ಉಡುಪಿ: ನ. 29 ರಂದು ಜೀವ ರಕ್ಷಕ ತರಬೇತಿಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಉಡುಪಿ: ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಬೀಚ್, ಆಸರೆ ಬೀಚ್, ಮಲ್ಪೆ ಬೀಚ್, ಕಾಪು ಬೀಚ್ ಹಾಗೂ ಪಡುಬಿದ್ರಿ ಮುಖ್ಯ ಬೀಚ್‌ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯ ವತಿಯಿಂದ 20 ಜನರಿಗೆ ಜೀವ ರಕ್ಷಕ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮುಂಚಿತವಾಗಿ ನವೆಂಬರ್ 29 ರಂದು ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು. ಆಸಕ್ತ ಕನಿಷ್ಟ 18 ರಿಂದ 45 ವರ್ಷದೊಳಗಿನ, ಎಸ್.ಎಸ್.ಎಲ್.ಸಿ […]

16 ಮಿಲಿಯನ್ ಕಿಲೋಮೀಟರ್ ದೂರದ ಅಂತರಿಕ್ಷದಿಂದ ಭೂಮಿಗೆ ಬಂತು ಲೇಸರ್ ಸಂದೇಶ!! ಆಳ ಬಾಹ್ಯಕಾಶದಿಂದ ಬಂದ ‘ಪ್ರಥಮ ಬೆಳಕು’!

ವಾಷಿಂಗ್ಟನ್ ಡಿಸಿ: ಒಂದು ಅದ್ಭುತ ಸಾಧನೆಯಲ್ಲಿ, ಭೂಮಿಯು 16 ಮಿಲಿಯನ್ ಕಿಲೋಮೀಟರ್ ಅಥವಾ 10 ಮಿಲಿಯನ್ ಮೈಲುಗಳ ದೂರದಿಂದ ಲೇಸರ್ ಕಿರಣದ ಸಂವಹನವನ್ನು ಪಡೆದುಕೊಂಡಿದೆ. NASA ದ ಪ್ರಕಾರ, ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 40 ಪಟ್ಟು ಹೆಚ್ಚು ದೂರದಿಂದ ಮೊದಲನೆ ಬಾರಿಗೆ ಆಪ್ಟಿಕಲ್ ಸಂವಹನಗಳ ಅತಿದೂರದ ಸಂವಹನ ನಡೆದಿದೆ. ನಾಸಾದ ಸೈಕೆ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿದ್ದ ಡೀಪ್ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ (DSOC) ಉಪಕರಣದಿಂದ ಈ ಪ್ರಯೋಗವನ್ನು ಸಾಧ್ಯವಾಗಿದೆ. ಅಕ್ಟೋಬರ್ 13 ರಂದು ಫ್ಲೋರಿಡಾದ […]

ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ: ಶ್ರೀಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ತೆಪ್ಪೋತ್ಸವ ಹಾಗೂ ಲಕ್ಷದೀಪೋತ್ಸವ ಪ್ರಾರಂಭಗೊಂಡಿತು. ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಉತ್ಥಾನದ್ವಾದಶಿಯ ಸಾಯಂಕಾಲ ಪರ್ಯಾಯ ಶ್ರೀಕೃಷ್ಣಾಪುರ ಮಠ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಪಲಿಮಾರು ಮಠ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಮಠ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಶ್ರೀರಾಜರಾಜೇಶ್ವರತೀರ್ಥ ಸ್ವಾಮೀಜಿ ಹಾಗೂ ಶೀರೂರು ಮಠ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆಯನ್ನು ಮಾಡಿ ಕ್ಷೀರಾಬ್ಧಿಯನ್ನು ನೆರವೇರಿಸಿದರು.

ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಮತ್ತೊಂದು ಅಡಚಣೆ: ಲೋಹದ ವಸ್ತುವಿಗೆ ಅಪ್ಪಳಿಸಿದ ಕೊರೆಯುವ ಯಂತ್ರ

ನವದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶುಕ್ರವಾರ ಹದಿಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತೊಂದು ಹಿನ್ನಡೆ ಎದುರಿಸಿದೆ. ಅಧಿಕಾರಿಗಳು ತಾಂತ್ರಿಕ ಅಡಚಣೆಯನ್ನು ಪರಿಹರಿಸಿ ಕೊರೆಯುವಿಕೆಯನ್ನು ಪುನರಾರಂಭಿಸಿದ ಸ್ವಲ್ಪ ಸಮಯದ ನಂತರ, ಡ್ರಿಲ್ಲಿಂಗ್ ಯಂತ್ರವು ಸಂಜೆ ಲೋಹದ ವಸ್ತುವಿಗೆ ಅಪ್ಪಳಿಸಿದ್ದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಎರಡು ದಿನಗಳಲ್ಲಿ ಅಂತಹ ಎರಡನೇ ಹಿನ್ನಡೆಯಲ್ಲಿ, 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಸುರಂಗದಲ್ಲಿ ಶುಕ್ರವಾರ ಸಂಜೆ ಕೊರೆಯುವ ಯಂತ್ರವು ಲೋಹದ ವಸ್ತುವನ್ನು ಎದುರಿಸಿದ ನಂತರ ಕೊರೆಯುವುದನ್ನು ನಿಲ್ಲಿಸಬೇಕಾಯಿತು. […]

ಮಮ್ಮಿ ಡಿಜಿಟಲ್ ವತಿಯಿಂದ 4ನೇ ವರ್ಷದ ಮಕ್ಕಳ ಫೋಟೋ ಸ್ಪರ್ಧೆ

ಉಡುಪಿ: ಮಮ್ಮಿ ಡಿಜಿಟಲ್ ನೇತೃತ್ವದಲ್ಲಿ 4ನೇ ವರ್ಷದ ಮಕ್ಕಳ ಫೋಟೋ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು. ಜಿಲ್ಲೆಯ 75ಕ್ಕೂ ಅಧಿಕ ಮಕ್ಕಳ ಫೋಟೋಗಳು ಸ್ಪರ್ಧೆಗೆ ಬಂದಿದ್ದವು. SKPA ಉಡುಪಿ ವಲಯದ ಮಾಜಿ ಅಧ್ಯಕ್ಷ, ಪತ್ರಕರ್ತ ಜನಾರ್ದನ ಕೊಡವೂರು ಮತ್ತು ಖ್ಯಾತ ಫೋಟೋಗ್ರಾಫರ್ ಸಂತೋಷ್ ಕೊರಂಗ್ರಪಾಡಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ತೀರ್ಪುಗಾರರನ್ನು ಗೌರವಿಸಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ ಪ್ರೇಮ್ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಫೋಟೋಗ್ರಾಫರ್ […]