ಕುಣಿದು ಕುಪ್ಪಳಿಸಿದ ಮಹಿಳಾ ಅಗ್ನಿವೀರರು: ಬೆಳಗಾವಿಯಲ್ಲಿ ಅಗ್ನಿವೀರವಾಯುಗಳ ಆಕರ್ಷಕ ಪಥಸಂಚಲನ
ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯಡಿ ಸಾಂಬ್ರಾ ಏರಮನ್ ತರಬೇತಿ ಶಾಲೆಯಲ್ಲಿ 22 ವಾರ 2,127 ಪುರುಷರು, 153 ಮಹಿಳೆಯರು ಸೇರಿದಂತೆ 2,280 ಅಗ್ನಿವೀರವಾಯುಗಳು ತರಬೇತಿ ಪೂರ್ಣಗೊಳಿಸಿದ್ದಾರೆ. ಇಂದು ಅಗ್ನಿವೀರವಾಯುಗಳ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಅಗ್ನಿಪಥ್ ಯೋಜನೆಯಡಿ ದೇಶದಲ್ಲೆ ತರಬೇತಿ ಪೂರ್ಣಗೊಳಿಸಿದ ಮೊದಲ ಮಹಿಳಾ ತಂಡ ಎಂಬ ಖ್ಯಾತಿಗೆ ಈ ಶಿಬಿರಾರ್ಥಿಗಳು ಪಾತ್ರರಾದರು.ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ […]
ಚೆಸ್ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ ಒಡಹುಟ್ಟಿದ ಜೋಡಿ: ಭಾರತದ ಮೂರನೇ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಆದ ವೈಶಾಲಿ ರಮೇಶ್ ಬಾಬು!
ಶುಕ್ರವಾರ ಸ್ಪೇನ್‌ನಲ್ಲಿ ನಡೆದ IV ಎಲ್‌ಲೋಬ್ರೆಗಟ್ ಓಪನ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಯನ್ನು ಗಳಿಸಲು ವೈಶಾಲಿ ರಮೇಶ್‌ಬಾಬು ಅವರು 2500 FIDE ರೇಟಿಂಗ್‌ಗಳನ್ನು ದಾಟಿದ್ದಾರೆ. ತನ್ಮೂಲಕ ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ನಂತರ ಭಾರತದ ಮೂರನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 22 ವರ್ಷ ವಯಸ್ಸಿನ ವೈಶಾಲಿ ಎರಡನೇ ಸುತ್ತಿನಲ್ಲಿ ಟರ್ಕಿಶ್ ಎಫ್‌ಎಂ ಟ್ಯಾಮರ್ ತಾರಿಕ್ ಸೆಲ್ಬೆಸ್ (2238) ಅವರನ್ನು ಸೋಲಿಸಿ ರೇಟಿಂಗ್ ಅನ್ನು ಏರಿಸಿಕೊಂಡಿದ್ದಾರೆ ಮತ್ತು ಸತತ ಎರಡು ಗೆಲುವುಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದ್ದಾರೆ. “ಅಂತಿಮವಾಗಿ ಟೈಟಲ್ ಅನ್ನು […]
ಪ್ರತೀಕ್ ಶೆಟ್ಟಿ ಬತ್ತಳಿಕೆಯಿಂದ ಮತ್ತೊಂದು ಕಾಮಿಡಿ ಎಂಟರ್ ಟೈನರ್ ಶಾರ್ಟ್ ಫಿಲ್ಮ್ ‘ವಾಟರ್ ಮೆಲನ್’ ಬಿಡುಗಡೆ
