ನೇಜಾರು ಹತ್ಯೆ ಪ್ರಕರಣ: ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ
ಉಡುಪಿ: ಇಲ್ಲಿನ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯು ಪ್ರವೀಣ್ ಚೌಗುಲೆ ಮೃತ ಅಯ್ನಾಜ್ ನ ಮನೆಯ ವಿಳಾಸವನ್ನು ಆಕೆಯ ಸ್ನ್ಯಾಪ್‌ಚಾಟ್ ಖಾತೆಯ ಮೂಲಕ ಟ್ರ್ಯಾಕ್ ಮಾಡಿದ್ದ ಎಂದು ಮಾಹಿತಿ ನೀಡಿದ್ದಾರೆ. ಪ್ರವೀಣ್ ಚೌಗುಲೆಯನ್ನು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 5 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಹಿರಿಯಡ್ಕ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗಲೆ, […]
ನ. 30 ರಿಂದ ಡಿಸೆಂಬರ್ 2 ರವರೆಗೆ “ನಡಿಗೆ” ಅಭಿಯಾನ: ಹಳೆ ಪಾದರಕ್ಷೆಗಳಿಗೆ ಹೊಸ ಕಾಯಕಲ್ಪ ನೀಡಿ ಅಗತ್ಯವಿರುವ ಮಕ್ಕಳಿಗೆ ನೀಡುವ ಸದುದ್ದೇಶ
ಉಡುಪಿ: ನ. 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ “ನಡಿಗೆ” ಅಭಿಯಾನ ನಡೆಯಲಿದೆ. ಮೂವತ್ತೇಳು ವರ್ಷದ ಅವಿನಾಶ್ ಕಾಮತ್ ಅವರು ಸಾರ್ವಜನಿಕರಿಂದ ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸಿ ಅವುಗಳನ್ನು ಮರುಬಳಕೆ ಮಾಡುವ ಮತ್ತು ಹೊಸ ಪಾದರಕ್ಷೆಗಳನ್ನು ರಚಿಸುವ ನವಿ ಮುಂಬೈ ಮೂಲದ ‘ಗ್ರೀನ್‌ಸೋಲ್’ ಕಂಪನಿಗೆ ನೀಡಲಿದ್ದಾರೆ. ಗ್ರೀನ್‌ಸೋಲ್ ಕಂಪನಿಯು ಹಳೆಯ ಪಾದರಕ್ಷೆಗಳು ಬ್ಯಾಗ್‌ಗಳು, ಮ್ಯಾಟ್‌ಗಳು ಮತ್ತು ಪೌಚ್‌ಗಳನ್ನು ಮರುಬಳಕೆ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಇವುಗಳನ್ನು ದಾನವಾಗಿ ನೀಡುತ್ತದೆ. ವೃತ್ತಿಯಲ್ಲಿ ಈವೆಂಟ್ ಪ್ಲಾನರ್ ಮತ್ತು […]
ನಳ್ಳಿ ನೀರಿನ ಸಂಪರ್ಕ ಹಾಗೂ ಕೊಳವೆ ಬಾವಿ ಕೊರೆಯಲು ಅರ್ಜಿ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿರುವ ಬಜೆ ಡ್ಯಾಂನಲ್ಲಿ ಬೇಸಿಗೆ ಆರಂಭವಾದ ಹಿನ್ನೆಲೆ ನೀರಿನ ಶೇಖರಣಾ ಮಟ್ಟ ಕುಸಿಯುವ ಸಂಭವ ಇದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗಿರುವುದರಿಂದ ನಳ್ಳಿ ನೀರಿನ ಸಂಪರ್ಕ ಹಾಗೂ ಕೊಳವೆ ಬಾವಿ ಕೊರೆಯುವ ಬಗ್ಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ನಗರಸಭಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಮಾಬುಕಳ: ಫಾರ್ಚ್ಯೂನ್ ಅಕಾಡೆಮಿ ಆಂಡ್ ಚಾರಿಟೇಬಲ್ ಟ್ರಸ್ಟ್(ರಿ) ಆಡಳಿತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆಯು ನ.20 ರಂದು ಜರಗಿತು. ಮುಖ್ಯ ಅತಿಥಿಯಾಗಿ ಆಲ್ವಾಸ್ ಆಯುರ್ವಾಡ ಕಾಲೇಜಿನ ರಸಶಾಸ್ತ್ರ ವಿಭಾಗ್ದ ಪ್ರಾಧ್ಯಾಪಕ ಡಾ. ಬಿ ವಿಜಯಚಂದ್ರ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ನಾಯಕತ್ವವನ್ನು ಮೈಗೂಡಿಸಿಕೊಂಡು ತನ್ನ ಏಳಿಗೆಯೊಂದಿಗೆ ಇತರರ ಏಳಿಗೆಗೆ ಪಾತ್ರರಾಗಿ ಸಂಸ್ಥೆ ಹಾಗೂ ಸಮಾಜದ ಸರ್ವತೋಮುಖ ಶ್ರೇಯಸ್ಸಿಗೆ ಕಾರಣರಾಗಬೇಕು ಎಂದರು. ಕಾಲೇಜಿನ ಅಧ್ಯಕ್ಷ ತಾರನಾಥ್ ಶೆಟ್ಟಿ ಕಾರ್ಯಕ್ರಮದ […]
ಖಂಬದಕೋಣೆ: ತಾಲೂಕು ಮಟ್ಟದ ಯುವ-ಕವಿಗೋಷ್ಠಿ ಹಾಗೂವಿದ್ಯಾರ್ಥಿ-ಕವಿಗೋಷ್ಠಿ ಕಾರ್ಯಕ್ರಮ
ಖಂಬದಕೋಣೆ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬೈಂದೂರು ತಾಲೋಕು ಘಟಕ, ಪದವಿಪೂರ್ವ ಕಾಲೇಜು ಖಂಬದಕೋಣೆ ಸಹಯೋಗದಲ್ಲಿಬೈಂದೂರು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ರಘು ನಾಯ್ಕ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಯುವ-ಕವಿ ಗೋಷ್ಠಿ, ವಿದ್ಯಾರ್ಥಿ-ಕವಿ ಗೋಷ್ಠಿ ಜರಗಿತು. ಖಂಬದಕೋಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣಪತಿ ಅವಭ್ರತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಸುಧೀರ್ ದೇವಾಡಿಗರು ಮತ್ತು ಕಸಾಪ ಬೈಂದೂರು ಘಟಕದ ಸದಸ್ಯ,ಕಾರ್ಯಕ್ರಮದ ಸಂಘಟಕರೂ ಆದ ಕೆ.ಪುಂಡಲೀಕ ನಾಯಕರು ಆಶಯ ನುಡಿಗಳನ್ನಾಡಿದರು. […]