ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಇವರಿಗೆ ನುಡಿನಮನ

ಉಡುಪಿ: ಪದ್ಮನಾಭ ಬಾಲಕೃಷ್ಣ ಆಚಾರ್ಯ ಇವರು ಉಡುಪಿ ಯಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿ ರಾಜಕೀಯ ಜೀವನದಲ್ಲಿ ಮುಂದೆ ಸಾಗಿ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ತ್ರಿಪುರ, ಅರುಣಾಚಲ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸಂಘ ಪರಿವಾರ ಹಾಗೂ ಬಿಜೆಪಿಯ ಹಿರಿಯ ನಾಯಕ ಪದ್ಮನಾಭ ಬಾಲಕೃಷ್ಣ ಆಚಾರ್ಯರಿಗೆ ಉಡುಪಿ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಬುಧವಾರ ನುಡಿನಮನ ಸಲ್ಲಿಸಲಾಯಿತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಕಳುಹಿಸಿದ ಶ್ರದ್ಧಾಂಜಲಿ ಸಂದೇಶ ವಾಚಿಸಿದ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ […]

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 2023- 24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ರಾಷ್ಟಮಟ್ಟದ ವಾಲಿಬಾಲ್ ಆಟಗಾರ ಹಾಗೂ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿ ಸುದೀಪ್ ಶೆಟ್ಟಿ ಇಂದು ಉದ್ಘಾಟಿಸಿ, ಕ್ರೀಡೆ ವಿದ್ಯಾರ್ಥಿಗಳನ್ನು ದೈಹಿಕವಾಗಿ- ಮಾನಸಿಕವಾಗಿ ಸದೃಢನನ್ನಾಗಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕ್ರೀಡೆ ಅವಶ್ಯಕ ಎಂದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರಾಗಿಣಿ, ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ್ […]

ಮಂಗಳೂರು: ಬ್ಯಾಂಕ್‌ ಆಫ್ ಬರೋಡಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು: ಬ್ಯಾಂಕ್‌ ಆಫ್ ಬರೋಡಾ, ವಲಯಕಛೇರಿ, ಮಂಗಳೂರು ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ. ಎಸ್‌. ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಆಗಮಿಸಿ ಕನ್ನಡ ಭಾಷೆಯ ಸಾಹಿತ್ಯ ಶ್ರೀಮಂತಿಕೆಯ ಬಗ್ಗೆ ಮಾತನಾಡಿದರು. ಮಾತೃಭಾಷೆಯನ್ನು ಮುಂದಿನ ಪೀಳಿಗೆಗಳವರೆಗೂ ಉಳಿಸಿ ಬೆಳೆಸಿಕೊಂಡು ಬರುವಂತೆ ಹಾಗೂ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ತನ್ನದೇ ಆದ ಮಹತ್ವವಿರುವುದರಿಂದ ಬೇರೆ ಭಾಷೆಗಳನ್ನೂಕಲಿಯುವಂತೆ ಕರೆ ನೀಡಿದರು. ವಲಯ ಕಛೇರಿ ಮುಖ್ಯಸ್ಥೆ ಗಾಯತ್ರಿ ಆರ್‌ಮಾತನಾಡಿ ನಮ್ಮ ದೇಶದಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಭಾಷೆಗಳಿರುವುದರಿಂದ ನಮ್ಮ ಕೆಲಸದ […]

ನ. 28 ರಂದು ಮಂಗಳೂರಿನ ಪಿ.ಎ ಕಾಲೇಜಿನಲ್ಲಿ ‘ಕ್ಯಾಂಪಸ್‌ ಕ್ರೋಮಾ ಫೆಸ್ಟ್’

ಮಂಗಳೂರು: ನ. 28 ರಂದು ಮಂಗಳೂರಿನ ಪಿ.ಎ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಅಂತರ್‌ ಕಾಲೇಜು ‘ಕ್ಯಾಂಪಸ್‌ ಕ್ರೋಮಾ’ ಫೆಸ್ಟ್ ನಡೆಯಲಿದೆ. ರಸಪ್ರಶ್ನೆ, ಕಲಾತ್ಮಕ ಅಭಿವ್ಯಕ್ತಿ, ಟೆಕ್ ಪ್ರದರ್ಶನ, ಪ್ರಾಜೆಕ್ಟ್ ಪ್ರೆಸೆಂಟೇಶನ್, ಫುಡ್‌ಫೆಸ್ಟ್ ಮುಂತಾದುವುಗಳ ಸ್ಪರ್ಧೆಗಳು ನಡೆಯಲಿವೆ. ರಾಷ್ಟ್ರೀಯ ಮಟ್ಟದ ಈ ಫೆಸ್ಟ್ ನಲ್ಲಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿರುವರು. ಹೆಚ್ಚಿನ ಮಾಹಿತಿಗೆ www.pafgc.in ಜಾಲತಾಣ ಸಂಪರ್ಕಿಸಬಹುದು ಅಥವಾ 7676993741/7022090499 ಗೆ ಕರೆ ಮಾಡಬಹುದಾಗಿದೆ.

ಇಂದಿನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಉಚಿತ ತಪಾಸಣಾ ಕಾರ್ಯಕ್ರಮ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸಿದ್ದು, ಈ ಕಾರ್ಯಕ್ರಮದಡಿ 1 ವರ್ಷದಿಂದ ಪದವಿಪೂರ್ವ ಕಾಲೇಜು ವರೆಗಿನ ಮಕ್ಕಳಲ್ಲಿ ರಕ್ತಹೀನತೆಯನ್ನು ಪತ್ತೆಮಾಡಿ, ಚಿಕಿತ್ಸೆ ನೀಡಿ, ಅನುಸರಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ನ. 23 ರಂದು ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಪ್ರಥಮ ಹಂತದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನಲ್ಲಿ ಆರ್.ಬಿ.ಎಸ್.ಕೆ ತಂಡಗಳ ಮೂಲಕ ಮಕ್ಕಳಲ್ಲಿ ರಕ್ತಹೀನತೆ ತಪಾಸಣೆ ಕಾರ್ಯಕ್ರಮ ನಡೆಯಲಿರುವುದರಿಂದ […]