ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೃಹಿಣಿಯರಿಗಾಗಿ ಕಥಾಗೋಷ್ಠಿ
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಡಿಸೆ೦ಬರ್ 30, ಶನಿವಾರದಂದು ನಡೆಯಲಿರುವ ಉಡುಪಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಗೃಹಣಿಯರಿಗಾಗಿ ಕಥಾಗೋಷ್ಠಿ ಆಯೋಜಿಸಿದ್ದು ಆಸಕ್ತ ಗೃಹಿಣಿಯರು ಪೋಸ್ಟ್ ಕಾರ್ಡ್ ಮೂಲಕ ತಮ್ಮ ಅಡುಗೆಮನೆ ವಾರ್ತೆಯ ಕಥೆಗಳನ್ನು ಡಿಸೆಂಬರ್ 2 ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಸಬಹುದು. ಆಯ್ದ ಆರು ಕಥೆಗಳ ಲೇಖಕಿಯರಿಗೆ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಭಾಗವಹಿಸಿ ಕಥೆಯನ್ನು ವಾಚಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗುವುದು. ಕಳುಹಿಸಬೇಕಾದ ವಿಳಾಸ: […]
ಕ್ರಿಯೇಟಿವ್ ‘ಆವಿರ್ಭವ್-2023’: ಕಾಲೇಜಿನ ವಾರ್ಷಿಕೋತ್ಸವ ಆಚರಣೆ
ಕಾರ್ಕಳ: ವಸುದೈವ ಕುಟುಂಬಕಂ ಪರಿಕಲ್ಪನೆಯ ಮೂಲಕ ಎಲ್ಲ ಭಾಷೆಗಳನ್ನು ಗೌರವಿಸುವ ಮತ್ತು ಪರಿಚಯಿಸುವ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ- ಆವಿರ್ಭವ್-2023, ನ. 25 ರಂದು ಹಿರ್ಗಾನದ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು. ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ, ಪ್ರಖರ ವಾಗ್ಮಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜೀವನದ ಎಲ್ಲ ಹಂತಗಳಲ್ಲಿ ಹೋರಾಟ ನಡೆಯುತ್ತದೆ. ಕಠಿಣ ಪರಿಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ, ಬಂದ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿದಾಗ ಯಶಸ್ಸು ಹಿಂಬಾಲಿಸಿ ಬರುತ್ತದೆ. ಸಾಧಕರ ಸಾಧನೆಗಳು ಕೇಳಲು […]
ವಿಶ್ವ ಮೀನುಗಾರರ ದಿನಾಚರಣೆ: ಮೀನಿನ ಉತ್ಪನ್ನಗಳ ಪ್ರದರ್ಶನದಲ್ಲಿ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿ ಭಾಗಿ
ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಮೀನುಗಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ, ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ, ಹಾಗೂ ಸ್ಕೊಡವೇಸ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕ ಕಂಪನಿಯು ಮೀನು ಉತ್ಪನ್ನಗಳ ಪ್ರದರ್ಶನದಲ್ಲಿ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹಾಗೂ ಇಲಾಖೆಯ ಅಧಿಕಾರಿಗಳು ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಮಳಿಗೆಯನ್ನು ವೀಕ್ಷಿಸಿದರು. ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ವಿಷ್ಣುಪ್ರಸಾದ್ ಕಂಪನಿಯ […]
ಕಾರ್ಕಳ: ಬಸ್ ಗೆ ಡಿಕ್ಕಿ ಹೊಡೆದ ಬೈಕ್; ಬೈಕ್ ಚಾಲಕ ಸಾವು ಸಹಸವಾರ ಗಂಭೀರ
ಕಾರ್ಕಳ: ಯರ್ಲಪಾಡಿ – ಗೋವಿಂದೂರು ಕಡೆಯಿಂದ ಬರುತ್ತಿದ್ದ ಬಸ್ ಒಂದಕ್ಕೆ ಕಾರ್ಕಳದೆಡೆಗೆ ಸಾಗುತ್ತಿದ್ದ ಬೈಕೊಂದು ಬೈಲೂರು ಹೈಸ್ಕೂಲ್ ಕಡೆ ಸಾಗುವ ತಿರುವಿನಲ್ಲಿ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರ ಸ್ಥಿತಿಯಲ್ಲಿದ್ದಾರೆ. ನ. 27 ರಂದು ನಾಗರಾಜ್ ಎಂಬವರು ಸಹ ಸವಾರ ಮಂಜು ಅವರ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದು ಈ ವೇಳೆ ಅಪಘಾತ ಸಂಭವಿಸಿದೆ. ಮಂಜು ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇವರು ಪಳ್ಳಿಯ ಕೋಕಾಯಿಕಲ್ […]