ರೆಗಳು)​ ಎರಡು ಕೃತಿಗ​ಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲ್​ ನ  ರೂಫ್ ಟಾಪ್​ ನಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ  ಭುವನ ಪ್ರಸಾದ್ ಹೆಗಡೆ ಮಣಿಪಾಲ​, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ​, ಸುಹಾಸಂ ಕಾರ್ಯದರ್ಶಿ ಎಚ್ ಗೋಪಾಲ ಭಟ್​,  ​ಉಪಸ್ಥಿತರಿದ್ದರು.  ​ ಲೇಖಕ ದಂಪತಿಗಳನ್ನು ಹಾಗೂ ಶಾಸಕ ಗುರ್ಮೆ ಸುರೇಶ ಶೆಟ್ಟಿ ಇವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ​ ಅಭಿನಂದಿಸಿ […]