ಕಾಸರಗೋಡು: ದಿವಾಕರ ಬಿ ಶೆಟ್ಟಿ ಕಳತ್ತೂರು ಇವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಗಡಿನಾಡ ಸಾಹಿತ್ಯ ಅಕಾಡೆಮಿ (ರಿ) ಕಾಸರಗೋಡು ಇವರ ಆಶ್ರಯದಲ್ಲಿ ನಡೆದ 2023 ರ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಳತ್ತೂರು ದಿವಾಕರ ಬಿ ಶೆಟ್ಟಿ ಭಾಜನರಾಗಿದ್ದಾರೆ. ಪತ್ರಿಕೋದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿಇವರ ಸಾಧನೆಯನ್ನು ಕಂಡು ಈ ಪ್ರಶಸ್ತಿ ನೀಡಿದ್ದಾರೆ. ಸಂಸದ ರಮೇಶ್ ಚಂದ್ರಪ್ಪ ಜಿಗಜಿಣಗಿ ಇವರು ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ, ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಾಯಿ ಶ್ರೀ ಕ್ಷೇತ್ರ ಒಡಿಯೂರು, ಮಂಜೇಶ್ವರ […]

ನ. 28 ರಿಂದ 1ರ ವರೆಗೆ ಶೆಫಿನ್ಸ್ ವತಿಯಿಂದ ಶಾಲಾ ಶಿಕ್ಷಕರಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ

ಉಡುಪಿ: ಉಡುಪಿಯ ಶೆಫಿನ್ಸ್ ಎಜುಕೇಶನಲ್ ಎಂಡ್ ಚಾರಿಟೇಬಲ್ ವತಿಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮವು ನಗರದಲ್ಲಿ ನ. 28 ರಿಂದ 1ರ ವರೆಗೆ (ಒಟ್ಟು 4 ದಿನ) ನಡೆಯಲಿರುವುದು. ಈ ತರಬೇತಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈ ಶೈಕ್ಷಣಿಕ ವರ್ಷದ ಕೊನೆಯ ತರಬೇತಿಯಾಗಿದೆ. ತರಬೇತಿಗೆ ತಮ್ಮ ಶಾಲಾ ಅತಿಥಿ ಹಾಗೂ ಗೌರವ ಶಿಕ್ಷಕರನ್ನು ಕಳುಹಿಸಲು ಆಸಕ್ತರಿರುವ ಶಾಲಾ ಮುಖ್ಯಸ್ಥರುಗಳು ನ. 24 […]