ಎಲ್ಲಿಂದ ಬರ್ತಿರೋ ನೀವೆಲ್ಲಾ, ಜಾಬ್ ಮಾರ್ಲೆ ಮುಂತಾದ ಕಿರುಚಿತ್ರಗಳಿಂದ ಗಮನಸೆಳೆದಿರುವ ಪ್ರತೀಕ್ ಶೆಟ್ಟಿ ತಂಡದಿಂದ ಮತ್ತೊಂದು ಎಂಟರ್ ಟೈನರ್ ಕಿರುಚಿತ್ರ ‘ವಾಟರ್ ಮೆಲನ್’ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಯುವಕರ ಗಮನ ಸೆಳೆಯುತ್ತಿದೆ. ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ಸ್ ಅಡಿಯಲ್ಲಿ ಮೂಡಿಬಂದಿರುವ ಕಿರು ಚಿತ್ರದಲ್ಲಿ ಪ್ರತೀಕ್, ಶ್ರೀ ಭವ್ಯ, ಸುಪ್ರೀತ್ ಕಾಟಿ ಮುಂತಾದವರು ನಟಿಸಿದ್ದಾರೆ. ರಾಜ್ ಕನಕ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಸೈಕಲ್ ಸಂಸ್ಥೆ ಸಹಯೋಗದಲ್ಲಿ ಭಾಗ್ಯಮ್ಮ ಉಜ್ಜಿನಪ್ಪ ನಿರ್ಮಾಣ ಮಾಡಿದ್ದಾರೆ. ಕೂಲ್ […]
ರಸ್ತೆಗಿಳಿದ ಸೈಬರ್ ಟ್ರಕ್ ಗಳು: ಗ್ರಾಹಕರಿಗೆ ಟ್ರಕ್ ವಿತರಿಸಿದ ಟೆಸ್ಲಾ ಸಿಇಒ ಏಲಾನ್ ಮಸ್ಕ್
ಟೆಕ್ಸಾಸ್: ನಾಲ್ಕು ವರ್ಷಗಳ ವಿಳಂಬದ ಮತ್ತು ಹಲವಾರು ಬದಲಾವಣೆಗಳ ನಂತರ, ಟೆಸ್ಲಾ ದ ಬಹುನಿರೀಕ್ಷಿತ ಸೈಬರ್ ಟ್ರಕ್ ಗಳು ಅಂತಿಮವಾಗಿ ರಸ್ತೆಗಿಳಿದಿದೆ. ಟೆಸ್ಲಾ ಸಿಇಒ ಏಲಾನ್ ಮಸ್ಕ್ ತಮ್ಮ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸೈಬರ್ ಟ್ರಕ್ ನ ಟೋಯಿಂಗ್ ಸಾಮರ್ಥ್ಯಗಳು, ಬುಲೆಟ್‌ಪ್ರೂಫ್ ಬಾಗಿಲುಗಳು ಮತ್ತು ವಿಲಕ್ಷಣ ಲೈಟ್ ಗಳು ಹಾಗೂ ಸ್ಪೀಡ್ ಬಗ್ಗೆ ವಿವರಿಸಿದ ಅವರು ಗ್ರಾಹಕರಿಗೆ ಟ್ರಕ್ ಗಳನ್ನು ವಿತರಿಸಿದರು. ಈವೆಂಟ್‌ನಲ್ಲಿ ಹಲವಾರು ಗ್ರಾಹಕರು ತಮ್ಮ ಸೈಬರ್‌ಟ್ರಕ್‌ಗಳನ್ನು ಪಡೆದರು. ಅಗ್ಗದ […]
ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿರುವ ‘ಮೈಚಾಂಗ್’ ಚಂಡಮಾರುತ; ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ
ಚೆನ್ನೈ: ‘ಮೈಚಾಂಗ್’ ಚಂಡಮಾರುತದ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪುದುಚೇರಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಡಿ.4 ರಂದು ಕರೈಕಾಲ್ ಮತ್ತು ಯಾಣಂ ಪ್ರದೇಶಗಳಲ್ಲಿ ಶಾಲಿಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನ ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ಚೆನ್ನೈ, ತೆಂಕಶಿ, ತೂತುಕುಡಿ, ತಿರುನಲ್ವೇಲಿ, ಕನ್ನಿಯಕುಮಾರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ, ವಿಲ್ಲುಪುರಂ, ರಾಣಿಪೇಟ್, ಕಡಲೂರು, ತಂಜಾವೂರು, ನಾಗಪಟ್ಟಣಂ, ಮೈಲಾಡುತುರೈ, ತಿರುವರೂರ್, ರಾಮನಾಥಪುರಂ, ತಿರುಪುರ್, […]