ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ ವತಿಯಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು
ಮೂಡಬಿದ್ರೆ: ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯವತಿಯಿಂದ ಪಾಲಡ್ಕದಲ್ಲಿರುವ ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ಭೇಟಿ ನೀಡಿ 25000 ರೂ ಮೊತ್ತದ ಚೆಕ್ಕನ್ನು ಆರ್ಥಿಕ ನೆರವಿನ ರೂಪದಲ್ಲಿ ನೀಡಲಾಯಿತು. ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ, ಆಲ್ವಿನ್ ಕೋಟ್ಯಾನ್, ಮೆಲ್ವಿನ್ ರಾಡ್ರಿಗಸ್, ಸುಧೀರ್ ಜಾನ್ ಪ್ರಸಾದ್, ಸಚಿನ್ ಸಲ್ಡಾನ್ಹಾ ಉಪಸ್ಥಿತರಿದ್ದರು.
ಡಿ. 5 ಮತ್ತು 6 ರಂದು ಉಡುಪಿ ಜಿಲ್ಲಾ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವರ ವತಿಯಿಂದ ಉಡುಪಿ ಜಿಲ್ಲಾ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 5 ಮತ್ತು 6 ರಂದು ಕೋಟ ವಿವೇಕ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಡಿ. 5 ರಂದು ಬೆಳಗ್ಗೆ 10.15 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಾರ್ಯಕ್ರಮಉದ್ಘಾಟಿಸಲಿದ್ದು, ಸಂಶೋಧಕ ಹಾಗೂ ವಿದ್ವಾಂಸ ಬಾಬುಶಿವ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ […]
ಡಿ. 5 ರಂದು ಸಮುದ್ರ ತೀರಗಳಲ್ಲಿ ಜೀವ ರಕ್ಷಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಉಡುಪಿ: ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಬೀಚ್, ಆಸರೆ ಬೀಚ್, ಮಲ್ಪೆ ಬೀಚ್, ಸೈಂಟ್ ಮೇರೀಸ್ ಐಲ್ಯಾಂಡ್, ಕಾಪು ಬೀಚ್ ಹಾಗೂ ಪಡುಬಿದ್ರಿ ಮುಖ್ಯ ಬೀಚ್‌ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯ ವತಿಯಿಂದ 20 ಜನರಿಗೆ ಜೀವ ರಕ್ಷಕ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮುಂಚಿತವಾಗಿ ಡಿಸೆಂಬರ್ 5 ರಂದು ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಇಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು. ಆಸಕ್ತ ಕನಿಷ್ಟ […]
ಡಿ. 4-5 ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತೋತ್ಸವ; ವಾರ್ಷಿಕ ದಿನಾಚರಣೆ
ಉಡುಪಿ: ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜಿನಲ್ಲಿ ಡಿ. 4 ರಂದು ಸಂಸ್ಕೃತೋತ್ಸವ ನಡೆಯಲಿದ್ದು ಅದರ ಅಂಗವಾಗಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಂಜೆ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪರೀಕ್ಷಾಂಗ ನಿರ್ದೇಶಕ ಡಾ. ರಾಮಕೃಷ್ಣಭಟ್, ಸಂಸ್ಕೃತೋಪನ್ಯಾಸಕ ವಿದ್ವಾನ್ ಶ್ರೀನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಸ್ಕೃತ ಪದ್ಯಗಾನ ಹಾಗೂ ಜಯ ವೈಜಯಂತೀ ಎಂಬ ಸಂಸ್ಕೃತ ನಾಟಕ ಪ್ರದರ್ಶನಗೊಳ್ಳಲಿದೆ. ವಾರ್ಷಿಕೋತ್ಸವ : ಡಿ. 5 ರಂದು […]
ಎಲ್ಲೆಲ್ಲೂ ‘ಸಲಾರ್’ ಟ್ರೈಲರ್ ಅಬ್ಬರ: ಕೋಟಿಗೂ ಮಿಕ್ಕ ವೀಕ್ಷಣೆಗಳು; ಡಿ.22 ರಂದು ಬೆಳ್ಳಿ ತೆರೆಗೆ ಬರಲು ಸಿದ್ದ!
ದೇಶಾದ್ಯಂತ ಅದ್ದೂರಿ ಬಿಡುಗಡೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇದೆ ಎನ್ನುವಾಗ ‘ಸಲಾರ್: ಭಾಗ 1 – ಸೀಸ್ ಫೈರ್’ ಬಿಗ್-ಬಜೆಟ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಅನ್ನು ಹೊಂಬಾಳೆ ಫಿಲಮ್ಸ್ ಬಿಡುಗಡೆ ಮಾಡಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ ಸಲಾರ್-1 ರ ಟ್ರೈಲರ್ ಬಿಡುಗಡೆ ಹೊಂದುತ್ತಲೇ ಜನರಲ್ಲಿ ಹುಚ್ಚನ್ನು ಉಂಟುಮಾಡಿದೆ. ಅದಾಗಲೇ ಕೋಟಿ ವೀಕ್ಷಣೆಗಳನ್ನು ದಾಟಿರುವ ಸಲಾರ್ ಅಬ್ಬರಕ್ಕೆ ಚಿತ್ರರಸಿಕರು ಬೇಸ್ತು ಬಿದ್ದಿದ್ದಾರೆ. […]