ಡಿ. 04 ರಂದು ಬಸ್ತಿ ಮೂಲ ವರ್ತೆ ಕಲ್ಕುಡ ದೈವಸ್ಥಾನದ ಕಾಲಾವಧಿ ವಾರ್ಷಿಕ ನೇಮೋತ್ಸವ
ಬಸ್ತಿ: ಮೂಲ ವರ್ತೆ ಕಲ್ಕುಡ ದೈವಸ್ಥಾನದ ಕಾಲಾವಧಿ ವಾರ್ಷಿಕ ನೇಮೋತ್ಸವವು ಡಿ. 04 ಸೋಮವಾರದಂದು ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಹಾಗೂ 9.30ರ ಬಳಿಕ ಕಾಲಾವಧಿ ನೇಮೋತ್ಸವ ನಡೆಯಲಿದೆ. ಅಕ್ಕಿ (ಸ್ವಸ್ತಿಕ್), ತೆಂಗಿನಕಾಯಿ, ಪಿಂಗಾರ, ಸಿರಿ, ಸಿಯಾಳ ಹಾಗೂ ಇನ್ನಿತರ ವಸ್ತುಗಳನ್ನು ನೀಡುವವರು ಡಿ. 03 ರಂದು ಮಧ್ಯಾಹ್ನ 1.00 ಗಂಟೆಯೊಳಗೆ ನೀಡಬೇಕಾಗಿ ಪ್ರಕಟಣೆ ತಿಳಿಸಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ: ವರ್ಚುವಲ್ ಮೂಲಕ ಭಾಗವಹಿಸಿದ ಪ್ರಧಾನಿ ಮೋದಿ; ಮತ್ಯಮೇಳದ ಯಶಸ್ಸಿಗೆ ಹಾರೈಕೆ
ಉಡುಪಿ: ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು, ಇವರ ನೇತೃತ್ವದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆ ಶಿರಸಿ ಇವರ ಸಹಭಾಗಿತ್ವದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ವತಿಯಿಂದ ಡಿಸೆಂಬರ್ 2 ಮತ್ತು 3 ರಂದು ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಮತ್ಸ್ಯಮೇಳವನ್ನು ಯಶಸ್ವಿಗೊಳಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು. ವರ್ಚುವಲ್ ಮೂಲಕ ನೇರಪ್ರಸಾರದಲ್ಲಿ ಪ್ರಧಾನಿ […]
ಬಂಟ್ವಾಳ: ಡಿ. 10 ರಂದು ಮಡಿವಾಳರ ಸಂಘದ ವಾರ್ಷಿಕ ಕ್ರೀಡೋತ್ಸವ
ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಇದರ 32ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ಮಡಿವಾಳ ಯುವ ಬಳಗದ ಪಾಯೋಜಕತ್ವದಲ್ಲಿ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದ ಮುಂಭಾಗದ ಮೈದಾನದಲ್ಲಿ ಡಿ. 10 ರಂದು ಕ್ರೀಡೋತ್ಸವ ಏರ್ಪಡಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಕ್ರೀಡೋತ್ಸವ ಸಭಾ ಕಾರ್ಯಕ್ರಮವನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಪ್ರಬಂಧಕ ಯೋಗೀಶ ಕಲಸಡ್ಕ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎನ್.ಕೆ. ಶಿವ ಅಧ್ಯಕ್ಷತೆ ವಹಿಸಲಿದ್ದಾರೆ. ಕುಡ್ತಮುಗೇರು ಪಂ. ಸದಸ್ಯ ಹರೀಶ್ ಮಂಕುಡೆ, ಶಿಕ್ಷಕ […]
ರಮಾನಂದ ಗುರೂಜಿ ಮುಂಬೈ ಪ್ರವಾಸ: ಡಿ. 2 ರಿಂದ ಭೇಟಿಗೆ ಲಭ್ಯ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಡಿಸೆಂಬರ್ 2 ಹಾಗೂ 3 ರಂದು ಎರಡು ದಿನಗಳ ಕಾಲ ಮುಂಬಯಿಯ ಲೋವರ್ ಪರೇಲಿನಲ್ಲಿರುವ ಪಂಚತಾರಾ ಹೋಟೆಲ್ ಸೇಂಟ್ ರೆಜಿಸ್ ನಲ್ಲಿ ಲಭ್ಯವಿರಲಿದ್ದಾರೆ. ಡಿ.4 ಮತ್ತು 5 ರಂದು ಗುಜರಾತ್ ನಲ್ಲಿ ಸಂಪನ್ನಗೊಳ್ಳಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಡಿ. 6 ಮತ್ತು 7 ರಂದು ಪುನಃ ಮುಂಬಯಿಯಲ್ಲಿ ಭಕ್ತರ ಭೇಟಿಗೆ ಲಭ್ಯವಿರಲಿದ್ದಾರೆ. ದೇವಿ ಅನುಗ್ರಹಿತ […]