ಇಸ್ರೇಲ್ ಸೇನಾಪಡೆ ಮುಖ್ಯಸ್ಥ: ಕದನ ವಿರಾಮದ ನಂತರ ಮತ್ತೆ ಯುದ್ಧ ಆರಂಭಿಸುತ್ತೇವೆ
ಟೆಲ್ ಅವೀವ್ : “ಐಡಿಎಫ್ ತನ್ನ ಸಿದ್ಧಾಂತಗಳನ್ನು ಪಾಲಿಸುತ್ತ ಅದೇ ಸಮಯದಲ್ಲಿ ನಮ್ಮ ಜನರ ಜೀವಗಳನ್ನು ರಕ್ಷಿಸಲು ತೀವ್ರವಾಗಿ ಹೋರಾಡಲಿದೆ. ಈ ಕದನ ವಿರಾಮದ ಸಮಯದಲ್ಲಿ ಒತ್ತೆಯಾಳಾಗಿರುವ ಮಕ್ಕಳು ಮತ್ತು ತಾಯಂದಿರ ಮೊದಲ ಗುಂಪಿನ ಬಿಡುಗಡೆಗಾಗಿ ನಾವು ಅವಕಾಶ ಮಾಡಿದ್ದೇವೆ” ಎಂದು ಹಾಲೆವಿ ಹೇಳಿದರು. ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಕೊನೆಗೊಂಡ ಬಳಿಕ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಮತ್ತಷ್ಟು ಪ್ರಬಲವಾಗಿ ಹೋರಾಟ ಆರಂಭಿಸಲಿದೆ ಎಂದು ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಸೈನಿಕರಿಗೆ […]
ಕೇಂದ್ರ ಸಚಿವ ಜೋಶಿ ಮಾಹಿತಿ : ಹುಬ್ಬಳ್ಳಿ-ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೇವೆ ಪುನಾರಂಭ
ಹುಬ್ಬಳ್ಳಿ: ರೈಲ್ವೆ ಇಲಾಖೆ ಕಳೆದ ವಾರ ಈ ರೈಲು ಸೇವೆಯನ್ನು ರದ್ದು ಮಾಡಿತ್ತು. ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ರೈಲು ಸೇವೆಯನ್ನು ಪುನಾರಂಭಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಮನವಿ ಮಾಡಿದ್ದವು.ಹುಬ್ಬಳ್ಳಿ -ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಿಶೇಷ ಸೂಪರ್ಫಾಸ್ಟ್ ರೈಲು ಸೇವೆಯನ್ನು ಪುನಾರಂಭಿಸಲಾಗಿದೆ. ವಂದೇ ಭಾರತ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ: ಬೆಂಗಳೂರು-ಧಾರವಾಡ ಮಧ್ಯೆ ಕಡಿಮೆ ಸಮಯದಲ್ಲಿ ಪ್ರಯಾಣ ಬೆಳೆಸಲು […]
ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ : ನಾಳೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಈ ಜನತಾ ದರ್ಶನ ನಡೆಸಲಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಚಿವಾಲಯ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್ ಅವರು ಇಂದು ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.ನಾಳೆ (ಸೋಮವಾರ) ಸಿಎಂ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಜನಸ್ಪಂದನ ಕಾರ್ಯಕ್ರಮ ಆರಂಭವಾಗಲಿದೆ. […]
ಆಟೋ ಚಾಲಕ ಸೇರಿ ಇಬ್ಬರ ಸೆರೆ : ಐಎಸ್ಐ ಪರ ಗೂಢಚಾರಿಕೆ, ಭಾರತೀಯ ಸೇನೆಯ ಗೌಪ್ಯ ಮಾಹಿತಿ ರವಾನೆ
ಲಖನೌ (ಉತ್ತರ ಪ್ರದೇಶ): ಪಂಜಾಬ್ನ ಭಟಿಂಡಾ ಮೂಲದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್ (25) ಮತ್ತು ಗಾಜಿಯಾಬಾದ್ನ ಭೋಜ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಫರೀದ್ನಗರ ನಿವಾಸಿ ರಿಯಾಜುದ್ದೀನ್ (36) ಎಂಬುವವರೇ ಬಂಧಿತರು. ಇದರಲ್ಲಿ ಅಮೃತ್ ಗಿಲ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಪೊಲೀಸರು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗೆ ಹಣಕಾಸಿಗಾಗಿ ಗೂಢಚಾರಿಕೆ ಮಾಡುತ್ತಿದ್ದ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.ಉತ್ತರ ಪ್ರದೇಶದಲ್ಲಿ […]
ದೇಶದ ಜನತೆಗೆ ಪಿಎಂ ಮೋದಿ ಕರೆ : ಒಂದು ತಿಂಗಳ ಕಾಲ ಕೇವಲ ಡಿಜಿಟಲ್ ಪಾವತಿಗಳನ್ನು ಮಾತ್ರ ಮಾಡಿ
ನವದೆಹಲಿ:ದೀಪಾವಳಿ ಸಂದರ್ಭದಲ್ಲಿ ನಗದು ರೂಪದಲ್ಲಿ ಪಾವತಿ ಮಾಡುವ ಪದ್ಧತಿ ನಿಧಾನವಾಗಿ ಕಡಿಮೆಯಾದ ಎರಡನೇ ವರ್ಷ ಇದಾಗಿದೆ ಎಂದು ಪ್ರಧಾನಿ ಹೇಳಿದರು. ಇದು ತುಂಬಾ ಉತ್ತೇಜನಕಾರಿಯಾಗಿದೆ ಎಂದು ಹೇಳಿದರು.ಹಬ್ಬದ ಋತುವಿನಲ್ಲಿ ನಗದು ಪಾವತಿಯಲ್ಲಿನ ಕುಸಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಐ ಅಥವಾ ಯಾವುದೇ ಡಿಜಿಟಲ್ ಮಾಧ್ಯಮದ ಮೂಲಕ ಮಾತ್ರ ಪಾವತಿಗಳನ್ನು ಮಾಡಿ ಮತ್ತು ಒಂದು ತಿಂಗಳವರೆಗೆ ಹಣವನ್ನು ಬಳಸದಂತೆ ಜನರನ್ನು ಒತ್ತಾಯಿಸಿದರು.ಒಂದು ತಿಂಗಳ ನಂತರ ತಮ್ಮ ಅನುಭವಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲು ಅವರು […]