ಸಂಶೋಧನಾ ವರದಿ : ಗ್ಯಾಸ್ – ಡೀಸೆಲ್ಗಿಂತ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಅಧಿಕ
ಸ್ಯಾನ್ ಫ್ರಾನ್ಸಿಸ್ಕೋ: ಲಾಭರಹಿತ ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ (Consumer Reports) ವರದಿಯ ಪ್ರಕಾರ, ಆಂತರಿಕ ದಹನ ಎಂಜಿನ್ (ಐಸಿಇ) ನಿಂದ ಚಾಲಿತ ಕಾರುಗಳಿಗಿಂತ ಹೈಬ್ರಿಡ್ ಮಾದರಿಗಳು ಶೇಕಡಾ 26 ರಷ್ಟು ಕಡಿಮೆ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದೆ. ಆಂತರಿಕ ದಹನ ಅಂದರೆ ಅನಿಲ ಮತ್ತು ಡೀಸೆಲ್ ಚಾಲಿತ ವಾಹನಗಳು ಎಂದರ್ಥ. ಗ್ಯಾಸ್ ಅಥವಾ ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ (ಇವಿ) ನಿರ್ವಹಣಾ ವೆಚ್ಚ ಶೇಕಡಾ 79 ರಷ್ಟು ಹೆಚ್ಚು ಹಾಗೂ ಪ್ಲಗ್ – ಇನ್ […]
ಕೇಂದ್ರ ಸರ್ಕಾರ ಆರೋಪ : ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರ ಅವಕಾಶ
ನವದೆಹಲಿ: ‘ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರವಾಗಿ ಭಾರತದ ಜೊತೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದುಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಕೇಂದ್ರ ಸರ್ಕಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಕೆನಡಾ ವಿರುದ್ಧ ಭಾರತ ಸರ್ಕಾರ ಗಂಭೀರ ಆರೋಪ ಮಾಡಿದೆ. ಆ ದೇಶದಲ್ಲಿ ಭಾರತ ವಿರುದ್ಧದ ಉಗ್ರ ಕೃತ್ಯಗಳಿಗೆ ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ಟೀಕಿಸಿದೆ. ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ […]
ಅಗ್ನಿ ದುರಂತದಲ್ಲಿ ಏಳು ಕಾರ್ಮಿಕರು ಸಾವು: ಮೃತರ ಕುಟುಂಬಗಳಿಗೆ 50 ಲಕ್ಷ ಪರಿಹಾರ ಘೋಷಿಸಿದ ಕಂಪನಿ
ಗುಜರಾತ್ನ ಸೂರತ್ ನಗರದ ಈಥರ್ ಇಂಡಸ್ಟ್ರೀಸ್ ಲಿಮಿಟೆಡ್ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಏಳು ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಸೂರತ್ (ಗುಜರಾತ್): ಗುಜರಾತ್ನ ಸೂರತ್ ನಗರದ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿ, ಏಳು ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಇನ್ನೂ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ಕಂಪನಿಯು ತಲಾ 50 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇಲ್ಲಿನ ಸಚಿನ್ ಜಿಐಡಿಸಿ […]
ಅಂತಿಮ ಕ್ಷಣದಲ್ಲಿ ಮಹತ್ವದ ನಿರ್ಣಯ: ಇಸ್ರೇಲ್, ಹಮಾಸ್ ಕದನ ವಿರಾಮ ವಿಸ್ತರಣೆ
“ಸ್ವಲ್ಪ ಸಮಯದ ಹಿಂದೆ” ಬಿಡುಗಡೆ ಮಾಡಲು ಹಮಾಸ್ ಇಸ್ರೇಲ್ಗೆ ಮಹಿಳೆಯರು ಮತ್ತು ಮಕ್ಕಳ ಒತ್ತೆಯಾಳುಗಳ ಹೊಸ ಪಟ್ಟಿಯನ್ನು ನೀಡಿದ ನಂತರ ಗಾಜಾ ಕದನ ವಿರಾಮವನ್ನು ವಿಸ್ತರಿಸಲಾಗಿದೆ ಎಂದು ಇಸ್ರೇಲ್ ಹಯೋಮ್ ಪತ್ರಿಕೆ ಪ್ರಧಾನ ಮಂತ್ರಿ ಕಚೇರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ, ನವೆಂಬರ್ 24 ರಂದು ಪ್ರಾರಂಭವಾದ ಕದನ ವಿರಾಮವು ಮೂಲತಃ ಸೋಮವಾರದಂದು ಮುಕ್ತಾಯಗೊಳ್ಳಬೇಕಿತ್ತು.ಮೂಲಗಳ ಪ್ರಕಾರ ಉಭಯ ಪಡೆಗಳ ಮಧ್ಯವರ್ತಿ ಕತಾರ್ ಪ್ರಕಾರ, ಇಸ್ರೇಲ್-ಹಮಾಸ್ ಯುದ್ಧದಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಮತ್ತೊಂದು ದಿನ ವಿಸ್ತರಿಸಲಾಗಿದೆ. ಕದನ ವಿರಾಮದ ಅವಧಿ […]
ಇಂಗ್ಲೆಂಡ್ ಸೇರಿ 8 ತಂಡಗಳಿಗೆ ಅರ್ಹತೆ: ಚಾಂಪಿಯನ್ಸ್ ಟ್ರೋಫಿ 2025
ಇಂಗ್ಲೆಂಡ್ ಅತ್ಯಂತ ಪ್ರಬಲ ತಂಡವಾಗಿತ್ತು. ಆದರೆ ಈ ಬಾರಿ ಎಂತಹ ಕಳಪೆ ಪ್ರದರ್ಶನ ನೀಡಿತೆಂದರೆ, ಕೊನೆಯ ಸ್ಥಾನಕ್ಕೆ ಹೋಗಿತ್ತು. ಕಡೆಯಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 7ನೇ ಸ್ಥಾನಿಯಾಗಿ ಬಚಾವಾಯಿತು. ಬಾಂಗ್ಲಾದೇಶದ್ದೂ ಇಲ್ಲಿ ಕಳಪೆ ಪ್ರದರ್ಶನ. ಅಚ್ಚರಿಯೆಂದರೆ ಅಫ್ಘಾನಿಸ್ತಾನ ಆಡಿದ ರೀತಿ, ಅದ್ಭುತವಾಗಿ ಆಡಿ ಚಾಂಪಿಯನ್ಸ್ ಲೀಗ್ಗೆ ನೇರ ಅರ್ಹತೆ ಪಡೆಯಿತು. ಶ್ರೀಲಂಕಾ ಮಾತ್ರ ಮತ್ತೆ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗೆ ಇಳಿದಿದೆ.ಏಕದಿನ ವಿಶ್ವಕಪ್ನ ಲೀಗ್ ಹಂತದಲ್ಲಿ ಯಾವ ತಂಡಗಳು ಅಗ್ರ 8ರಲ್ಲಿ ಸ್ಥಾನ ಪಡೆದಿವೆಯೋ, ಅವು […]