ಕ್ರೋಧಿ ಸಂವತ್ಸರ ತಿಥಿನಿರ್ಣಯ ಪಂಚಾಂಗ ಬಿಡುಗಡೆ

ಉಡುಪಿ: ಜಗದ್ಗುರು ಶ್ರೀಮಧ್ವಾಚಾರ್ಯರ ತಿಥಿ ನಿರ್ಣಯಾನುಸಾರಿ ಗಣಿತದಿಂದ ಹಾಗೂ ಭಾವೀಸಮೀರ ಶ್ರೀವಾದಿರಾಜಗುರು ಸಾರ್ವಭೌಮರ ಏಕಾದಶಿ ನಿರ್ಣಯಾನುಸಾರಿ ತಿಥಿ ವೃದ್ಧಿ-ಹ್ರಾಸ ನಿಯಮದಿಂದ ಉಡುಪಿ ಶ್ರೀಕೃಷ್ಣಾಪುರ ಮಠದಿಂದ ರಚಿತವಾದ “ಕ್ರೋಧಿ” ನಾಮ ಸಂವತ್ಸರದ ‘ತಿಥಿನಿರ್ಣಯ’ ಪಂಚಾಂಗವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯರು ಹಾಗೂ ಮಠದ ಅಧಿಕಾರಿವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.

ಹರ್ಡಲ್ಸ್ ನಲ್ಲಿ ತ್ರಿಶಾ ವಿದ್ಯಾರ್ಥಿ ಗಗನ್ ಜಿ. ರಾಜ್ಯ ಮಟ್ಟಕ್ಕೆ ಆಯ್ಕೆ

ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಗನ್ ಜಿ. ಉಡುಪಿಯಮಹಾತ್ಮಾ ಗಾಂಧಿ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ನಡೆದ ಜಿಲ್ಲಾ ಮಟ್ಟದ ಹರ್ಡಲ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ದಾರೆ.

ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಾರ್ಷಿಕ ಕ್ರೀಡಾಕೂಟ ಸಂಪನ್ನ

ಕಟಪಾಡಿ: ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಥಮ ವರ್ಷದ ಕ್ರೀಡಾಕೂಟವು ಇತ್ತೀಚೆಗೆ ಎಸ್.ವಿ.ಎಸ್ ಕ್ರೀಡಾಂಗಣದಲ್ಲಿನಡೆಯಿತು. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟೀಯ ಕ್ರೀಡಾ ಪಟು ಮನೀಶ್ ಲಕ್ಷ್ಮಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡೆ ಕಲಿಕೆಗೆ ಪೂರಕವೇ ಹೊರತು ಮಾರಕವಲ್ಲ, ಸ್ವಸ್ಥ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯ ಎಂದರು. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಯಾದ ಗಗನ್ ಜಿ ಅವರಿಗೆ ಕಾಲೇಜಿನ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಎ […]

ಮಳೆ ಹುಡುಗಿ ಪೂಜಾ ಗಾಂಧಿಯ ಗೃಹಸ್ಥ ಜೀವನದ ಶುಭಾರಂಭ

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ತಮ್ಮ ದೀರ್ಘ ಕಾಲದ ಗೆಳೆಯ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯ ಅನುಸಾರ ಮದುವೆಯಾಗಿ ಗೃಹಸ್ಥ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಪೂಜಾ ಗಾಂಧಿ ಹಾಗೂ ವಿಜಯ್ ಘೋರ್ಪಡೆ ಅವರ ವಿವಾಹ ಮಹೋತ್ಸವ ಜರುಗಿದ್ದು ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು, ಮಂತ್ರ ಮಾಂಗಲ್ಯ ಪದ್ಧತಿಯಂತೆ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ. ಪೂಜಾ […]

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಹೆಮ್ಮಾಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕೇದಾರ್ ಮರವಂತೆ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶ್ರುತಿಕಾ ಶೆಟ್ಟಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಕ್ಷಿತಾ ಭಟ್ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಶ್ರದ್ಧಾ ಮೊಗವೀರ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು […]