ಮಣಿಪಾಲ್‌ ಕಾಲೇಜ್‌ ಆಫ್‌ ಹೆಲ್ತ್‌ ಸಾಯನ್ಸಸ್‌ ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಮಣಿಪಾಲ: ಮಣಿಪಾಲ ಅಕಾಡೆಮಿ ಹೈಯರ್‌ ಎಜುಕೇಶನ್‌ ನ ಪ್ರತಿಷ್ಠಿತ ಘಟಕವಾಗಿರುವ ಭಾರತದಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿರುವ ಮಣಿಪಾಲ್‌ ಆರೋಗ್ಯವಿಜ್ಞಾನಗಳ ಕಾಲೇಜು ಮಣಿಪಾಲ್‌ ಕಾಲೇಜ್‌ ಆಫ್‌ ಹೆಲ್ತ್‌ ಸಾಯನ್ಸಸ್‌ ಇದರ 24 ನೇಯ ವಾರ್ಷಿಕಪ್ರಶಸ್ತಿ ಪ್ರದಾನ ಸಮಾರಂಭ ನ. 21 ರಂದು ನಡೆಯಿತು. ಭಾರತದ ಆರೋಗ್ಯ ವಿಜ್ಞಾನದ ವೃತ್ತಿಪರಕ್ಷೇತ್ರದಲ್ಲಿಯೇ ಎಂಸಿಪಿಎಚ್‌ಗೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ರೋಗಿಗಳ ಕಾಯಿಲೆ ಪತ್ತೆ, ರೋಗ ವಿಧಾನ, ರೋಗಿಯಅಸೌಖ್ಯದ ವಿವಿಧ ಸ್ಥಿತಿಗಳ ನಿಭಾಯಿಸುವಿಕೆಗಳಲ್ಲಿ ಬಹುಶಿಸ್ತೀಯ ಆರೋಗ್ಯ ಶುಶ್ರೂಷಾ ಬಳಗವು […]

ಜೆರೂಸಲೆಮ್ ಪ್ರವೇಶದ್ವಾರದಲ್ಲಿ ಭಯೋತ್ಪಾದಕ ದಾಳಿ: 3 ಸಾವು 6 ಮಂದಿಗೆ ಗಂಭೀರ ಗಾಯ

ಟೆಲ್ ಅವೀವ್: ಗುರುವಾರ ಬೆಳಿಗ್ಗೆ ಜೆರುಸಲೆಮ್ ಪ್ರವೇಶದ್ವಾರದಲ್ಲಿ ನಡೆದ ಭಯೋತ್ಪಾದಕ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲಿನ ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಪೊಲೀಸರ ಪ್ರಕಾರ, ಬೆಳಿಗ್ಗೆ 7:40 ರ ಸುಮಾರಿಗೆ ರಾಜಧಾನಿಯ ಮುಖ್ಯ ದ್ವಾರದಲ್ಲಿರುವ ವೈಜ್‌ಮನ್ ಸ್ಟ್ರೀಟ್‌ನಲ್ಲಿ ಇಬ್ಬರು ಪ್ಯಾಲೇಸ್ಟಿನಿಯನ್ ಬಂದೂಕುಧಾರಿಗಳು ವಾಹನದಿಂದ ಇಳಿದು ಬಸ್ ನಿಲ್ದಾಣದಲ್ಲಿ ಜನರ ಮೇಲೆ ಗುಂಡು ಹಾರಿಸಿದರು. ಈ […]

ಹೆಜಮಾಡಿ ಮೀನುಗಾರಿಕಾ ಬಂದರಿಗಾಗಿ ಮರಗಳ ತೆರವು: ಡಿ. 15 ರಂದು ಅಹವಾಲು ಸಭೆ

ಹೆಜಮಾಡಿ: ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಕೋಡಿ ಎಂಬಲ್ಲಿ ಸರಕಾರಿ ಪರಂಬೋಕು ಸ್ಥಳದಲ್ಲಿ ಮೀನುಗಾರಿಕಾ ಬಂದರಿನ ನಿರ್ಮಾಣ ಕಾಮಗಾರಿಗೆ ಅಡಚಣೆಯಾಗುವ ಒಟ್ಟು 192 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಡಿಸೆಂಬರ್ 15 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ವಲಯ ಅರಣ್ಯ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ […]

ತುರ್ತು ಸಂದರ್ಭದಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯವಾಣಿ

ಉಡುಪಿ: ಹಿರಿಯ ನಾಗರಿಕರು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸಾರಿಕವಾಗಿ ಹಾಗೂ ಮಾನಸಿಕವಾಗಿ ದೌರ್ಜನ್ಯ, ಕಿರುಕುಳ, ಹಿಂಸೆ, ಶೋಷಣೆ, ಕೌಟುಂಬಿಕ ಸಮಸ್ಯೆ, ಮಕ್ಕಳ ಬೇಜವಾಬ್ದಾರಿತನ, ದುರ್ಬಲತೆ, ಅಸಹಾಯಕತೆ, ಅಭದ್ರತೆ ಮುಂತಾದ ಅನೇಕ ಅನ್ಯಾಯ, ಸಮಸ್ಯೆಗಳಿಂದ ರಕ್ಷಣೆಯಿಲ್ಲದ ಸಂದಿಗ್ಧ ಮತ್ತು ಸಂಕಷ್ಟ ಪರಿಸ್ಥಿತಿಗೆ ಒಳಗಾಗಿದ್ದಲ್ಲಿ ಅಂತಹ ತುರ್ತು ಸಂದರ್ಭದಲ್ಲಿ ಹಿರಿಯ ನಾಗರಿಕರ ಉಚಿತ ಸಹಾಯವಾಣಿ ಸಂಖ್ಯೆ: 1090 ಅಥವಾ ದೂ.ಸಂಖ್ಯೆ: 0820-2526394 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ […]

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು-ಗೆಲುವನ್ನು ಸಮಾನವಾಗಿ ಕಾಣಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆವಿದ್ಯಾಕುಮಾರಿ ಹೇಳಿದರು. ಅವರು ಬುಧವಾರದಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಪೊಲೀಸ್ ಇಲಾಖೆ ಉಡುಪಿ ವತಿಯಿಂದ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಒಂದು ದಿನವನ್ನು ಕ್ರೀಡಾ ಚಟುವಟಿಕೆಗಾಗಿ ಮೀಸಲಿಡುವುದರಿಂದ ಅವರ ಮನೋಲ್ಲಾಸ […]